NMD ಮಾಲೀಕ ಜಮೀರ್ ಅಹ್ಮದ್ ದರ್ಗಾವಾಲೆ ಕಿಡ್ನ್ಯಾಪ್ ಕೇಸಿಗೆ ಸಂಬಂಧಿಸಿದಂತೆ ಮತ್ತೊಂದು ಭಯಾನಕ ಘಟನೆ ನಡೆದಿದೆ. ಕಿಡ್ನ್ಯಾಪರ್ ಗಳನ್ನು ಹಿಡಿಯಲು ತೆರಳಿದ್ದ ಮುಂಡಗೋಡ ಪಿಐ ರಂಗನಾಥ್ ನೀಲಮ್ಮನವರ್, ಪಿಎಸ್ಐ ಪರಶುರಾಮ್ ಮಿರ್ಜಿಗಿ ಹಾಗೂ ಯಲ್ಲಾಪುರ ಪೊಲೀಸ್ ಶಫಿ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಹೀಗಾಗಿ, ಪೊಲೀಸರು ಪ್ರತಿದಾಳಿ ನಡೆಸಿ ಆಗಂತುಕರ ಕಾಲಿಗೆ ಗುಂಡು ಹಾರಿಸಿ ಹೆಡೆಮುರಿ ಕಟ್ಟಿದ್ದಾರೆ.
ಅಂದಹಾಗೆ, ಮುಂಡಗೋಡಿನ ಜಮೀರ ಅಹ್ಮದ್ ದುರ್ಗಾವಾಲೆ ಕಿಡ್ನ್ಯಾಪಿಂಗ್ ಕೇಸಲ್ಲಿ, ಬರೋಬ್ಬರಿ 30 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅದ್ರಲ್ಲಿ, 18 ಲಕ್ಷ ರೂ ಎಚ್ಚರಿಕೆ ನೀಡಿ ಅವರನ್ನು ಬಿಟ್ಟು ಪರಾರಿಯಾಗಿದ್ರು. ಹೀಗಾಗಿ, ಈ ಕೇಸಿಗೆ ಸಂಬಂಧಿಸಿದಂತೆ ಮುಂಡಗೋಡ ಪೊಲೀಸ್ರು ಐವರು ಆರೋಪಿಗಳನ್ನು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಹೆಡೆಮುರಿ ಕಟ್ಟಿದ್ದರು.
ಅವ್ರಷ್ಟೇ ಅಲ್ಲ..!
ಅಸಲು, ಈ ಪ್ರಕರಣದಲ್ಲಿ ಅವ್ರಷ್ಟೇ ಅಲ್ಲ, ಇನ್ನಷ್ಟು ಜನ ಆರೋಪಿಗಳಿರುವ ಮಾಹಿತಿ ನಮ್ಮ ಪೊಲೀಸ್ರಿಗೆ ಇತ್ತು. ಹೀಗಾಗಿ, ಮುಂಡಗೋಡಿನ ಪಿಐ ರಂಗನಾಥ್ ನೀಲಮ್ಮನವರ್ ಹಾಗೂ ಪಿಎಸ್ಐ ಪರಶುರಾಮ್ ಮಿರ್ಜಿಗಿ ಹೇಗಾದ್ರೂ ಸರಿ ಉಳಿದ ಆರೋಪಿಗಳನ್ಜು ಎಳೆದು ತರಲೇ ಬೇಕು ಅಂತಾ ಹಟ ತೊಟ್ಟು ನಿಂತಿದ್ರು. ಹೀಗಾಗಿ, ಸಣ್ಣದೊಂದು ಮಾಹಿತಿ ಆಧಾರದಲ್ಲಿ ಕಲಘಟಗಿಯಿಂದ ಆಗಂತುಕರನ್ನು ಬೆನ್ನತ್ತಿದ್ದರು. ಇತ್ತ ಯಲ್ಲಾಪುರ ಪೊಲೀಸರು ಕೂಡ ಡೌಗಿನಾಳದ ಬಳಿ ಆ ತಂಡದವರನ್ನು ಅಡ್ಡಗಟ್ಟೇ ನಿಂತ್ರು.
ಶರಣಾಗಿ ಅಂದ್ರೂ ಕೇಳಲಿಲ್ಲ..!
ಹೀಗಾಗಿ, ಐದು ಜನರಿಗೂ ಶರಣಾಗುವಂತೆ ಪೋಲೀಸರು ತಾಕೀತು ಮಾಡಿದ್ರು. ಇದಕ್ಕೆ ಒಪ್ಪದ ದುಷ್ಕರ್ಮಿಗಳು ಪೊಲೀಸರ ಕಡೆ ಕಲ್ಲು ಬೀಸಿದ್ರು. ಚಾಕು, ಕಾರದಪುಡಿಗಳಿಂದ ದಾಳಿ ನಡೆಸಿದರು. ಇದಕ್ಕೆ ಪ್ರತಿಯಾಗಿ ಪೊಲೀಸರು ಗಾಳಿಯಲ್ಲಿ ಎರಡು ಸುತ್ತು ಗುಂಡು ಹೊಡೆದು ಬೆದರಿಸಿದರು. ಅದಕ್ಕೂ ಬಗ್ಗದೇ ಇದ್ದಾಗ ಆರೋಪಿತರ ಕಾಲಿಗೆ ಗುಂಡು ಹಾರಿಸಿದರು. ಆಗ ಐವರು ಆರೋಪಿತರು ಸಿಕ್ಕಿಬಿದ್ದರು. ಪೊಲೀಸರು ಹಾಗೂ ಡಕಾಯಿತರ ಮೇಲೆ ನಡೆದ ಘರ್ಷಣೆಯಲ್ಲಿ ಮೂವರು ಪೊಲೀಸರಿಗೆ ಗಾಯವಾಗಿದೆ.
ಮುಂಡಗೋಡು ಸಿಪಿಐ ರಂಗನಾಥ ನೀಲಮನ್ನವರ, ಪಿಎಸ್ಐ ಪರಶುರಾಮ ಹಾಗೂ ಯಲ್ಲಾಪುರ ಪೊಲೀಸ್ ಸಿಬ್ಬಂದಿ ಶಫಿ ಗಾಯಗೊಂಡಿದ್ದಾರೆ. ಕಾಲಿಗೆ ಗುಂಡು ತಾಗಿಸಿಕೊಂಡ ಆರೋಪಿತರಲ್ಲಿ ಇಬ್ಬರು ಕೊಲೆ ಆರೋಪಿಗಳಾಗಿದ್ದು, ತಿಂಗಳ ಹಿಂದೆ ಜೈಲಿನಿಂದ ಹೊರ ಬಂದಿದ್ದರು.
ಐವರಲ್ಲಿ ಇಬ್ಬರು ಡಕಾಯಿತರ ಕಾಲಿನಲ್ಲಿ ಗುಂಡುಗಳಿರುವುದರಿಂದ ಅವರನ್ನು ಕಾರವಾರದ ಕಿಮ್ಸ್’ಗೆ ದಾಖಲಿಸಲಾಗಿದೆ.