NMD ಜಮೀರ್ ಬಾಯ್ ಸೇಫ್..!  ಗದಗ ರಿಂಗ್ ರೋಡಲ್ಲಿ ಬಿಟ್ಟು ಹೋದ ಕಿಡ್ನ್ಯಾಪರ್ಸ್..! ಐವರು ಆರೋಪಿಗಳ ಹೆಡೆಮುರಿ ಕಟ್ಟಿದ್ರಾ ಮುಂಡಗೋಡ ಪೊಲೀಸ್ರು..?

ಮುಂಡಗೋಡಿನ NMD ಗ್ರೂಪ್ ನ ಮಾಲೀಕ ಜಮೀರ್ ಅಹ್ಮದ್ ದರ್ಗಾವಾಲೆ ಸೇಫಾಗಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಬಿಳಿ ಕಾರಲ್ಲಿ ಎತ್ತಾಕೊಂಡು ಹೋಗಿ, ಹಲ್ಲೆ ಮಾಡಿ ಹುಬ್ಬಳ್ಳಿ ಸಮೀಪ ಕಿಡ್ನ್ಯಾಪರ್ಸ್ ಬಿಟ್ಟು ಹೋಗಿದ್ದಾರಂತೆ. ಇನ್ನು ನಮ್ಮ ಮುಂಡಗೋಡ ಪೊಲೀಸ್ ಐದು ಜನ ಕಿಡ್ನ್ಯಾಪರ್ ರನ್ನು ಚಿಕ್ಕೋಡಿ ಸಮೀಪ ಹೆಡೆಮುರಿ ಕಟ್ಟಿದ್ದಾರೆ ಅನ್ನೋ ಮಾಹಿತಿ ಕೂಡ ಬರ್ತಿದೆ. ಆದ್ರೆ ಇನ್ನೂ ಖಚಿತತೆ ಸಿಗಬೇಕಿದೆ‌.

ಥೇಟು ಸಿನಿಮಾ ಸ್ಟೈಲು..!
ಅಂದಹಾಗೆ, ನಿನ್ನೆ ಮುಸ್ಸಂಜೆ ಹೊತ್ತಲ್ಲಿ ನಡೆದಿದ್ದ ಕಿಡ್ನ್ಯಾಪ್ ಕೇಸಿನಲ್ಲಿ ಆಗಂತುಕರ ಕೈಯಲ್ಲಿ ಜಮೀರ್ ಅಹ್ಮದ್ ದರ್ಗಾವಾಲೆ ಬಂಧಿಯಾಗಿದ್ದರು. ತಾಲೂಕಾ ಕ್ರೀಡಾಂಗಣದಿಂದ ಸಂತೆ ಮಾರುಕಟ್ಟೆ ರಸ್ತೆ ಮೂಲಕ ಬರ್ತಿದ್ದ ದರ್ಗಾವಾಲೆಯ ಸ್ಕೂಟಿಗೆ ಹಿಂದಿನಿಂದಲೇ ಕಾರು ಡಿಕ್ಕಿ ಹೊಡೆಸಿ ಕೆಡವಿದ್ದರು. ನಂತರ ಕಾರಲ್ಲಿ ಅಪಹರಿಸಿ ಪರಾರಿಯಾಗಿದ್ದರು. ಬಹುಶಃ ಮೇಲ್ನೋಟಕ್ಕೆ ಇದೊಂದು ಭಯಾನಕ ಸಿನಿಮಾ ಶೈಲಿಯ ಅಟ್ಯಾಕ್ ಆಗಿತ್ತು. ಹೀಗಾಗಿ, ಬಹುತೇಕ ಇಡೀ ಮುಂಡಗೋಡ ಬೆಚ್ಚಿ ಬಿದ್ದಿತ್ತು.

ಹಣಕ್ಕಾಗಿ ನಡೀತಾ..?
ಅಸಲು, ನಿನ್ನೆ ನಡೆದ ಕಿಡ್ನ್ಯಾಪಿಂಗ್ ಕೇಸನ್ನು ನೋಡಿದ್ರೆ, ಇದು ಹಣದ ಆಸೆಗಾಗಿ ಮಾಡಿದ ಕೃತ್ಯವಾ ಅನ್ನೋ ಅನುಮಾನ ಮೂಡಿಸಿದೆ. ಹಣಕ್ಕಾಗಿ ಯುವ ಉದ್ಯಮಿಯನ್ನು ಕಿಡ್ನ್ಯಾಪ್ ಮಾಡಿದ್ರಾ ಅನ್ನೋ ಅನುಮಾನ ಶುರುವಾಗಿದೆ. ಅಲ್ದೆ, ಹಲ್ಲೆ ಮಾಡಿ ಗದಗ ರಿಮನಗ್ ರೋಡ್ ರಸ್ತೆಯ ಪಕ್ಕ ಬಿಟ್ಟು ಪರಾರಿಯಾಗಿರೋ ಆಗಂತುಕರು ಅದೇನು ಸಂದೇಶ ಕೊಟ್ರು ಅನ್ನೋದೇ ಭಾರಿ ಕುತೂಹಲ ಮೂಡಿಸಿದೆ.

ಐವರು ಕಿಡ್ನ್ಯಾಪರ್ಸ್ ಖೆಡ್ಡಾಕ್ಕೆ..?
ಇನ್ನು, ನಿನ್ನೆ ಘಟನೆ ನಡೆದ ಕ್ಷಣದಿಂದಲೇ ಅಲರ್ಟ್ ಆಗಿದ್ದ ಮುಂಡಗೋಡ ಪೊಲೀಸ್ರು, ತಂಡಗಳಾಗಿ ಟ್ರೇಸಿಂಗ್ ಕಾರ್ಯ ಶುರು ಮಾಡಿದ್ರು. ಬಿಳಿ ಕಾರಲ್ಲಿ ಕಿಡ್ನ್ಯಾಪ್ ಮಾಡಿಕೊಂಡು ಬಂಕಾಪುರ ರಸ್ತೆ ಮೂಲಕ ಪರಾರಿಯಾಗಿದ್ದಾರೆ ಅನ್ನೋ ಮಾಹಿತಿ ಆಧಾರದಲ್ಲಿ ಬೆನ್ನು ಬಿದ್ದಿದ್ದ ಪೊಲೀಸ್ರು, ಎಲ್ಲಾ ದಿಕ್ಕುಗಳಿಂದಲೂ ನಾಕಾಬಂದಿ ಹಾಕಿದ್ರು. ಬೆನ್ನು ಬಿಡದೇ ಕಿಡ್ನ್ಯಾಪರ್ ಗಳ ಬೆನ್ನು ಹತ್ತಿದ್ದರು. ಹೀಗಾಗಿ, ರಾತ್ರಿ 11 ಗಂಟೆ ಸುಮಾರಿಗೆ ಹುಬ್ಬಳ್ಳಿಯ ಗದಗ ರಸ್ತೆ ರಿಂಗ್ ರೋಡಿನಲ್ಲಿ ಜಮೀರ್ ಅಹ್ಮದ್ ದರ್ಗಾವಾಲೆಯನ್ನು ಬಿಟ್ಟು ಪರಾರಿಯಾಗಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಹೀಗಾಗಿ, ಪಕ್ಕಾ ಖಚಿತತೆಯಲ್ಲಿ ಫಿಲ್ಡಿಗಿಳಿದ ಮುಂಡಗೋಡ ಪೊಲೀಸ್ರು ಚಿಕ್ಕೋಡಿ ಸಮೀಪ ಐವರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಖಾಸಗಿ ಆಸ್ಪತ್ರೆಗೆ ದಾಖಲು..!
ಅಪಹರಣಕಾರರಿಂದ ಹಲ್ಲೆಗೊಳಗಾಗಿ ಬಚಾವ್ ಅಗಿ ಬಂದಿರೋ ಜಮೀರ್ ಅಹ್ಮದ್
ಸದ್ಯ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದ್ರ ಜೊತೆ ಕಿಡ್ನ್ಯಾಪಿಂಗ್ ಆರೋಪಿಗಳನ್ನು ಇನ್ನೇನು ಕೆಲವೇ ಹೊತ್ತಲ್ಲಿ ಮುಂಡಗೋಡ ಪೊಲೀಸ್ರು ಮುಂಡಗೋಡಿಗೆ ಎಳೆದು ತರುವ ಎಲ್ಲಾ ಸಾಧ್ಯತೆ ಇದೆ. ಒಟ್ನಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿದ್ದ ಕಿಡ್ನ್ಯಾಪಿಂಗ್ ಕೇಸ್ ಬಹುತೇಕ ಸುಖಾಂತ್ಯ ಕಂಡಿದೆ ಎನ್ನಲಾಗ್ತಿದೆ.

error: Content is protected !!