ಮುಂಡಗೋಡಿನ ಅಂಗನವಾಡಿಯಲ್ಲಿ ಹಾವು ಕಚ್ಚಿದ್ದ ಬಾಲಕಿ ಕಿಮ್ಸ್ ನಲ್ಲಿ ಸಾವು..!

ಮುಂಡಗೋಡಿನ ಅಂಗನವಾಡಿಯಲ್ಲಿ ಹಾವು ಕಚ್ಚಿ ಗಂಭೀರಗೊಂಡಿದ್ದ ನಾಲ್ಕು ವರ್ಷದ ಬಾಲಕಿ ಬದುಕಿ ಉಳಿಯಲೇ ಇಲ್ಲ. ಮುಂಡಗೋಡ ತಾಲೂಕಾಸ್ಪತ್ರೆಯಿಂದ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದ್ದ ಬಾಲಕಿ ಮೃತಪಟ್ಟಿದ್ದಾಳೆ ಅಂತಾ ಕಿಮ್ಸ್ ವೈದ್ಯರು ದೃಢಪಡಿಸಿದ್ದಾರೆ‌.

ಅಂದಹಾಗೆ, ಮುಂಡಗೋಡಿನ ಹಳೂರು ಬಳಿಯ ಮಾರಿಕಾಂಬಾ ನಗರದ ಅಂಗನವಾಡಿಗೆ ಬಂದಿದ್ದ, ಅಂಗನವಾಡಿ ಹೊರಗೆ ಮೂತ್ರ ವಿಸರ್ಜನೆಗೆ ತೆರಳಿದ್ದ, ನಾಲ್ಕು ವರ್ಷದ ಪುಟ್ಟ ಕಂದಮ್ಮ ಮಯೂರಿ ಸುರೇಶ್ ಕುಂಬ್ಳೆಪ್ಪನವರ(4) ಎಂಬುವ ಬಾಲಕಿಗೆ ಹಾವು ಕಚ್ಚಿತ್ತು. ಆದ್ರೆ ಯಾವ ಹಾವು ಏನು ಅಂತಾ ಯಾರಿಗೂ ತಿಳಿದಿರಲಿಲ್ಲ.

ಬೆಳಿಗ್ಗೆ ಮಕ್ಕಳೊಂದಿಗೆ ಅಂಗನವಾಡಿಯಲ್ಲಿ ಮೃತ ಬಾಲಕಿ

ಹೀಗಾಗಿ, ತಕ್ಷಣವೇ ಮಗುವನ್ನು ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು, ಹಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿತ್ತು. ಆದ್ರೆ, ಮಾರ್ಗಮದ್ಯದಲ್ಲೇ ಬಾಲಕಿ ಸಾವನ್ನಪ್ಪಿದ್ದಳು. ಕಿಮ್ಸ್ ಗೆ ರವಾನಿಸಿದ ನಂತರ ವೈದ್ಯರು ಬಾಲಕಿ‌ ಮೃತ ಪಟ್ಟಿರೋದನ್ನು ದೃಢಪಡಿಸಿದ್ದಾರೆ. ಪೊಷಕರ ಆಕ್ರಂಧನ ಮುಗಿಲು ಮುಟ್ಟಿದೆ.

ಈ ನಡುವೆ ಈ ಘಟನೆ ನೋಡಿದಾಗ ನಮ್ಮ ಮುಂಡಗೋಡ ತಾಲೂಕಿನ ಅಂಗನವಾಡಿಗಳು ಅದೇಷ್ಟು ಸುರಕ್ಷಿತ..? ಅನ್ನೋ ಪ್ರಶ್ನೆ ಮೂಡಿದೆ..!

error: Content is protected !!