ರಾಮನಗರ: ಜೋಯಿಡಾ ತಹಶೀಲ್ದಾರ್ ಹಾಗೂ ರಾಮನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಮರಳು ವಶಪಡಿಸಿಕೊಂಡಿದ್ದಾರೆ. ಬರೋಬ್ಬರಿ 23 ಟಿಪ್ಪರ್ ನಷ್ಟು ಮರಳು ಜಪ್ತಿ ಪಡಿಸಿಕೊಂಡಿದ್ದು ಅಕ್ರಮಿಗಳ ಹೆಡೆಮುರಿ ಕಟ್ಟಿದ್ದಾರೆ.
ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯ
ವೈಜಗಾಂವ್, ಆಮ್ಸೆತ್, ಗೌಳಿವಾಡ ಮತ್ತು ಪಾಯಸವಾಡಿ ಗ್ರಾಮಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಸುಮಾರು 23 ಟಿಪ್ಪರ್ ನಷ್ಟು, ಅಂದಾಜು 3 ಲಕ್ಷ 30 ಸಾವಿರ ರೂಪಾಯಿ ಮೌಲ್ಯದ ಮರಳು ವಶಪಡಿಸಿಕೊಂಡಿದ್ದಾರೆ. ಜೋಯಿಡಾ ತಹಶೀಲ್ದಾರ್ ಬಸವರಾಜ ತೆರನಹಳ್ಳಿ ಮಾರ್ಗದರ್ಶನದಲ್ಲಿ ರಾಮನಗರ ಪಿಎಸ್ಐ ಬಸವರಾಜ್ ಮಬನೂರು, ಕೃಷ್ಣಕಾಂತ್ ಪಾಟೀಲ್ ನೇತೃತ್ವದಲ್ಲಿ ಕಂದಾಯ ಹಾಗೂ ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ದಾಳಿ ಮಾಡಿದ್ದು, ಮರಳು ವಶ ಪಡಿಸಿಕೊಳ್ಳಲಾಗಿದೆ. ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.