ಶಿರಸಿ ಕಾಂಗ್ರೆಸ್ ಶಾಸಕ ಭೀಮಣ್ಣ ನಾಯ್ಕ್ ಮೇಲೆ ಜೇನು ದಾಳಿ, ಆಸ್ಪತ್ರೆಗೆ ದಾಖಲು..!

ಶಿರಸಿ ಕಾಂಗ್ರೆಸ್ ಶಾಸಕ ಭೀಮಣ್ಣ ನಾಯ್ಕ್ ಮೇಲೆ ಜೇನು ದಾಳಿಯಾಗಿದೆ. ಪರಿಣಾಮ ಶಿರಸಿಯ ಟಿಎಸ್ ಎಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.

ಕೆಂಗ್ರೆ ಹೊಳೆಯಲ್ಲಿ ನೀರಿನ ಪ್ರಮಾಣ ವೀಕ್ಷಣೆ ಮಾಡುತ್ತಿದ್ದ ವೇಳೆ ಜೇನುನೋಣಗಳು ಏಕಾಏಕಿ ದಾಳಿ ಮಾಡಿವೆ ಅಂತಾ ಮಾಹಿತಿ ಬಂದಿದೆ. ಹೀಗಾಹಿ ಶಾಸಕ ಭೀಮಣ್ಣ ನಾಯ್ಕ್ ಗೆ ಗಾಯವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಶಾಸಕರ ಜೊತೆಗಿದ್ದ ಹಲವರ ಮೇಲೂ ಜೇನು ನೋಣಗಳಿ ದಾಳಿ ಮಾಡಿದ್ದು, ಎಲ್ಲರಿಗೂ ಚಿಕಿತ್ಸೆ ನೀಡಲಾಗ್ತಿದೆ ಅನ್ನೋ ಮಾಹಿತಿ ಇದೆ.

error: Content is protected !!