ಮುಂಡಗೋಡ ಪೊಲೀಸರು ಕಾರ್ಯಾಚರಣೆ ನಡೆಸಿ, ಪಟ್ಟಣದ ಎಪಿಎಂಸಿ ಹತ್ತಿರದ ಅರಣ್ಯ ಪ್ರದೇಶದಲ್ಲಿ ಇಸ್ಪೀಟು ಆಟದಲ್ಲಿ ತೊಡಗಿದ್ದವರನ್ನು ಎಳೆದು ತಂದಿದ್ದಾರೆ. ದಾಳಿಯ ವೇಳೆ ಇಬ್ಬರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಉಳಿದ ಎಂಟು ಜನರು ಪರಾರಿಯಾಗಿದ್ದಾರೆ.
ಇಸ್ಪೀಟು ಆಟದಲ್ಲಿ ತೊಡಗಿದ್ದ ವೇಳೆ ದಾಳಿ ಮಾಡಿದ ಪೊಲೀಸರಿಗೆ, ಮುಂಡಗೋಡಿನ
ರಾಘವೇಂದ್ರ ರಾಮಚಂದ್ರ ರಾಯ್ಕರ್, ನಿಸ್ಸಾರಾಹ್ಮದ್ ಮದರಸಾಬ ದರ್ಗಾವಾಲೆ ಸಿಕ್ಕಿಬಿದ್ದಿದ್ದಾರೆ. ಉಳಿದಂತೆ
ಲಾಲಸಾಬ್ ಇಟ್ಟಂಗಿ, ನಾಶೀರ ಬಂಕಾಪೂರ, ರಫೀಕ್ ಭಟ್ಕಳ್, ಅಲ್ಲಾಭಕ್ಷ ಹಿರೇಹಳ್ಳಿ, ಅಕ್ಬರಶಾ ಮೀರಾಶಿ, ಮೌಲಾಲಿ ಜಂಡೆವಾಲೆ, ಸೈಯದ್ ಹುಸೇನ್ ಯಳ್ಳೂರ್, ಇಸ್ಮಾಯಿಲ್ ಹಾನಗಲ್ ಎಂಬುವವರು ಪರಾರಿಯಾಗಿದ್ದು ಅವರ ಮೇಲೆ ಕೇಸು ದಾಖಲಾಗಿದೆ.
ಇನ್ನು ದಾಳಿವೇಳೆ 11,500 ರೂ ನಗದು ಸೇರಿದಂತೆ, ಆಟಕ್ಕೆ ಬಳಸಿದ ಪರಿಕರಗಳನ್ನು ವಶಕ್ಕೆ ಪಡೆಯಲಾಗಿದೆ.
ದಾಳಿಯಲ್ಲಿ ಮುಂಡಗೋಡ ಸಿಪಿಐ ರಂಗನಾಥ್ ನೀಲಮ್ಮನವರ್ ಮಾರ್ಗದರ್ಶನದಲ್ಲಿ ಕ್ರೈಂ ಪಿಎಸ್ಐ ಹನಮಂತ ಗುಡಗುಂಟಿ ನೇತೃತ್ವದಲ್ಲಿ ಪೇದೆಗಳಾದ ಮಾಂತೇಶ್ ಮುಧೋಳ, ಸಂಜು ರಾಠೋಡ್ , ಕೆಂಚಪ್ಪ ಜಾಲಿಕಟ್ಟಿ, ಬಸವರಾಜ್ ಒಡೆಯರ್, ಅನ್ವರ ಬಮ್ಮಿಗಟ್ಟಿ, ಶಿವಾನಂದ್ ದಾನನ್ನವರ್ ಭಾಗವಹಿಸಿದ್ದರು.