ದೇವಿಮನೆ ಘಟ್ಟದಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ, ಗುರುತು ಸಿಕ್ಕರೆ  ಕರೆಮಾಡಿ ಮಾಹಿತಿ ನೀಡಿ..!

ಕುಮಟಾ: ತಾಲೂಕಿನ ಕತಗಾಲ ಸಮೀಪದ ದೇವಿಮನೆ ಘಟ್ಟದಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ. ಅಂದಾಜು, 26 ರಿಂದ 30 ವರ್ಷ ವಯಸ್ಸಿನ ಮಹಿಳೆಯ ಶವ ಪತ್ತೆಯಾಗಿದ್ದು, ಮಹಿಳೆಯ ಕೈ ಮೇಲೆ ಟ್ಯಾಟೂಗಳು ಇವೆ. ಬಹುಶಃ ಕೊಲೆ ‌ಮಾಡಿ ಬೀಸಾಡಿರೋ ಶಂಕೆ ಇದೆ.

ಸದ್ಯ ಕುಮಟಾ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಮಹಿಳೆಯ ಗುರುತು ಪತ್ತೆಗೆ ಇಳಿದಿದ್ದಾರೆ. ತಮಗೇನಾದ್ರೂ ಈ ಮಹಿಳೆಯ ಗುರುತು ಸಿಕ್ಕರೆ ತಕ್ಷಣವೇ ಕುಮಟಾ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ವಿನಂತಿಸಿದ್ದಾರೆ.

ಕುಮಟಾ ಪೋಲಿಸ್ ಠಾಣೆಯ ಈ ಕೆಳಗಿನ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದು.
ದೂರವಾಣಿ ಸಂಖ್ಯೆ: 08386 222333

error: Content is protected !!