ಮುಂಡಗೋಡ: ತಾಲೂಕಿನ ಬಾಚಣಕಿ ಸಮೀಪ ಸ್ಕೂಟಿ ಅಪಘಾತವಾಗಿದೆ. ಪರಿಣಾಮ ಸ್ಕೂಟಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ತಡರಾತ್ರಿ ನಡೆದಿರೋ ಘಟನೆಯಲ್ಲಿ ಬಹುಶಃ ಯಮರೂಪಿ ರಸ್ತೆ ಗುಂಡಿಗೆ ಒಂದು ಜೀವ ಬಲಿಯಾದಂತಾಗಿದೆ.
ಮೃತ ಬೈಕ್ ಸವಾರನನ್ನು ಮುಂಡಗೋಡಿನ ನಂದೀಶ್ವರ ನಗರದ ನಿವಾಸಿ ಉದಯ್ ಕುರ್ಡೇಕರ್ (47) ಅಂತಾ ಗುರುತಿಸಲಾಗಿದೆ. ನಿನ್ನೆ ರಾತ್ರಿ 11 ಗಂಟೆಯ ಸುಮಾರಿಗೆ ಘಟನೆ ನಡೆದಿದ್ದು, ಅಪಘಾತದಿಂದ ತೀವ್ರ ಗಾಯಗೊಂಡಿದ್ದ ಉದಯ್ ರಸ್ತೆ ಬದಿಯಲ್ಲಿ ಬಿದ್ದು ನರಳಾಡಿದ್ದಾರೆ. ದುರಂತ ಅಂದ್ರೆ ರಾತ್ರಿ ಆಗಿದ್ದ ಕಾರಣ ತಕ್ಷಣವೇ ಯಾರೂ ಗಮನಿಸಿಲ್ಲ. ಆದ್ರೆ, ನಂತರದಲ್ಲಿ ದಾರಿ ಹೋಕರು ಗಮನಿಸಿದ್ದು, ಅಷ್ಟೊತ್ತಿಗಾಗಲೇ ಪ್ರಾಣ ಪಕ್ಷಿ ಹಾರಿಹೋಗಿದೆ ಎನ್ನಲಾಗಿದೆ.
ಯಮರೂಪಿ ಗುಂಡಿಗಳು..!
ಅಸಲು, ಹುಬ್ಬಳ್ಳಿ ರಸ್ತೆಯ ಮೂಲಕ ನೀವು ಸಾಗುತ್ತಿದ್ದರೆ, ಬಾಚಣಕಿ ಸಮೀಪವಾಗುತ್ತಿದ್ದಂತೆ ಹಲವು ಕಡೆಗಳಲ್ಲಿ ರಸ್ತೆ ಮದ್ಯ ಭಯಾನಕ ಗುಂಡಿಗಳು ಬಾಯ್ತೆರೆದು ಕುಂತಿರೊದು ಕಾಣತ್ತೆ. ಇಂತಹ ಗುಂಡಿಗಳು ವಾಹನ ಸವಾರರಿಗೆ ಜೀವ ಅಂಗೈಯಲ್ಲಿ ಹಿಡಿದು ಸಾಗುವಂತಾಗುತ್ತವೆ. ಆದ್ರೆ, ಇದನ್ನೇಲ್ಲ ಗಮಿಸಬೇಕಾದ ನಮ್ಮ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಅದೇನು ಕಡಿದು ಗುಡ್ಡೆ ಹಾಕ್ತಿದಾರೊ ಯಾರಿಗೂ ಗೊತ್ತಿಲ್ಲ. ಅಂತಹ ಯಮರೂಪಿ ಗುಂಡಿಗಳನ್ನು ಮುಚ್ಚುವ ಕನಿಷ್ಟ ಖಬರೂ ಇಲ್ಲಿನ ಅಧಿಕಾರಿಗಳಿಗೆ ಇಲ್ಲದಂತಾಗಿದೆ. ಹೀಗಾಗಿ, ಇಲ್ಲಿನ ಗುಂಡಿಗಳಿಗೆ ಇನ್ನೇಷ್ಟು ಜೀವ ಬಲಿಯಾಗಬೇಕಿದೆಯೋ ದೇವರೇ ಬಲ್ಲ. ಹಾಗಂತ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸ್ತಿದಾರೆ.
ಒಟ್ನಲ್ಲಿ, ಸ್ಕೂಟಿ ಸವಾರ ಇಂತಹ ಯಮರೂಪಿ ಗುಂಡಿಗಳಿಗೇ ಬಲಿಯಾಗಿದ್ದಾನೆ ಅಂತಾ ಹೇಳಲಾಗ್ತಿದೆ. ಸದ್ಯ ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.