ರೈತರೇ ಗಮನಿಸಿ: ಬೆಳೆ ಹಾನಿ ಪರಿಹಾರ ಕುರಿತ ಸಮಸ್ಯೆಗಳ ಪರಿಹಾರಕ್ಕೆ ಸಂಪರ್ಕಿಸಿ: ಅಪರ ಜಿಲ್ಲಾಧಿಕಾರಿ

ಕಾರವಾರ: ಬೆಳೆ ಹಾನಿ ಕುರಿತು ಬಿಡುಗಡೆಯಾದ ಪರಿಹಾರದ ಅನುದಾನ ರೈತರ ಖಾತೆಗೆ ಜಮಾ ಆದ ಬಗ್ಗೆ ಪರಿಶೀಲಿಸುವ ಕುರಿತು, ಹಾಗೂ ಅನುದಾನ ಜಮಾ ಆಗದೇ ಇರುವ ತಾಂತ್ರಿಕ ತೊಂದರೆಗಳನ್ನು ಹಾಗೂ ಬ್ಯಾಂಕ್‌ ಖಾತೆಯ ಕೆಲವೊಂದು ನ್ಯೂನತೆಗಳನ್ನು ಪರಿಹರಿಸುವ ಬಗ್ಗೆ ಜಿಲ್ಲೆಯ ಬರ ಪೀಡಿತ 11 ತಾಲ್ಲೂಕುಗಳಲ್ಲಿಯ ತಹಶೀಲ್ದಾರ ಕಚೇರಿಗಳಲ್ಲಿ ರೈತರ ಸಲಹಾ ಕೇಂದ್ರವನ್ನು ಸ್ಥಾಪಿಸಲಾಗಿದೆ.

ಸಂಬಂದಿಸಿದ ತಹಶೀಲ್ದಾರ ಕಚೇರಿಯನ್ನು ಈ ಕೆಳಗಿನ ದೂರವಾಣಿಗಳಲ್ಲಿ ಕಚೇರಿ ಸಮಯದಲ್ಲಿ ಸಂಪರ್ಕಿಸಿ ಮಾಹಿತಿಯನ್ನು ಪಡೆಯಬಹುದಾಗಿದ್ದು,ತಾಲ್ಲೂಕಿನ ಹೆಸರು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ ಇಲ್ಲಿದೆ.

1. ಕಾರವಾರ- 08382-223350
2 . ಅಂಕೋಲಾ- 08388-230243
3 . ಕುಮಟಾ- 08386-222054
4 . ಭಟ್ಕಳ – 08385-226422
5 . ಶಿರಸಿ- 08384-226383
6 . ಸಿದ್ದಾಪುರ- 08389-230127
7 . ಯಲ್ಲಾಪುರ – 9902571927
8 . ಮುಂಡಗೋಡ- 08301-222122
9. ಹಳಿಯಾಳ- 08284-220134
10. ಜೋಯಡಾ- 08284-282723
11. ದಾಂಡೇಲಿ- 08284-295959

ಈ ಕುರಿತು ಮಾದ್ಯಮ ಪ್ರಕಟಣೆ ಮೂಲಕ ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಾಜಪುತ್ ತಿಳಿಸಿದ್ದಾರೆ.

error: Content is protected !!