ಮುಂಡಗೋಡ ಪಟ್ಟಣದಲ್ಲಿ ಭಾರಿ ಮಳೆ ಗಾಳಿಗೆ ಇನ್ನಿಲ್ಲದ ಅವಾಂತರಗಳು, ಅವಘಡಗಳು ಸಂಭವಿಸಿವೆ. ಪಟ್ಟಣದ ಬಂಕಾಪುರ ರಸ್ತೆಯ PLD ಬ್ಯಾಂಕ್ ಹತ್ತಿರದ ಮೊಬೈಲ್ ಟವರ್ ಮಳೆ ಗಾಳಿಗೆ ಬಿದ್ದಿದೆ. ಅಲ್ದೆ ಹಲವು ಮನೆಗಳಿಗೆ ಹಾನಿಯಾಗಿದೆ. ಆದ್ರೆ, ಖಚಿತ ಮಾಹಿತಿಗಳು ಇನ್ನಷ್ಟೆ ಬರಬೇಕಿದೆ.
PLD ಬ್ಯಾಂಕ್ ಪಕ್ಕದಲ್ಲಿರುವ ಮೊಬೈಲ್ ಟವರ್ ಮಳೆಗಾಳಿಗೆ ಬಿದ್ದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಇನ್ನು ಇದ್ರಂತೆ ಪಟ್ಟಣದ ನೆಹರು ನಗರ, ಗಾಂಧಿನಗರದಲ್ಲಿ ಹಲವು ಮನೆಗಳ ಮೇಲ್ಚಾವಣಿಗಳು ಮಳೆಗಾಳಿಗೆ ಹಾರಿಹೋಗಿವೆ. ಅಲ್ದೆ, ಮರಗಳು ಮನೆಗಳ ಮೇಲೆ ಬಿದ್ದು ಹಾನಿಯಾಗಿದೆ.