ಮಹಾರಾಷ್ಟ್ರದಿಂದ ಕಬ್ಬು ಕಡಿಯಲು ಮುಂಡಗೋಡ ತಾಲೂಕಿಗೆ ಬಂದಿರೋ ಬಡ ಕಾರ್ಮಿಕರ ಗುಂಪಿನಲ್ಲಿದ್ದ 13 ವರ್ಷದ ಅಪ್ರಾಪ್ತ ಬಾಲಕಿಯನ್ನು ಯುವಕನೋರ್ವ ಅತ್ಯಾಚಾರ ಮಾಡಿ, ಎಲ್ಲಿಗೋ ಕರೆದೊಯ್ದಿದ್ದ ಅನ್ನೋ ಬಗ್ಗೆ ಆ ಬಾಲಕಿಯ ಪೋಷಕರು ಮುಂಡಗೋಡ ಠಾಣೆಗೆ ಮಾಹಿತಿ ನೀಡಿದ್ದರು ಎನ್ನಲಾಗಿದ್ದು, ಅಲ್ಲದೇ ದೂರು ಕೊಡಲು ರೆಡಿಯಾಗಿದ್ದರಂತೆ, ಆದ್ರೆ ಆ ಪ್ರಕರಣ ಏನಾಯ್ತು ಅನ್ನೊ ಬಗ್ಗೆ ತಾಲೂಕಿನಾದ್ಯಂತ ಈಗ ಚರ್ಚೆ ಆಗ್ತಿದೆ.
ದೂರು ಕೊಡಲು ಬಂದಿದ್ರು..!
ಯಾವಾಗ, ಸಂತ್ರಸ್ಥ ಬಾಲಕಿಯ ಪೋಷಕರು ಮುಂಡಗೋಡ ಠಾಣೆಯ ಮೆಟ್ಟಿಲೇರಿ, ನನ್ನ ಮಗಳಿಗೆ ಹೀಗೇಲ್ಲ ಆಗಿದೆ. ನಮಗೆ ನ್ಯಾಯ ಕೊಡಿ ಅಂತಾ ಪೊಲೀಸರಿಗೆ ಅಲವತ್ತು ಕೊಂಡಿದ್ದರು. ಈ ಮಾಹಿತಿ ಆದರಿಸಿ ಅವತ್ತು ಬೆಳಿಗ್ಗೆ ಮುಂಡಗೋಡ ಪೊಲೀಸ್ ಠಾಣೆಯ ಸಿಬ್ಬಂದಿ ಸಂತ್ರಸ್ತ ಬಾಲಕಿ ಹಾಗೂ ಆರೋಪಿ ಹುಡುಗನನ್ನು ಠಾಣೆಗೆ ಕರೆತಂದಿದ್ದರು ಅನ್ನೋ ಮಾಹಿತಿ ಕೂಡ ಲಭಿಸಿದೆ. ಆದ್ರೆ, ಆ ಕೇಸು ಮಾತ್ರ ದಾಖಲಾಗಿಲ್ಲ ಯಾಕೆ ಅದರ ಹಿನ್ನೆಲೆ ಏನು..? ಯಾವ ಕಾರಣಕ್ಕೆ ಫೋಕ್ಸೋ ಕೇಸು ದಾಖಲಿಸಲಿಲ್ಲ ಇಲ್ಲಿನ ಪೊಲೀಸ್ರು ಅನ್ನೋ ಬಗ್ಗೆ ಸಾಕಷ್ಟು ಅನುಮಾನಗಳು ಮೂಡಿವೆ.
ಹಿಂಗಾದ್ರೆ ಹೆಂಗೆ ಸ್ವಾಮಿ..?
ಹಾಗೆ ನೋಡಿದ್ರೆ, ಅದ್ಯಾರೇ ಆಗಲಿ ಪೋಕ್ಸೋದಂತಹ ಪ್ರಕರಣ ನಡೆದಾಗ ಖಂಡಿತವಾಗಿ ದೂರು ನೀಡಿದ್ರೆ, ದಾಖಲಿಸಿಕೊಳ್ಳಲೇಬೇಕು. ಆದ್ರೆ, ಮುಂಡಗೋಡ ಪೊಲೀಸ್ರು ಯಾಕೆ ದೂರು ದಾಖಲಿಸಿಕೊಂಡಿಲ್ಲ ಅನ್ನೋದರ ಬಗ್ಗೆ ಕಾರಣ ಬಹಿರಂಗವಾಗಬೇಕಿದೆ. ಅಸಲು, ಮುಂಡಗೋಡ ತಾಲೂಕಿನಲ್ಲಿ ಕಳೆದ ಒಂದು ತಿಂಗಳಲ್ಲೇ ಇಂತಹ ಎರಡ್ಮೂರು ಪ್ರಕರಣಗಳು ಅದ್ಯಾರದ್ದೋ ಮುಲಾಜಿನಲ್ಲಿ, ಅದ್ಯಾರದ್ದೋ ಆಸೆಬುರುಕತನಕ್ಕೆ “ಮೌನ”ವಾಯ್ತಾ..? ಅನ್ನೋ ಅನುಮಾನಗಳು ಶುರುವಾಗಿದೆ. ಈ ಬಗ್ಗೆ ಮಾನ್ಯ ಎಸ್ಪಿ ಸಾಹೇಬ್ರು ಆದಷ್ಟು ಬೇಗ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕಿದೆ. ಅಂದಾಗ ಮಾತ್ರ ಇಂತಹ ಘಟನೆಗಳಿಗೆ ಕಡಿವಾಣ ಸಾಧ್ಯ ಅನ್ನೋದು ಮುಂಡಗೋಡಿಗರ ಅಭಿಪ್ರಾಯ..