ಜಗದೀಶ್ ಶೆಟ್ಟರ್ ಸೇರಿ‌ ಮೂವರಿಗೆ ಪರಿಷತ್ ಟಿಕೆಟ್, ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ..!

ಜಗದೀಶ್ ಶೆಟ್ಟರ್ ಸೇರಿ‌ ಮೂವರಿಗೆ ಪರಿಷತ್ ಟಿಕೆಟ್, ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ..!

ಬೆಂಗಳೂರು: ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್, ಎನ್.ಎಸ್. ಬೋಸರಾಜ್ ಹಾಗೂ ತಿಪ್ಪಣ್ಣಪ್ಪ ಕಮಕನೂರ್ ಸೇರಿ ಮೂವರನ್ನು ಕಣಕ್ಕಿಳಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾಜು೯ನ ಖಗೆ೯ ಅವರು ಅಭ್ಯಥಿ೯ಗಳ ಆಯ್ಕೆ ಮಾಡಿ ಪಟ್ಟಿ ಬಿಡುಗಡೆಗೊಳಿಸಿದ್ದಾರೆ. ತಿಂಗಳಾಂತ್ಯದಲ್ಲಿ ನಡೆಯಲಿರುವ ಮೇಲ್ಮನೆ ಸದಸ್ಯತನಕ್ಕಾಗಿ ಚುನಾವಣೆ ನಡೆಯಲಿದ್ದು, ಶಾಸಕರಿಂದ ಮತದಾನ ನಡೆಯಲಿದೆ, ಹೀಗಾಗಿ ಬಹುತೇಕ ಕಾಂಗ್ರೆಸ್ ಅಭ್ಯಥಿ೯ಗಳಿಗೆ ಸುಲಭದ ಜಯ ಸಿಗುವ ಸಾಧ್ಯತೆ ಇದೆ.

ದೇವಿಮನೆ ಘಟ್ಟದಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ, ಗುರುತು ಸಿಕ್ಕರೆ  ಕರೆಮಾಡಿ ಮಾಹಿತಿ ನೀಡಿ..!

ದೇವಿಮನೆ ಘಟ್ಟದಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ, ಗುರುತು ಸಿಕ್ಕರೆ ಕರೆಮಾಡಿ ಮಾಹಿತಿ ನೀಡಿ..!

ಕುಮಟಾ: ತಾಲೂಕಿನ ಕತಗಾಲ ಸಮೀಪದ ದೇವಿಮನೆ ಘಟ್ಟದಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ. ಅಂದಾಜು, 26 ರಿಂದ 30 ವರ್ಷ ವಯಸ್ಸಿನ ಮಹಿಳೆಯ ಶವ ಪತ್ತೆಯಾಗಿದ್ದು, ಮಹಿಳೆಯ ಕೈ ಮೇಲೆ ಟ್ಯಾಟೂಗಳು ಇವೆ. ಬಹುಶಃ ಕೊಲೆ ‌ಮಾಡಿ ಬೀಸಾಡಿರೋ ಶಂಕೆ ಇದೆ. ಸದ್ಯ ಕುಮಟಾ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಮಹಿಳೆಯ ಗುರುತು ಪತ್ತೆಗೆ ಇಳಿದಿದ್ದಾರೆ. ತಮಗೇನಾದ್ರೂ ಈ ಮಹಿಳೆಯ ಗುರುತು ಸಿಕ್ಕರೆ ತಕ್ಷಣವೇ ಕುಮಟಾ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ವಿನಂತಿಸಿದ್ದಾರೆ. ಕುಮಟಾ ಪೋಲಿಸ್ ಠಾಣೆಯ ಈ ಕೆಳಗಿನ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದು. ದೂರವಾಣಿ ಸಂಖ್ಯೆ: 08386 222333

ಕುನ್ನೂರಿನ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿನಿ ಸಾವು, ನ್ಯಾಯ ಕೊಡಿಸುವಂತೆ ಮಾಜಿ ಸಿಎಂ ಕಾಲಿಗೆ ಬಿದ್ದು ಬೇಡಿಕೊಂಡ ಹೆತ್ತವರು, ಕರುಣೆನೇ ಇಲ್ವಾ ವ್ಯವಸ್ಥೆಗೆ..?

ಕುನ್ನೂರಿನ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿನಿ ಸಾವು, ನ್ಯಾಯ ಕೊಡಿಸುವಂತೆ ಮಾಜಿ ಸಿಎಂ ಕಾಲಿಗೆ ಬಿದ್ದು ಬೇಡಿಕೊಂಡ ಹೆತ್ತವರು, ಕರುಣೆನೇ ಇಲ್ವಾ ವ್ಯವಸ್ಥೆಗೆ..?

 ಶಿಗ್ಗಾವಿ: ತಾಲೂಕಿನ ಮಡ್ಲಿಯಲ್ಲಿ ಹೃದಯ ಕಲಕುವ ಘಟನೆ ನಡೆದಿದೆ. ಮಾಜಿ ಸಿಎಂ ಬೊಮ್ಮಾಯಿ ಕಾಲು ಬಿದ್ದ ಬಡ ‌ದಂಪತಿ ತಮ್ಮ ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಪರಿ ಪರಿಯಾಗಿ ಬೇಡಿಕೊಂಡಿದ್ದಾರೆ. ನಿರ್ದಯಿ, ನಿರ್ಲಜ್ಯ ವ್ಯವಸ್ಥೆಯಲ್ಲಿ ಪಾಪ, ಆ ಬಡ ಪೋಷಕರ ಆಕ್ರಂಧನ ಮಾತ್ರ ಉಳ್ಳವರಿಗೆ ಮೋಜಿನಂತಾಗಿ ಕಂಡಿತಾ..? ಆ ನೋವು, ಸಂಕಟ, ಛೇ..! ಅಂದಹಾಗೆ, ಅದು 2019 ರ, ಡಿಸೆಂಬರ್ 8 ರಂದು ಶಿಗ್ಗಾವಿ ತಾಲೂಕು ಕುನ್ನೂರಿನ ಕಸ್ತೂರಬಾ ವಸತಿ ನಿಲಯದಲ್ಲಿ ಅದೊಬ್ಬ ವಿದ್ಯಾರ್ಥಿನಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮಡ್ಲಿ ಗ್ರಾಮದ ಸಾವಕ್ಕ, ಅಶೋಕ್ ಮರಿಲಿಂಗಪ್ಪನವರ ದಂಪತಿ ಪುತ್ರಿ ದ್ಯಾಮವ್ವ ಎಂಬುವವಳು ದಾರುಣ ಸಾವು ಕಂಡಿದ್ದಳು. ಹೀಗಾಗಿ, ಈ ಸಾವು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿತ್ತು. ಅವತ್ತೇ ಹೆತ್ತವರು ನನ್ನ ಮಗಳ ಸಾವು ಅನುಮಾನದ ಸಾವು, ಇದರ ಬಗ್ಗೆ ಕೂಲಂಕೂಷ ತನಿಖೆ ಮಾಡಬೇಕು, ನನ್ನ ಮಗಳ ಸಾವಿಗೆ ಯಾರು ಕಾರಣವಾಗಿದ್ದಾರೋ ಅವ್ರಿಗೆ ತಕ್ಕ ಶಿಕ್ಷೆಯಾಗಬೇಕು ಅಂತಾ ಅಂಗಲಾಚಿ ಬೇಡಿಕೊಂಡಿದ್ದರು....

ದೈವಾಧೀನರಾದ ತಂದೆ ತಾಯಿಗಳ ಮೂರ್ತಿ ಕೆತ್ತಿ, ಮನೆಯಲ್ಲೇ ನಿತ್ಯವೂ ಪೂಜೆ ಮಾಡುವ ಅಪರೂಪದ ಮಗ..!

ದೈವಾಧೀನರಾದ ತಂದೆ ತಾಯಿಗಳ ಮೂರ್ತಿ ಕೆತ್ತಿ, ಮನೆಯಲ್ಲೇ ನಿತ್ಯವೂ ಪೂಜೆ ಮಾಡುವ ಅಪರೂಪದ ಮಗ..!

 ರಾಣೇಬೆನ್ನೂರು: ಸದ್ಯ ಜೊತೆಗಿದ್ದ ತಂದೆ ತಾಯಿಗಳನ್ನೇ ಸಾಕಿ ಸಲಹುವುದು ಮಕ್ಕಳಿಗೆ ಬೇಡವಾಗಿದೆ. ಜೀವಂತವಾಗಿದ್ದ ಹೆತ್ತವರನ್ನೇ ವೃದ್ದಾಶ್ರಮಗಳಿಗೆ ಬಿಟ್ಟು ಬಂದು ಲಲ್ಲೆ ಹೊಡೆಯುವ ಅದೇಷ್ಟೋ ಮಕ್ಕಳು ನಮ್ಮ ನಡುವೆ ಇದ್ದಾರೆ. ಇದರ ನಡುವೆ ಎಂದೋ ದಿವಂಗತರಾಗಿ ಹೋದ ತಂದೆ, ತಾಯಿ, ಅಜ್ಜ ಅಜ್ಜಿ ಸೇರಿದಂತೆ ಪೂರ್ವಿಕರನ್ನೇಲ್ಲ ಇಲ್ಲೊಬ್ಬ ಹೃದಯವಂತ ವ್ಯಕ್ತಿ, ಮೂರ್ತಿ ಮಾಡಿಟ್ಟು ನಿತ್ಯವೂ ಪೂಜೆ ಮಾಡ್ತಿದಾರೆ ಅನ್ನೋದು ಅಚ್ಚರಿಯಾದ್ರೂ ಸತ್ಯ. ಹೌದು, ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಅರೇಮಲ್ಲಾಪುರ ಗ್ರಾಮದಲ್ಲಿ ಹೀಗೊಬ್ಬ ಹೃದಯವಂತ ತನ್ನ ಹಿರಿಯರ ಸೇವೆಯನ್ನು ನಿರಂತರ ಮಾಡುತ್ತಿದ್ದಾರೆ. ಅರೇಮಲ್ಲಾಪುರ ಗ್ರಾಮದಲ್ಲಿ ಪಶುವೈದ್ಯ ವೃತ್ತಿಯಿಂದ ನಿವೃತ್ತಿ ಹೊಂದಿದ ಶಿವಪ್ಪ ನಿಂಗಪ್ಪ ದೊಡ್ಡಮನಿ ಅವರು, ತಮ್ಮ ತಂದೆ – ತಾಯಿಯ ಮೂರ್ತಿಗಳನ್ನ ತಮ್ಮ ಮನೆಯ ಪ್ರವೇಶ ದ್ವಾರದ ಬಲಭಾಗದಲ್ಲಿ ಇಟ್ಟು ಪ್ರತಿ ದಿನ ಭಕ್ತಿ ಪೂರ್ವಕ ಸೇವೆ ಸಲ್ಲಿಸ್ತಿದಾರೆ. ಇನ್ನು ತಂದೆ ತಾಯಿಯವರ ಮೂರ್ತಿಯನ್ನು ಸ್ವತಃ ತಾವೇ ತಮ್ಮ‌ಕೈಯಾರೇ ಕೆತ್ತಿ, ಮೂರ್ತಿ ರೂಪ ಕೊಟ್ಟಿರೋ ಶಿವಪ್ಪ ಪ್ರತಿದಿನವೂ ವಿಶೇಷ ಪೂಜಾ...

ಮುಂಡಗೋಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ವಿಧಿವಶ, ಹಲವರ ಸಂತಾಪ..!

ಮುಂಡಗೋಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ವಿಧಿವಶ, ಹಲವರ ಸಂತಾಪ..!

ಮುಂಡಗೋಡ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ನರಸಿಂಹ ಪರಮೇಶ್ವರ ಭಟ್ (56) ವಿಧಿವಶರಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರಾಂಶುಪಾಲರು ತಡರಾತ್ರಿ ನಿಧನರಾಗಿದ್ದಾರೆ ಅಂತಾ ತಿಳಿದು ಬಂದಿದೆ. ಮೂಲತಃ ಯಲ್ಲಾಪುರ ಪಟ್ಟಣದವರಾಗಿದ್ದ ನರಸಿಂಹ ಪರಮೇಶ್ವರ ಭಟ್, ಕಳೆದ 13 ವರ್ಷಗಳಿಂದ ಶಿರಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ಆ ನಂತರದಲ್ಲಿ ಕಳೆದ ಫೆಬ್ರುವರಿಯಲ್ಲಿ ಮುಂಡಗೋಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ವರ್ಗಾವಣೆಗೊಂಡಿದ್ದರು. ಅಲ್ದೇ ಫೆ. 7 ರಂದು ಮುಂಡಗೋಡ ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾಗಿ ನಿಯುಕ್ತಿಗೊಂಡಿದ್ದರು. ಪ್ರಾಂಶುಪಾಲರ ನಿಧನಕ್ಕೆ ಮುಂಡಗೋಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರು ಸೇರಿದಂತೆ ಸಿಬ್ಬಂದಿ ವರ್ಗ ಸಂತಾಪ ಸೂಚಿಸಿದೆ.

ರಾಮನಗರ ಪೊಲೀಸರ ಭರ್ಜರಿ ಕಾರ್ಯಾಚರಣೆ, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮರಳು ಜಪ್ತಿ..!

ರಾಮನಗರ ಪೊಲೀಸರ ಭರ್ಜರಿ ಕಾರ್ಯಾಚರಣೆ, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮರಳು ಜಪ್ತಿ..!

ರಾಮನಗರ: ಜೋಯಿಡಾ ತಹಶೀಲ್ದಾರ್ ಹಾಗೂ ರಾಮನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಮರಳು ವಶಪಡಿಸಿಕೊಂಡಿದ್ದಾರೆ. ಬರೋಬ್ಬರಿ 23 ಟಿಪ್ಪರ್ ನಷ್ಟು ಮರಳು ಜಪ್ತಿ ಪಡಿಸಿಕೊಂಡಿದ್ದು ಅಕ್ರಮಿಗಳ ಹೆಡೆಮುರಿ ಕಟ್ಟಿದ್ದಾರೆ. ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯ ವೈಜಗಾಂವ್, ಆಮ್ಸೆತ್, ಗೌಳಿವಾಡ ಮತ್ತು ಪಾಯಸವಾಡಿ ಗ್ರಾಮಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಸುಮಾರು 23 ಟಿಪ್ಪರ್ ನಷ್ಟು, ಅಂದಾಜು 3 ಲಕ್ಷ 30 ಸಾವಿರ ರೂಪಾಯಿ ಮೌಲ್ಯದ ಮರಳು ವಶಪಡಿಸಿಕೊಂಡಿದ್ದಾರೆ. ಜೋಯಿಡಾ ತಹಶೀಲ್ದಾರ್ ಬಸವರಾಜ ತೆರನಹಳ್ಳಿ ಮಾರ್ಗದರ್ಶನದಲ್ಲಿ ರಾಮನಗರ ಪಿಎಸ್ಐ ಬಸವರಾಜ್ ಮಬನೂರು, ಕೃಷ್ಣಕಾಂತ್ ಪಾಟೀಲ್ ನೇತೃತ್ವದಲ್ಲಿ ಕಂದಾಯ ಹಾಗೂ ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ದಾಳಿ ಮಾಡಿದ್ದು, ಮರಳು ವಶ ಪಡಿಸಿಕೊಳ್ಳಲಾಗಿದೆ‌. ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬಾರದ ಮಳೆಗಾಗಿ ಕಲಕೇರಿ ಗ್ರಾಮದ ಮಹಿಳೆಯರ ವಿಶೇಷ ಆಚರಣೆ, ಹುಯ್ಯೋ ಹುಯ್ಯೋ ಮಳೆರಾಯ ಅಂದ್ರು ಮಹಿಳೆಯರು..!

ಬಾರದ ಮಳೆಗಾಗಿ ಕಲಕೇರಿ ಗ್ರಾಮದ ಮಹಿಳೆಯರ ವಿಶೇಷ ಆಚರಣೆ, ಹುಯ್ಯೋ ಹುಯ್ಯೋ ಮಳೆರಾಯ ಅಂದ್ರು ಮಹಿಳೆಯರು..!

 ಮುಂಡಗೋಡ: ಜೂನ್ ತಿಂಗಳು ಕಳೆಯುತ್ತ ಬಂದರೂ ಮಳೆರಾಯನ ಆಗಮನ ಇನ್ನೂ ಆಗಿಲ್ಲದಿರುವುದು ತಾಲೂಕಿನ ಅನ್ನದಾತರಿಗೆ ಭಾರೀ ಆತಂಕ ತಂದಿಟ್ಟಿದೆ. ಬಹುತೇಕ ಬಿತ್ತನೆ ಕಾರ್ಯಕ್ಕೆ ಮಳೆರಾಯನ ಮುನಿಸಿನಿಂದ ಭಾರೀ ಅಡಚಣೆಯಾಗಿದೆ. ಕೆಲವು ಕಡೆ ಬೀಜ ಬಿತ್ತನೆ ಕಾರ್ಯ ಮಾಡಿದ್ದರೂ ಬೀಜ ಮೊಳಕೆಯೊಡೆಯಲು ನೀರಿನ ಅಭಾವ ತಲೆದೋರಿದೆ. ಹೀಗಾಗಿ, ತಾಲೂಕಿನ ಕಲಕೇರಿಯ ಮಹಿಳೆಯರು ಮಳೆಗಾಗಿ ವಿಶೇಷ, ವಿಶಿಷ್ಟ ಕಾರ್ಯ ಮಾಡಿದ್ದಾರೆ. ಕಪ್ಪೆಯ ಮೆರವಣಿಗೆ..! ಯಸ್, ಕಲಕೆರಿಯ ಮಹಿಳೆಯರು ಇಂದು ಬೆಳಗಿನಿಂದ ಮಳೆಗಾಗಿ ಕಪ್ಪೆಯ ಪೂಜೆ ಮಾಡಿ ಪ್ರಾರ್ಥಿಸಿದ್ದಾರೆ‌. ಮಳೆರಾಯನಿಗೆ ಹಾಡುಗಳ ಮೂಲಕ ಗ್ರಾಮದ ತುಂಬೇಲ್ಲ ಕಪ್ಪೆಗಳನ್ನು ಹೊತ್ತು ಮೆರವಣಿಗೆ ಮಾಡಿ ಮಳೆರಾಯ ದಯೆ ತೋರು ಅಂತಾ ಪ್ರಾರ್ಥಿಸಿದ್ದಾರೆ. ಕಪ್ಪೆಗಳನ್ನು ವಿಶೇಷ ಅಲಂಕೃತ ಬುಟ್ಟಿಯಲ್ಲಿ ಹೊತ್ತ ಮಹಿಳೆಯರು ಗ್ರಾಮದ ಮನೆ ಮನೆಗಳಿಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಕಪ್ಪೆ ಹೊತ್ತ ಮಹಿಳೆಗೆ ನೀರು ಸುರಿಯೊ ಮೂಲಕ ಮಳೆರಾಯನಿಗೆ ಆಮಂತ್ರಿಸಿದ್ದಾರೆ. ಪ್ರತೀತಿ..! ಅಸಲು, ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಮುನಿಸಿಕೊಂಡರೆ, ವಿಶೇಷವಾದ ಪೂಜೆ, ಸಂಪ್ರದಾಯಗಳನ್ನು ಮಾಡುತ್ತಾರೆ. ಅದ್ರಂತೆ,...

ಬಾಚಣಕಿ ಸಮೀಪ ಸ್ಕೂಟಿ ಅಪಘಾತ, ಮುಂಡಗೋಡಿನ ಉದಯ್ ಕುರ್ಡೇಕರ್ ಸಾವು..! ಯಮರೂಪಿ ರಸ್ತೆ ಗುಂಡಿಗೆ ಬಲಿಯಾದ್ರಾ ಉದಯ್..?

ಬಾಚಣಕಿ ಸಮೀಪ ಸ್ಕೂಟಿ ಅಪಘಾತ, ಮುಂಡಗೋಡಿನ ಉದಯ್ ಕುರ್ಡೇಕರ್ ಸಾವು..! ಯಮರೂಪಿ ರಸ್ತೆ ಗುಂಡಿಗೆ ಬಲಿಯಾದ್ರಾ ಉದಯ್..?

ಮುಂಡಗೋಡ: ತಾಲೂಕಿನ ಬಾಚಣಕಿ ಸಮೀಪ ಸ್ಕೂಟಿ ಅಪಘಾತವಾಗಿದೆ. ಪರಿಣಾಮ ಸ್ಕೂಟಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ತಡರಾತ್ರಿ ನಡೆದಿರೋ ಘಟನೆಯಲ್ಲಿ ಬಹುಶಃ ಯಮರೂಪಿ ರಸ್ತೆ ಗುಂಡಿಗೆ ಒಂದು ಜೀವ ಬಲಿಯಾದಂತಾಗಿದೆ. ಮೃತ ಬೈಕ್ ಸವಾರನನ್ನು ಮುಂಡಗೋಡಿನ ನಂದೀಶ್ವರ ನಗರದ ನಿವಾಸಿ ಉದಯ್ ಕುರ್ಡೇಕರ್ (47) ಅಂತಾ ಗುರುತಿಸಲಾಗಿದೆ. ನಿನ್ನೆ ರಾತ್ರಿ 11 ಗಂಟೆಯ ಸುಮಾರಿಗೆ ಘಟನೆ ನಡೆದಿದ್ದು, ಅಪಘಾತದಿಂದ ತೀವ್ರ ಗಾಯಗೊಂಡಿದ್ದ ಉದಯ್ ರಸ್ತೆ ಬದಿಯಲ್ಲಿ ಬಿದ್ದು ನರಳಾಡಿದ್ದಾರೆ. ದುರಂತ ಅಂದ್ರೆ ರಾತ್ರಿ ಆಗಿದ್ದ ಕಾರಣ ತಕ್ಷಣವೇ ಯಾರೂ ಗಮನಿಸಿಲ್ಲ. ಆದ್ರೆ, ನಂತರದಲ್ಲಿ ದಾರಿ ಹೋಕರು ಗಮನಿಸಿದ್ದು, ಅಷ್ಟೊತ್ತಿಗಾಗಲೇ ಪ್ರಾಣ ಪಕ್ಷಿ ಹಾರಿಹೋಗಿದೆ ಎನ್ನಲಾಗಿದೆ. ಯಮರೂಪಿ ಗುಂಡಿಗಳು..! ಅಸಲು, ಹುಬ್ಬಳ್ಳಿ ರಸ್ತೆಯ ಮೂಲಕ ನೀವು ಸಾಗುತ್ತಿದ್ದರೆ, ಬಾಚಣಕಿ ಸಮೀಪವಾಗುತ್ತಿದ್ದಂತೆ ಹಲವು ಕಡೆಗಳಲ್ಲಿ ರಸ್ತೆ ಮದ್ಯ ಭಯಾನಕ ಗುಂಡಿಗಳು ಬಾಯ್ತೆರೆದು ಕುಂತಿರೊದು ಕಾಣತ್ತೆ. ಇಂತಹ ಗುಂಡಿಗಳು ವಾಹನ‌ ಸವಾರರಿಗೆ ಜೀವ ಅಂಗೈಯಲ್ಲಿ ಹಿಡಿದು ಸಾಗುವಂತಾಗುತ್ತವೆ. ಆದ್ರೆ, ಇದನ್ನೇಲ್ಲ ಗಮಿಸಬೇಕಾದ ನಮ್ಮ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು...

ಮುಂಡಗೋಡ ಟಿಂಬರ್ ಡೀಪೋದಲ್ಲಿ ಕಟ್ಟಿಗೆ ಕಳ್ಳಾಟ ಕೇಸ್, ಐವರು DyRFO ಗಳು ಸಸ್ಪೆಂಡ್, RFO ಅಮಾನತ್ತಿಗೆ ಪ್ರಸ್ತಾವನೆ..!

ಮುಂಡಗೋಡ ಟಿಂಬರ್ ಡೀಪೋದಲ್ಲಿ ಕಟ್ಟಿಗೆ ಕಳ್ಳಾಟ ಕೇಸ್, ಐವರು DyRFO ಗಳು ಸಸ್ಪೆಂಡ್, RFO ಅಮಾನತ್ತಿಗೆ ಪ್ರಸ್ತಾವನೆ..!

ಮುಂಡಗೋಡ ಅರಣ್ಯ ಇಲಾಖೆಯ ಟಿಂಬರ್ ಡೀಪೋದಲ್ಲಿನ ಕಳ್ಳಾಟ ಕೇಸ್ ನಲ್ಲಿ ಸದ್ಯ ಐವರು DyRFO ಗಳು ನಿರ್ಧಾಕ್ಷಿಣ್ಯವಾಗಿ ಅಮಾನತ್ತಾಗಿದ್ದಾರೆ. ಐವರನ್ನೂ ಅಮಾನತ್ತು ಮಾಡಿ ಶಿರಸಿ ಸಿಸಿಎಫ್ ಕೆ. ವಿ. ವಸಂತ ರೆಡ್ಡಿರವರು ಆದೇಶಿಸಿದ್ದಾರೆ. ಇನ್ನು ಇದೇ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರೋ RFO ಜಿ.ಟಿ.ರೇವಣಕರ್ ಸಾಹೇಬ್ರನ್ನು ಅಮಾನತ್ತುಗೊಳಿಸುವಂತೆ ಬೆಂಗಳೂರು PCCF ರವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಹುಶಃ ನಾಳೆ ಸಂಜೆಯಷ್ಟೊತ್ತಿಗೆ RFO ಸಾಹೇಬ್ರೂ ಕೂಡ ಸಸ್ಪೆಂಡ್ ಆಗಿ ವಿಶ್ರಾಂತಿ ಪಡಿಯೋದು ನಿಕ್ಕಿಯಾಗಿದೆ‌. ಅದ್ರ ಜೊತೆ, ಇಡೀ ಇಲಾಖೆಯ ಮಾನವನ್ನು ಬೀದಿಯಲ್ಲಿ ಹರಾಜು ಹಾಕಿದ್ದ ಪ್ರಕರಣವೀಗ ಒಂದು ಹಂತಕ್ಕೆ ಬಂದಂತಾಗಿದೆ. ಸಸ್ಪೆಂಡ್ ಆದವರು ಯಾರು..? ಮುಂಡಗೋಡ ಸರ್ಕಾರಿ ಮರಮಟ್ಟು ಸಂಗ್ರಹಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉಪ ವಲಯ ಅರಣ್ಯಾಧಿಕಾರಿ ಸುರೇಶ ವಿ ವಡ್ಕರ, ಮಾರುತಿ ಗ. ಸೋರಗಾಂವಿ, ಮಹೇಶ ಎಮ್, ಬೋರಕರ್, ಹನಮಂತ ಭೀ ಬಂಡಿವಡ್ಡರ, ಗುರುಚಂದ್ರ ಎಮ್. ಬ್ಯಾಳಿಯವರ ಇವರುಗಳನ್ನು ಕರ್ನಾಟಕ ಅರಣ್ಯ ಸಂಹಿತೆ ಕಂಡಿಕೆ 121 (3), (b), (c) & (d)...

ಗುಂಜಾವತಿ ಅರಣ್ಯದಲ್ಲಿ ಅನಾಮತ್ತಾಗಿ ಕಡಿದು ಹಾಕಿದ್ದು ಮೂರು ಮರ..! ಆದ್ರೆ, ಸಾಗಿಸುವ ಬದಲು ಚೆಲ್ಲಿ ಹೋಗಿದ್ಯಾಕೆ ಕಳ್ಳರು..? ಅಷ್ಟಕ್ಕೂ ಇದೇಲ್ಲ ಪ್ರೀ ಪ್ಲ್ಯಾನ್ಡಾ..?

ಗುಂಜಾವತಿ ಅರಣ್ಯದಲ್ಲಿ ಅನಾಮತ್ತಾಗಿ ಕಡಿದು ಹಾಕಿದ್ದು ಮೂರು ಮರ..! ಆದ್ರೆ, ಸಾಗಿಸುವ ಬದಲು ಚೆಲ್ಲಿ ಹೋಗಿದ್ಯಾಕೆ ಕಳ್ಳರು..? ಅಷ್ಟಕ್ಕೂ ಇದೇಲ್ಲ ಪ್ರೀ ಪ್ಲ್ಯಾನ್ಡಾ..?

ಮುಂಡಗೋಡ ತಾಲೂಕಿನ ಗುಂಜಾವತಿ ಬಳಿ ರವಿವಾರ ಅರಣ್ಯಗಳ್ಳತನದ ವಿಫಲ ಯತ್ನ ನಡೆದಿದೆ. ಮೂರು ಬೆಲೆಬಾಳುವ ಮರಗಳನ್ನ ಕಡಿದು ಸಾಗಾಟ ಮಾಡಲು ಇನ್ನಿಲ್ಲದ ಯತ್ನ‌ ನಡೆಸಿದ್ದಾರೆ ಆಗಂತುಕರು. ಒಂದರ್ಥದಲ್ಲಿ ಮೇಲ್ನೋಟಕ್ಕೆ, ಇದೇಲ್ಲ ಅದ್ಯಾವನೋ ಅಡ್ನಾಡಿ ಹುಂಬ ಅರಣ್ಯ ಭಕ್ಷಾಸುರನ ಫ್ರೀ ಪ್ಲ್ಯಾನ್ಡ್ ಕೃತ್ಯವಾ ಅಂತಾ ಅನಿಸ್ತಿದೆ‌. ತಮ್ಮ ಅಕ್ರಮಗಳಿಗೆ “ಬಗಣಿ ಗೂಟ” ಇಟ್ಟು ಅಕ್ರಮಗಳ ಬೆನ್ನು ಬಿದ್ದಿದ್ದ ಅರಣ್ಯ ಇಲಾಖೆಯ ದಕ್ಷ ಅಧಿಕಾರಿಗಳನ್ನೇ ಟಾರ್ಗೆಟ್ ಮಾಡಿರೋ ಕೃತ್ಯ ಅನಿಸ್ತಿದೆ. ಕೆಲವು ದಕ್ಷರ ಮೇಲೆ ಕೆಟ್ಟ ಹೆಸರು ತರಲೆಂದೇ ಮಾಡಿರಬಹುದಾದ ಬ್ರಹನ್ನಾಟಕವಾ ಅನ್ನೋ ಪ್ರಶ್ನೆ ಮೇಲ್ನೋಟಕ್ಕೆ ಕಾಡ್ತಿದೆ. ನಮ್ಮ ದೃಷ್ಟಿಕೋನದಲ್ಲಿ..! ಅಂದಹಾಗೆ ನಾವು ಈ ಪ್ರಕರಣವನ್ನು ಎರಡು ಆಯಾಮದಿಂದ ವಿಶ್ಲೇಷಣೆ ಮಾಡಲು ಯತ್ನಿಸಿದ್ದೇವೆ. ಇಲ್ಲಿ ಬಹುಶಃ ಹೀಗೆ ಆಗಿರಬಹುದು ಅಂತಾ ತಮ್ಮ ಮುಂದಿಡುತ್ತಿದ್ದೇವೆ. ಹೀಗಾಗಿ, ಈ ಇಡೀ ಕೇಸನ್ನು ನೀವೂ ಕೂಡ ಹಾಗೆ ಒಮ್ಮೆ ಯೋಚಿಸಿ ನೋಡಿ. ಅಂದಹಾಗೆ, ಇದೇಲ್ಲ ಈ ಭಾಗದ ಹಲವು ಜನ ಅನುಮಾನ ವ್ಯಕ್ತ ಪಡಿಸಿರೋ ಸಂಗತಿಗಳು. ಯಸ್….! ಇದು,...

error: Content is protected !!