ಮುಂಡಗೋಡ ತಾಲೂಕಿನ ಯಲ್ಲಾಪುರ ರಸ್ತೆಯ ಟಿಬೇಟಿಯನ್ ಕಾಲೋನಿ ಬಳಿ ಬೈಕ್ ಗಳ ನಡುವೆ ಭೀಕರ ಅಫಘಾತವಾಗಿದೆ. ಪರಿಣಾಮ ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮತ್ತೊರ್ವನಿಗೆ ಗಾಯವಾಗಿದೆ.
ಯಲ್ಲಾಪುರ ತಾಲೂಕಿನ ಕಿರವತ್ತಿಯ ಗುರುನಾಥ್ ಅಶೋಕ್ ಪವಾರ್(35), ಸ್ಥಳದಲ್ಲೇ ಸಾವು ಕಂಡ ಬೈಕ್ ಸವಾರನಾಗಿದ್ದಾನೆ. ಇನ್ನು ಮತ್ತೊಂದು ಬೈಕಿನಲ್ಲಿದ್ದ ಮುಂಡಗೋಡ ಸುಭಾಸ್ ನಗರದ ಆಶೀಫ್ ಗುಲಾಬ್ ಖಾನ್ (24) ಗಂಭೀರ ಗಾಯಗೊಂಡಿದ್ದಾನೆ. ಹೀಗಾಗಿ, ಈತನಿಗೆ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ.
ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೊಲೀಸ್ರು ಭೇಟಿ ನೀಡಿ ಪರಿಶೀಲಿಸಿದ್ದಾರೆ.