ಮುಂಡಗೋಡ ಪಟ್ಟಣದ ಮುಲ್ಲಾ ಓಣಿಯ ಬಾವಿಯಲ್ಲಿ ವ್ಯಕ್ತಿಯೋರ್ವನ ಶವ ಪತ್ತೆಯಾಗಿದೆ. ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ ತಕ್ಷಣವೇ ಪಿಎಸ್ಐ ಪರಶುರಾಮ್ ಸ್ಥಳಕ್ಕೆ ಆಗಮಿಸಿ ಶವ ಹೊರತೆಗೆದಿದ್ದಾರೆ. ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರೋ ಅನುಮಾನ ಇದೆ.
ಚಾಂದಬಾಷಾ ಚಿಕ್ಕೇರಿ (52) ಎಂಬುವವನೇ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ಇಂದು ಮದ್ಯಾನ ಮನೆಯಿಂದ ಹೋಗಿದ್ದ ಎನ್ನಲಾಗಿದೆ. ಆದ್ರೆ, ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.. ಮುಂಡಗೋಡನಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.