ಮುಂಡಗೋಡ ತಾಲೂಕಿನ ಚವಡಳ್ಳಿ ಸೊಸೈಟಿ ಚುನಾವಣೆ ಫಲಿತಾಂಶ ಬಹುತೇಕ ಹೊರಬಿದ್ದಿದೆ. ತೀವ್ರ ತುರುಸು ಪಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರೇ ಭರ್ಜರಿ ಜಯ ದಾಖಲಿಸಿದ್ದಾರೆ. ಬಿಜೆಪಿ ಕೇವಲ ಒಂದೇ ಒಂದು ಸ್ಥಾನ ಪಡೆಯುವಲ್ಲಿ ಹರ ಸಾಹಸ ಪಟ್ಟಿದೆ.
ಒಟ್ಟು 12 ನಿರ್ದೇಶಕರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 11 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಶಂಕರ್ ಓಣಿಕೇರಿ, ತಾಜುದ್ದೀನ್ ದುಂಢಸಿ, ಮಹಾದೇವಿ ಹಳೆಬಂಕಾಪುರ, ನಿರ್ಮಲ ಮಡ್ಲಿ, ಪರಶುರಾಮ್ ತಹಶೀಲ್ದಾರ್, ಚಿದಾನಂದ ಪಾಟೀಲ್, ದ್ಯಾಮಣ್ಣ ಹೊನ್ನಳ್ಳಿ, ಬಸವರಾಜ್ ಉಗ್ನಿಕೇರಿ, ರಾಮಣ್ಣ ವಾಲ್ಮೀಕಿ, N.V. ವರ್ಗೀಸ್, ಕುಮಾರ್ ರಾಠೋಡ್ “ಕೈ” ಪಡೆಯ ಬೆಂಬಲದೊಂದಿಗೆ ನಿರ್ದೇಶಕರಾಗಿ ಚುನಾಯಿತರಾಗಿದ್ದಾರೆ.
ಇನ್ನು, ಬಿಜೆಪಿ ಬೆಂಬಲದೊಂದಿಗೆ ಕಣಕ್ಕಿಳಿದಿದ್ದ ಅರ್ಜುನ್ ಜ್ಯೋತೆಪ್ಪನವರ್ ಗೆಲುವು ಸಾಧಿಸಿ ಬಿಜೆಪಿ ಬಾವುಟ ಗಟ್ಟಿಗೊಳಿಸಿದ್ದಾರೆ.
ಇದ್ರೊಂದಿಗೆ ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಚವಡಳ್ಳಿ ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್ ಪರಾಕ್ರಮ ಮೆರೆದಿದೆ.