ಮುಂಡಗೋಡ ತಾಲೂಕಿನ ಮಳಗಿ ಸಮೀಪದ ಬನವಾಸಿ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತವಾಗಿದೆ. ನೀಲಗಿರಿ ಕಟ್ಟಿಗೆ ತುಂಬಿಕೊಂಡು ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವು ಕಂಡಿದ್ದು, ಹಿಂಬದಿಯ ಸವಾರನಿಗೆ ಗಂಭೀರ ಗಾಯವಾಗಿದೆ.
ಮುಂಡಗೋಡ ತಾಲೂಕಿನ ಕಲ್ಲಹಕ್ಕಲ ಗ್ರಾಮದ ಮಹೇಶ್ ಬಸವಂತಪ್ಪ ಶೃಂಗೇರಿ(50) ಸ್ಥಳದಲ್ಲೇ ಮೃತಪಟ್ಟ ದುರ್ದೈವಿಯಾಗಿದ್ದಾನೆ. ಇನ್ನು ಪರಶುರಾಮ್ ಕುರುಬರ (32) ಎಂಬುವ ಹಿಂಬದಿಯ ಸವಾರನಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯರ ಸಹಾಯದಿಂದ ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಲಾಗಿಲುತ್ತಿದೆ.
ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.