ಭಾರೀ ಕುತೂಹಲ ಕೆರಳಿಸಿದ್ದ ಇಂದೂರು ಹಾಗೂ ಚಿಗಳ್ಳಿ ಸೊಸೈಟಿ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಶಿವರಾಮ್ ಹೆಬ್ಬಾರರ ಪರಮಾಪ್ತ ರವಿಗೌಡ ಪಾಟೀಲರು ಹಾಗೂ ಮತ್ತೋರ್ವ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಎಲ್.ಟಿ. ಪಾಟೀಲ್ ಸ್ಪರ್ಧಿಸಿದ್ದ ಈ ಎರಡೂ ಕ್ಷೇತ್ರಗಳು ಎಲ್ಲರ ಗಮನ ಸೆಳೆದಿತ್ತು. ಆದ್ರೆ, ಅಚ್ಚರಿಯೆಂಬಂತೆ ಇಂದೂರು ಸೊಸೈಟಿಯಲ್ಲಿ ರವಿಗೌಡ ಪಾಟೀಲರು ಸೋಲು ಕಂಡಿದ್ದಾರೆ. ಚಿಗಳ್ಳಿಯಲ್ಲಿ ಎಲ್ಟಿ ಪಾಟೀಲರು ಜಯಭೇರಿ ಬಾರಿಸಿದ್ದಾರೆ.
ಅಂದಹಾಗೆ, ಇಂದೂರು ಸೊಸೈಟಿಯಲ್ಲಿ ಸ್ಪರ್ಧಿಸಿದ್ದ ರವಿಗೌಡ ಪಾಟೀಲರು ಎದುರಾಳಿ ದೇವು ಕೆಂಚಗೊಣ್ಣವರ್ ಎದುರು 54 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. 414 ಮತಗಳನ್ನು ದೇವು ಕೆಂಚಗೊಣ್ಣವರ್ ಪಡೆದ್ರೆ, ಕೇವಲ 360 ಮತಗಳನ್ನು ಪಡೆದು ರವಿಗೌಡ ಪಾಟೀಲ್ ಸೋಲು ಒಪ್ಪಿಕೊಂಡಿದ್ದಾರೆ.
ಇನ್ನಷ್ಟು ಮಾಹಿತಿ ನೀಡಲಾಗುವುದು..!