ಮುಂಡಗೋಡ ತಾಲೂಕಿನಲ್ಲಿ ಮತ್ತೆ ಶ್ರೀಗಂಧದ ಮರಗಳ್ಳರು ತಮ್ಮ ಕರಾಮತ್ತು ಶುರು ಮಾಡಿದ್ದಾರೆ. ರಾತ್ರಿ ನ್ಯಾಸರ್ಗಿಯಲ್ಲಿ ಕಳ್ಳರು ಮನೆಯ ಹಿತ್ತಲಿನಲ್ಲಿ ಇದ್ದ ಬೆಲೆಬಾಳುವ ಶ್ರೀಗಂಧದ ಮರ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ನಿತ್ಯ ನಿರಂತರವೆಂಬಂತೆ ಅರಣ್ಯ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿಗೆ ತಾಲೂಕಿನಲ್ಲಿ ಅರಣ್ಯ ಸಂಪತ್ತು ಲೂಟಿಯಾಗ್ತಿದೆ.
ಅಂದಹಾಗೆ, ನ್ಯಾಸರ್ಗಿ ಗ್ತಾಮದ ಪಿಎಸ್ ಸದಾನಂದ ಎಂಬುವವರ ಮನೆ ಪಕ್ಕದಲ್ಲಿನ ಶ್ರೀಗಂಧದ ಮರ ದೋಚಿದ್ದಾರೆ ಖದೀಮರು. ಲಕ್ಷ ಲಕ್ಷ ಬೆಲೆ ಬಾಳುವ ಗಂಧದ ಮರ ಕಡಿದುಕೊಂಡು ಹೋಗಿರೊ ಸುದ್ದಿಯಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಆದ್ರೆ, ಎಂದಿನಂತೆ, ಸುದ್ದಿ ತಿಳಿದ “ಅ”ರಣ್ಯ ಅಧಿಕಾರಿಗಳು ಚಳಿಯನ್ನೂ ಲೆಕ್ಕಿಸದೇ ಓಡೋಡಿ ಬಂದಿದ್ದಾರೆ. ಕೇಸು ದಾಖಲಿಸಿಕೊಂಡಿದ್ದಾರೆ. ಅದು ಇದು ಅಂತೇಲ್ಲ ಕೇಳಾಡಿಕೊಂಡು ಕಳ್ಳರನ್ನು ಹಿಡಿಯಲೇ ಬೇಕು ಅಂತಾ ಪಣ ತೊಟ್ಟು ಕೂತಿದ್ದಾರಂತೆ..
ಅದ್ರಲ್ಲೂ ನಮ್ಮ ಮುಂಡಗೋಡಿನ “ಅರಣ್ಯ” ಸಾಹೇಬ್ರು ಈ ಕೇಸನ್ನು ಹೇಗಾದ್ರೂ ಸರಿ ಪೂರ್ತಿ ಒಂದು ಗತಿ ಕಾಣಿಸಲೇಬೇಕು ಅಂತಾ ತೀರ್ಮಾನಿಸಿದ್ದಾರಂತೆ. ಅದಕ್ಕಾಗಿನೇ, ನ್ಯಾಸರ್ಗಿಯ ಮಂದಿಯ ಜೊತೆ ಇಡೀ ತಾಲೂಕಿನ ಪರಿಸರ ಪ್ರಿಯರು ಜಾತಕ ಪಕ್ಷಿಯಂತೆ ಕಾಯುತ್ತ ಕೂತಿದ್ದಾರಂತೆ. ಒಟ್ನಲ್ಲಿ ತಾಲೂಕಿನ ಅರಣ್ಯ ಸಂಪತ್ತನ್ನು ದೇವ್ರೇ ಕಾಪಾಡಬೇಕು.. ಥೂ.. ನಾಚಿಕೆಯಾಗತ್ತೆ..!