ಗುಂಜಾವತಿ ಅರಣ್ಯದಲ್ಲಿ ಅನಾಮತ್ತಾಗಿ ಕಡಿದು ಹಾಕಿದ್ದು ಮೂರು ಮರ..! ಆದ್ರೆ, ಸಾಗಿಸುವ ಬದಲು ಚೆಲ್ಲಿ ಹೋಗಿದ್ಯಾಕೆ ಕಳ್ಳರು..? ಅಷ್ಟಕ್ಕೂ ಇದೇಲ್ಲ ಪ್ರೀ ಪ್ಲ್ಯಾನ್ಡಾ..?

ಮುಂಡಗೋಡ ತಾಲೂಕಿನ ಗುಂಜಾವತಿ ಬಳಿ ರವಿವಾರ ಅರಣ್ಯಗಳ್ಳತನದ ವಿಫಲ ಯತ್ನ ನಡೆದಿದೆ. ಮೂರು ಬೆಲೆಬಾಳುವ ಮರಗಳನ್ನ ಕಡಿದು ಸಾಗಾಟ ಮಾಡಲು ಇನ್ನಿಲ್ಲದ ಯತ್ನ‌ ನಡೆಸಿದ್ದಾರೆ ಆಗಂತುಕರು. ಒಂದರ್ಥದಲ್ಲಿ ಮೇಲ್ನೋಟಕ್ಕೆ, ಇದೇಲ್ಲ ಅದ್ಯಾವನೋ ಅಡ್ನಾಡಿ ಹುಂಬ ಅರಣ್ಯ ಭಕ್ಷಾಸುರನ ಫ್ರೀ ಪ್ಲ್ಯಾನ್ಡ್ ಕೃತ್ಯವಾ ಅಂತಾ ಅನಿಸ್ತಿದೆ‌. ತಮ್ಮ ಅಕ್ರಮಗಳಿಗೆ “ಬಗಣಿ ಗೂಟ” ಇಟ್ಟು ಅಕ್ರಮಗಳ ಬೆನ್ನು ಬಿದ್ದಿದ್ದ ಅರಣ್ಯ ಇಲಾಖೆಯ ದಕ್ಷ ಅಧಿಕಾರಿಗಳನ್ನೇ ಟಾರ್ಗೆಟ್ ಮಾಡಿರೋ ಕೃತ್ಯ ಅನಿಸ್ತಿದೆ. ಕೆಲವು ದಕ್ಷರ ಮೇಲೆ ಕೆಟ್ಟ ಹೆಸರು ತರಲೆಂದೇ ಮಾಡಿರಬಹುದಾದ ಬ್ರಹನ್ನಾಟಕವಾ ಅನ್ನೋ ಪ್ರಶ್ನೆ ಮೇಲ್ನೋಟಕ್ಕೆ ಕಾಡ್ತಿದೆ.

ನಮ್ಮ ದೃಷ್ಟಿಕೋನದಲ್ಲಿ..!
ಅಂದಹಾಗೆ ನಾವು ಈ ಪ್ರಕರಣವನ್ನು ಎರಡು ಆಯಾಮದಿಂದ ವಿಶ್ಲೇಷಣೆ ಮಾಡಲು ಯತ್ನಿಸಿದ್ದೇವೆ. ಇಲ್ಲಿ ಬಹುಶಃ ಹೀಗೆ ಆಗಿರಬಹುದು ಅಂತಾ ತಮ್ಮ ಮುಂದಿಡುತ್ತಿದ್ದೇವೆ. ಹೀಗಾಗಿ, ಈ ಇಡೀ ಕೇಸನ್ನು ನೀವೂ ಕೂಡ ಹಾಗೆ ಒಮ್ಮೆ ಯೋಚಿಸಿ ನೋಡಿ. ಅಂದಹಾಗೆ, ಇದೇಲ್ಲ ಈ ಭಾಗದ ಹಲವು ಜನ ಅನುಮಾನ ವ್ಯಕ್ತ ಪಡಿಸಿರೋ ಸಂಗತಿಗಳು.

ಯಸ್….!
ಇದು, ಮುಂಡಗೋಡ ತಾಲೂಕಿನ ಗುಂಜಾವತಿ ಅರಣ್ಯ ವ್ಯಾಪ್ತಿಯಲ್ಲಿ ನಡೆದಿರೋ ಬ್ರಹನ್ನಾಟಕದ ಅದ್ವಾನ. ಇದೇ ವ್ಯಾಪ್ತಿಯ ಮುಖ್ಯ ರಸ್ತೆಯಿಂದ ಸರಿ ಸುಮಾರು ಒಂದು ಕಿಮೀ ಅರಣ್ಯದ ಒಳಗೆ ಈ ಘಟನೆ ನಡೆದಿದೆ. ಇಲ್ಲಿ ಬರೋಬ್ಬರಿ ಮೂರು ಬೆಲೆಬಾಳುವ ಸಾಗವಾನಿ ಮರಗಳನ್ನು ಅನಾಮತ್ತಾಗಿ ಕಡಿದು ಹಾಕಲಾಗಿದೆ. ಹಾಗೆ ಕಡಿದ ಮರಗಳನ್ನು ತುಂಡಾಗಿ ಕತ್ತರಿಸಿ ಬೊಲೆರೋ ಪಿಕ್ ಅಪ್ ವಾಹನದಲ್ಲಿ ಸಾಗಿಸುವ ವಿಫಲ ಯತ್ನ ನಡೆಸಿದ್ದಾರೆ. ವಿಫಲ ಯತ್ನ ಅನ್ನೋದಕ್ಕಿಂತ ಇಲ್ಲಿ ಬೇಕು ಅಂತಲೇ ಅಂತಹದ್ದೊಂದು ನಾಟಕ ಆಡಿದ್ರಾ ಅನ್ನೋ ಅನುಮಾನ ಇದೆ. ಯಾಕಂದ್ರೆ, ಅಲ್ಲಿನ ವಾಸ್ತವಿಕ ಸ್ಥಿತಿ ನೋಡಿದ ಎಂಥವರಿಗೂ ಅರ್ಥವಾಗತ್ತೆ. ಹೀಗಾಗಿ, ಪಬ್ಲಿಕ್ ಫಸ್ಟ್ ಘಟನೆಯ ಬಗ್ಗೆ ಒಂದಿಷ್ಟು ವಿಚಿತ್ರ ಸಂಗತಿಗಳನ್ನ ತಮ್ಮ ಮುಂದಿಡಲು ಪ್ರಯತ್ನಿಸಿದೆ‌. ಅದರ ಜೊತೆ ಒಂದಿಷ್ಟು ಪ್ರಶ್ನೆಗಳನ್ನೂ ತಮ್ಮ ಮುಂದೆ ಇಡಲಿದೆ. ಒಮ್ಮೆ ನೀವೇ ಯೋಚಿಸಿ..

ಅದು ದಟ್ಟ ಅರಣ್ಯ..
ಗುಂಜಾವತಿಯ ದಟ್ಟ ಅರಣ್ಯದ ಅಂಚಿನ ರಸ್ತೆಯ ಅನತಿ ದೂರದಲ್ಲಿ ಘಟನೆ ನಡೆದಿದೆ. ಅಲ್ಲಿ ಮೂರು ಅಮೂಲ್ಯ ಸಾಗವಾನಿ ಮರಗಳನ್ನು ಕಡಿಯಲಾಗಿದೆ. ಹಾಗೆ ಕಡಿದ ಮರಗಳ ಮೌಲ್ಯ ಏನಿಲ್ಲವೆಂದರೂ ಒಂದೂವರೇ ಯಿಂದ ಎರಡು ಲಕ್ಷ ರೂಪಾಯಿ ಆಗಬಹುದು. ಅಸಲು, ಇಲ್ಲಿ ಪ್ರೊಫೆಶನಲ್ ಅರಣ್ಯಗಳ್ಳರೇ ಮಾಡಿರಬಹುದಾದ ಈ ಕೃತ್ಯದಲ್ಲಿ ಹಲವು ಪ್ರಶ್ನೆಗಳು ಮೇಲ್ನೋಟಕ್ಕೆ ಕಾಡ್ತಿವೆ.

ಸುಳಿವು ಮೊದಲೇ ಸಿಕ್ಕಿತ್ತು..!
ರವಿವಾರ ರಾತ್ರಿ ಗುಂಜಾವತಿ ಅರಣ್ಯ ವ್ಯಾಪ್ತಿಯ ಅರಣ್ಯ ಅಧಿಕಾರಿಗಳಿಗೆ ಅರಣ್ಯಗಳ್ಳರ ಕೃತ್ಯದ ಬಗ್ಗೆ ಸಣ್ಣದೊಂದು ಸುಳಿವು ಸಿಕ್ಕಿರತ್ತೆ. ಸುಳಿವು ಸಿಕ್ಕಿರತ್ತೆ ಅನ್ನೋದಕ್ಕಿಂತ ಸುಳಿವು ಸಿಗುವ ಹಾಗೆ ಅದೊಂದು ಮಾಸ್ಟರ್ ಮೈಂಡ್ ಕೆಲಸ ಮಾಡಿತ್ತಾ..? ಗೊತ್ತಿಲ್ಲ. ಹೀಗಾಗಿ, ಅಲ್ಲಿನ ಅರಣ್ಯ ರಕ್ಷಕರು ಸುಳಿವು ಸಿಕ್ಕ ತಕ್ಷಣವೇ ತಮ್ಮ ಪಡೆಯೊಂದಿಗೆ ಅರಣ್ಯದ ಎಲ್ಲಾ ಬೀಟ್ ಗಳಲ್ಲೂ ಹದ್ದಿನ ಕಣ್ಣಿಟ್ಟು ಇಡೀ ರಾತ್ರಿ ಬೀಡು ಬಿಟ್ಟಿರತ್ತೆ.

ದಕ್ಷ ಪಡೆ ಅಲರ್ಟ್..!
ಅದೇಲ್ಲೇ ಆಗಂತುಕರು ಕೃತ್ಯ ನಡೆಸಿದ್ರೂ ಅದನ್ನ ಮಟ್ಟ ಹಾಕುವ ಬಲಿಷ್ಟ ಪಡೆಯೊಂದು, ಮುಂಡಗೋಡಿನ ದಕ್ಷ ACF. ಶ್ರೀಶೈಲ್ ವಾಲಿ ಸಾಹೇಬ್ರು ಹಾಗೂ RFO ಸುರೇಶ್ ಕುಲ್ಲೊಳ್ಳಿ ಮಾರ್ಗದರ್ಶನದಲ್ಲಿ, ಈ ಭಾಗದ DyRFO ಶ್ರೀಶೈಲ್ ಐನಾಪುರ ಸೇರಿದಂತೆ ನಾರಾಯಣ ರಜಪೂತ್, ಶಿವಾನಂದ್ ಅಲಗುಂಡಿ, ವಾಚರ್ ಗಳಾದ ನಾಸಿರ್, ಅಬ್ದುಲ್, ಅಶೋಕ್ ಸೇರಿ ಇಡೀ ರಾತ್ರಿ ಕಳ್ಳರನ್ನ ಸೆದೆಬಡಿಯಲೇ ಬೇಕು ಅಂತಾ ಫಿಲ್ಡಿಗಿಳಿದಿರತ್ತೆ. ಆದ್ರೆ, ಇದೇಲ್ಲದರ ನಡುವೆಯೂ ಆಗಂತುಕರ ತಂಡ ಮೂರು ಮರಗಳನ್ನು ನಿರ್ದಯವಾಗಿ ಕೊಂದು ಹಾಕಿರತ್ತೆ.

ಇದು ನಮ್ಮ ಅಂದಾಜು ಅಷ್ಟೇ..!
ಒಂದು ಅಂದಾಜಿನ ಪ್ರಕಾರ, ಮೂರು ಮರಗಳನ್ನು ಕಡಿದು ಸಾಗಿಸಲು ಬಂದಿದ್ದ ಆಗಂತುಕರ ತಂಡ ಜೊತೆಗೆ ಬೊಲೆರೋ ಪಿಕ್ ಅಪ್ ವಾಹನವನ್ನು ತಂದಿರತ್ತೆ. ಮರಗಳನ್ನು ಕಡಿದು ಬರೋಬ್ಬರಿ 12 ತುಂಡುಗಳನ್ನಾಗಿ ಮಾಡಿರತ್ತೆ. ಆನಂತರ ಆ 12 ಸಾಗವಾನಿ ತುಂಡುಗಳನ್ನೂ ವಾಹನದಲ್ಲಿ ತುಂಬಿಕೊಂಡು ಬಲು ಕಠಿಣಾತಿ ಕಠಿಣ ಮಾರ್ಗದಲ್ಲಿ ಸಾಗಿರತ್ತೆ. ಅಲ್ಲೊಂದು ಹಳ್ಳ ಇದೆ ಆ ಹಳ್ಳದ ಮೂಲಕವೇ ಫುಲ್ಲಿ ಲೋಡೆಡ್ ವಾಹನವನ್ನು ದಾಟಿಸಿಕೊಂಡು ಬಂದಿರತ್ತೆ. ಆದ್ರೆ, ಅಷ್ಟೇಲ್ಲ ಸಾಗಿ ಬಂದ ನಂತರ ವಾಹನದಲ್ಲಿದ್ದ ಎಂಟು ತುಂಡುಗಳನ್ನು ಅರಣ್ಯದ ನಡುರಸ್ತೆಯಲ್ಲೇ ಬೀಸಾಕಲಾಗಿದೆ. ಆ ನಂತರ ಹಾಗೆ ಸಾಗಿ ಬಂದ ಅರಣ್ಯಗಳ್ಳರು ಇನ್ನೇನು‌ಮುಖ್ಯ ರಸ್ತೆಗೆ ಬಂದು ತಲುಪುವ ಅನತಿ ದೂರದಲ್ಲಿ ಇನ್ನುಳಿದ ನಾಲ್ಕು ತುಂಡುಗಳನ್ನು ಬೀಸಾಕಿ ಹೋಗಿದ್ದಾರೆ. ರಸ್ತೆಯ ಸಮೀಪವೇ ನಾಲ್ಕು ತುಂಡುಗಳನ್ನು ಬೀಸಾಡಿ ಹೋಗಿದ್ದು ಇಲ್ಲಿ ಹಲವು ಪ್ರಶ್ನೆ ಹಾಗೂ ಅನುಮಾನಗಳಿಗೆ ಕಾರಣವಾಗಿದೆ.

DFO ಶಶಿಧರ್ ಹೆಗಡೆ

ಅಷ್ಟಕ್ಕೂ ಇದು ಫ್ರೀ ಪ್ಲ್ಯಾನ್ಡಾ..?
ನೀವೇ ಯೋಚಿಸಿ, ಅಷ್ಟೊಂದು ದುರ್ಗಮ ಕಾಡಿನ ರಸ್ತೆಯಲ್ಲಿ ಸಾಗಿ ಬಂದಿದ್ದ ಕಳ್ಳರು ನಡುರಸ್ತೆಯಲ್ಲೇ ಒಂದು ಕಡೆ ಎಂಟು ತುಂಡು ಚೆಲ್ಲಿ ಹೋಗಿದ್ದು ಯಾಕೆ..? ಅಲ್ಲದೇ, ಇನ್ನೇನು ಕೂಗಳತೆ ದೂರದಲ್ಲಿದ್ದ ರಸ್ತೆಯ ಸಮೀಪವೇ ಮತ್ತೆ ನಾಲ್ಕು ತುಂಡುಗಳನ್ನು ಬೀಸಾಕಿ ಬರೀ ಗೈಯಲ್ಲೇ ವಾಪಸ್ ಹೋಗಿದ್ದರ ಹಿಂದಿನ ಮರ್ಮವೇನು..? ಇದೇಲ್ಲ ಪ್ರಶ್ನೆಗಳು ಇಲಾಖೆಯ ಅಧಿಕಾರಿಗಳಿಗೆ ಗುಂಗು ಹಿಡಿಸಿವೆ. ಇಲ್ಲಿ, ಕಳ್ಳರು ಮಾಲು ಸಾಗಿಸಲೇಂದೇ ಬಂದಿದ್ದವರು ಹಾಗೆ ಬಿಟ್ಟು ಹೋಗಿದ್ದರ ಹಿಂದೆ ಪ್ರೀ ಪ್ಲ್ಯಾನ್ ಇತ್ತಾ..? ಇಲ್ಲಿನ ಅಧಿಕಾರಿಗಳ ಮೇಲೆ ಕೆಟ್ಟ ಹೆಸರು ತರುವ ವ್ಯವಸ್ಥಿತ ಸಂಚು ರೂಪಿಸಲಾಗಿತ್ತಾ..? ಗೊತ್ತಿಲ್ಲ. ಮೇಲ್ನೋಟಕ್ಕೆ ಮಾತ್ರ ಹಾಗೆ ಅನಿಸ್ತಿದೆ.

ದಕ್ಷ ACF ಶ್ರೀಶೈಲ್ ವಾಲಿ

ಹೊಸ ಗ್ಯಾಂಗ್ ಆ್ಯಕ್ಟಿವ್ ಆಯ್ತಾ..?
ಇಡಿ ಪ್ರಕರಣವನ್ನು ಮತ್ತೊಂದು ಆ್ಯಂಗಲ್‌ನಿಂದ ನೋಡುವುದಾದರೆ, ಎಲ್ಲೊ ಒಂದು ಕಡೆ, ಗುಂಜಾವತಿ ಅರಣ್ಯ ವ್ಯಾಪ್ತಿಯಲ್ಲಿ ಮತ್ತೆ ಅರಣ್ಯಗಳ್ಳರ ಪ್ರೋಫೇಶನಲ್ ಗ್ಯಾಂಗ್ ಮತ್ತೆ ಆ್ಯಕ್ಟಿವ್ ಆಯ್ತಾ ಅನ್ನೋ ಆತಂಕದ ಪ್ರಶ್ನೆಯೂ ಕಾಡ್ತಿದೆ. ಬರೋಬ್ಬರಿ ಎರಡು ವರ್ಷಗಳಿಂದ ಈ ಭಾಗದಲ್ಲಿ ಯಾವೊಂದೂ ಗ್ಯಾಂಗ್ ಗಳೂ ಸದ್ದು ಮಾಡಿರಲಿಲ್ಲ. ಯಾಕಂದ್ರೆ ಇಲ್ಲಿನ ಕೆಲವು ಖಡಕ್ ಅರಣ್ಯ ರಕ್ಷಕರು ಅಂತಹ ಗ್ಯಾಂಗ್ ಗಳ ಸದ್ದಡಗಿಸಿದ್ದರು. ಆದ್ರೆ, ಮತ್ತೆ ಅಂತಹ ಗ್ಯಾಂಗ್ ಆ್ಯಕ್ಟಿವ್ ಆಯ್ತಾ..? ಅನ್ನೋ ಪ್ರಶ್ನೆಯೂ ಕಾಡ್ತಿದೆ. ಯಾಕಂದ್ರೆ, ಈ ಪ್ರಕರಣ ನಡೆದ ಒಂದಿಷ್ಟು ದೃಷ್ಯಗಳು ಅಂತಹದ್ದೊಂದು ಅನುಮಾನ ಬರುವಂತೆ ಮಾಡಿದೆ.

ಸದ್ಯ ಯಾಲ್ಲಾಪುರ ಡಿಎಫ್ ಓ ಶಶಿಧರ್ ಹೆಗಡೆ ಸಾಹೇಬ್ರು, ಮುಂಡಗೋಡಿನ ಎಸಿಎಫ್ ವಾಲಿ ಸಾಹೇಬ್ರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸತ್ಯ ಇನ್ನೇನು ಹೊರಬೀಳುವ ಹಂತದಲ್ಲಿದೆ. ಬಂದಿದ್ದ ವಾಹನ ಯಾವುದು, ಎಲ್ಲಿಯದು..? ಅಷ್ಟಕ್ಕೂ ಅವತ್ತು ಅಲ್ಲಿ ಬಂದಿದ್ದ ಅರಣ್ಯ ಹಂತಕರು ಯಾರು..? ಅವ್ರು ಎಲ್ಲಿಯವರು..? ಇದೇಲ್ಲ ಪ್ರಶ್ನೆಗಳೊಂದಿಗೆ ತನಿಖೆ ನಡೆದಿದೆ. ಮಹತ್ತರ ಸುಳಿವುಗಳೂ ಸಿಕ್ಕಿದೆ. ಇನ್ನೇನು ಅಸಲೀಯತ್ತು ಹೊರಬಿದ್ದೇ ಬೀಳತ್ತೆ ಕಾಯಬೇಕಿದೆ ಅಷ್ಟೆ…?

error: Content is protected !!