ಹುಬ್ಬಳ್ಳಿ: ಹಳೇ ದ್ವೇಷದ ಹಿನ್ನಲೆ ಇಬ್ಬರಿಗೆ ಚಾಕು ಇರಿದ ಘಟನೆ ಹಳೇಹುಬ್ಬಳ್ಳಿ ಆನಂದ ನಗರದಲ್ಲಿ ಸಂಭವಿಸಿದ್ದು, ಗಾಯಾಳುಗಳನ್ನ ಕಿಮ್ಸ್‌ಗೆ ರವಾನೆ ಮಾಡಿದ್ದಾರೆ.
ಆನಂದ ನಗರದ ಘೋಡಕೆ ಪ್ಲಾಟ್ ನಲ್ಲಿ ಘಟನೆ ಸಂಭವಿಸಿದ್ದು, ಸಮೀರ್ ಶೇಖ್ (18) ಹಾಗೂ ಚಿಕ್ಕಪ್ಪ ಜಾವೀದ್ ಶೇಖ್ (32)ಗೆ ಇರಿದು ಪರಾರಿಯಾಗಿದ್ದಾರೆ.
ಹಳೇಹುಬ್ಬಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮಾಹಿತಿ ಪಡೆದುಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ.