ಶಿಗ್ಗಾವಿ: ತಾಲೂಕಿನ ಮಡ್ಲಿಯಲ್ಲಿ ಹೃದಯ ಕಲಕುವ ಘಟನೆ ನಡೆದಿದೆ. ಮಾಜಿ ಸಿಎಂ ಬೊಮ್ಮಾಯಿ ಕಾಲು ಬಿದ್ದ ಬಡ ದಂಪತಿ ತಮ್ಮ ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಪರಿ ಪರಿಯಾಗಿ ಬೇಡಿಕೊಂಡಿದ್ದಾರೆ. ನಿರ್ದಯಿ, ನಿರ್ಲಜ್ಯ ವ್ಯವಸ್ಥೆಯಲ್ಲಿ ಪಾಪ, ಆ ಬಡ ಪೋಷಕರ ಆಕ್ರಂಧನ ಮಾತ್ರ ಉಳ್ಳವರಿಗೆ ಮೋಜಿನಂತಾಗಿ ಕಂಡಿತಾ..?
ಆ ನೋವು, ಸಂಕಟ, ಛೇ..!
ಅಂದಹಾಗೆ, ಅದು 2019 ರ, ಡಿಸೆಂಬರ್ 8 ರಂದು ಶಿಗ್ಗಾವಿ ತಾಲೂಕು ಕುನ್ನೂರಿನ ಕಸ್ತೂರಬಾ ವಸತಿ ನಿಲಯದಲ್ಲಿ ಅದೊಬ್ಬ ವಿದ್ಯಾರ್ಥಿನಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮಡ್ಲಿ ಗ್ರಾಮದ ಸಾವಕ್ಕ, ಅಶೋಕ್ ಮರಿಲಿಂಗಪ್ಪನವರ ದಂಪತಿ ಪುತ್ರಿ ದ್ಯಾಮವ್ವ ಎಂಬುವವಳು ದಾರುಣ ಸಾವು ಕಂಡಿದ್ದಳು. ಹೀಗಾಗಿ, ಈ ಸಾವು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿತ್ತು. ಅವತ್ತೇ ಹೆತ್ತವರು ನನ್ನ ಮಗಳ ಸಾವು ಅನುಮಾನದ ಸಾವು, ಇದರ ಬಗ್ಗೆ ಕೂಲಂಕೂಷ ತನಿಖೆ ಮಾಡಬೇಕು, ನನ್ನ ಮಗಳ ಸಾವಿಗೆ ಯಾರು ಕಾರಣವಾಗಿದ್ದಾರೋ ಅವ್ರಿಗೆ ತಕ್ಕ ಶಿಕ್ಷೆಯಾಗಬೇಕು ಅಂತಾ ಅಂಗಲಾಚಿ ಬೇಡಿಕೊಂಡಿದ್ದರು. ಆದ್ರೆ, ಅಲ್ಲಿನ ಕೆಟ್ಟ ವ್ಯವಸ್ಥೆಗೆ ಆ ಹೆತ್ತವರು ಕೂಗು ಕೇಳಿರಲೇ ಇಲ್ಲ. ಹೀಗಾಗಿ, ಪ್ರಕರಣ ನಡೆದು 5 ವರ್ಷ ಕಳೆಯುತ್ತ ಬಂದರೂ ಆ ಬಗ್ಗೆ ಯಾರಂದ್ರೆ ಯಾರೂ ಗಮನವನ್ನೇ ಕೊಡಲಿಲ್ಲ. ಹೀಗಾಗಿ, ಮಗಳನ್ನು ಕಳದುಕೊಂಡ ಹೆತ್ತವರು ನಿತ್ಯವೂ ಕಣ್ಣೀರಲ್ಲೇ ಕಾಲ ಕಳೆಯುತ್ತಿದ್ದಾರೆ.
ಕಾಲಿಗೆ ಬಿದ್ದರು..!
ಅಸಲು, ಸಿಎಂ ಆಗಿದ್ದಾವಾಗಲೇ ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದ ಪೋಷಕರು ತಮ್ಮ ಕರುಳ ಬಳ್ಳಿಯ ದಾರುಣ ಸಾವಿನ ಹಿಂದಿನ ಸತ್ಯ ಹೊರಗೆ ತರುವಂತೆ ಅಂಗಲಾಚಿ ಬೇಡಿಕೊಂಡಿದ್ದರು. ಆದ್ರೆ, ಸಿಎಂ ಆಗಿದ್ದಾವಾಗಲೇ ಆ ಬಗ್ಗೆ ಮಾತನಾಡದ ಬೊಮ್ಮಾಯಿ ಸಾಹೇಬ್ರು ಈಗ ಅಧಿಕಾರ ಕಳೆದು ಕೊಂಡ ಮೇಲೆ ಮಾಡುವುದಾದ್ರೂ ಏನು ಅಲ್ವಾ..? ಆದ್ರೂ ಕೂಡ ಆ ಬಡ ಕುಟುಂಬ ಇವತ್ತು ಮತ್ತೆ ಬೊಮ್ಮಾಯಿಯವರನ್ನು ಎಚ್ಚರಿಸುವ ಕೆಲಸ ಮಾಡಿದೆ. ಮಗಳ ಸಾವಿಗೆ ನ್ಯಾಯ ಕೊಡಿಸಿ ಅಂತಾ ಅಂಗಲಾಚಿದೆ. ಮಡ್ಲಿ ಗ್ರಾಮದ ಶಾಲಾ ಕೊಠಡಿಗಳ ಉದ್ಘಾಟನಾ ಕಾರ್ಯಕ್ಕೆ ಬಂದಿದ್ದ ಬೊಮ್ಮಾಯಿಯವರಿಗೆ ದಂಪತಿಯ ಕಣ್ಣೀರಿನ ಸ್ವಾಗತ ಸಿಕ್ಕಿದೆ.. ದುರಂತ ಅಂದ್ರೆ ಅಂಗಲಾಚುತ್ತಿದ್ದ ದಂಪತಿಗೆ ಗದರಿ ಕಳಿಸಿದ್ದಾರೆ ಸಾಹೇಬ್ರು.. ಅದೇನೋ ಸಿಐಡಿ ತನಿಖೆಗೆ ಕೊಟ್ಟಿದ್ದಾರಂತೆ. ಘಟನೆ ನಡೆದು ನಾಲ್ಕು ವರ್ಷ ಆಗಿದೆ. ಆ ವಿದ್ಯಾರ್ಥಿನಿಯ ಸಾವಿಗೆ ಇವತ್ತಿಗೂ ನ್ಯಾಯ ಸಿಕ್ಕಿಲ್ಲ.
ಈಗ ನೀವೇ ಯೋಚಿಸಿ ಬಡ ಕುಟುಂಬದ ಆರ್ತನಾದ ಕೇಳಿಸುವುದು ಯಾರಿಗೆ..? ಅವ್ರು ತಮ್ಮ ಅಳಲು ಯಾರ ಹತ್ರ ಹೇಳಿಕೊಳ್ಳಬೇಕು..? ನಿಜಕ್ಕೂ ಈ ವ್ಯವಸ್ಥೆಗೆ ಧಿಕ್ಕಾರವಿರಲಿ.. ಆ ಮಗುವಿನ ಸಾವಿಗೆ ನ್ಯಾಯ ಸಿಗಲಿ.. ಇದೇ ನಮ್ಮ ಆಶಯ..