ಮುಂಡಗೋಡಿನ NMD ಗ್ರೂಪ್ ಮಾಲೀಕನ ಮೇಲೆ ದುಷ್ಕರ್ಮಿಗಳ ಅಟ್ಯಾಕ್

ಮುಂಡಗೋಡಿನಲ್ಲಿ ಭಯಾನಕ ಥೇಟು ಸಿನಿಮಾ ಶೈಲಿಯ ಅಟ್ಯಾಕ್ ನಡೆದಿದೆ. ದುಷ್ಕರ್ಮಿಗಳ ಗುಂಪು ಏಕಾಏಕಿ ಸಿನಿಮಿಯ ರೀತಿಯಲ್ಲಿ ಅಟ್ಯಾಕ್ ಮಾಡಿ ಮುಂಡಗೋಡಿನ NMD ಗ್ರೂಪ್ ಮಾಲೀಕ ಜಮೀರ್ ಅಹ್ಮದ್ ದರ್ಗಾವಾಲೆ ಎಂಬುವವರನ್ನ ಚಾಕುವಿನಿಂದ ಚುಚ್ಚಿದ್ದಲ್ಲದೇ, ವಾಹನದಲ್ಲಿ ಎತ್ತಾಕೊಂಡು ಕಿಡ್ನ್ಯಾಪ್ ಮಾಡಿಕೊಂಡು ಹೋಗಿದ್ದಾರೆ ಅನ್ನೋ ಬಿಗ್ ಬ್ರೇಕಿಂಗ್ ನ್ಯೂಸ್ ಬರ್ತಿದೆ

ಅದು ಮುಸ್ಸಂಜೆ ಹೊತ್ತು..!
ಅದು ಗುರುವಾರದ ಸಂಜೆ ಹೊತ್ತು, ಮುಂಡಗೋಡಿನ ಸಂತೆ ಮಾರ್ಕೆಟ್ ಹತ್ತಿರದ ಶಾಸಕರ ಮಾದರಿ ಶಾಲೆ ಹತ್ತಿರ ಸ್ಕೂಟಿ ಮೇಲೆ ಬರುತ್ತಿದ್ದ ವ್ಯಕ್ತಿಗೆ ಹಿಂದಿನಿಂದ ಬಂದು ಏಕಾಏಕಿ ವಾಹನ ಡಿಕ್ಕಿ ಹೊಡೆದು ಕೆಡವಿ, ವಾಹನದ ಮೇಲೆ ಎತ್ತಿ ಹಾಕೊಂಡು ಪರಾರಿಯಾಗಿದ್ದಾರೆ ಎನ್ನಲಾಗ್ತಿದೆ.

ಅದು ಪಕ್ಕಾ ರೌಡಿಗಳ ತಂಡ..!
ಅಂದಹಾಗೆ, ಮುಂಡಗೋಡಿನ ಜಮೀರ್ ಅಹ್ಮದ್ ದರ್ಗಾವಾಲೆ ಅನ್ನೊ ವ್ಯಕ್ತಿಯೇ ಸದ್ಯ ಕಿಡ್ನ್ಯಾಪ್ ಆಗಿದ್ದಾರೆ. ಈವ್ರು ತನ್ನ ಸ್ನೇಹಿತನೊಂದಿಗೆ ಸ್ಕೂಟಿ ಮೇಲೆ ಸಂಜೆ 7.50 ರ ಸುಮಾರಿಗೆ ಸಂತೆ ಮಾರುಕಟ್ಟೆ ಹತ್ಯಿರದ ಶಾಸಕರ ಮಾದರಿ ಶಾಲೆ ಬಳಿ ತೆರಳುತ್ತಿದ್ದರು. ಈ ವೇಳೆ ಏಕಾಏಕಿ ವಾಹನದ ಮೇಲೆ ಬಂದಿದ್ದ ರೌಡಿಗಳ ತಂಡ, ಹಿಂದಿನಿಂದಲೇ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಕೆಳಗೆ ಬಿದ್ದ ಜಮೀರ್ ಅಹ್ಮದ್ ದರ್ಗಾವಾಲೆಗೆ ಚಾಕುವಿನಿಂದ ಇರಿದಿದ್ದಾರೆ ಎನ್ನಲಾಗಿದೆ. ನಂತ್ರ ಗಾಯಗೊಂಡ ಬಿದ್ದರೂ ಬಿಡದೇ, ತಾವು ತಂದಿದ್ದ ವಾಹನದಲ್ಲಿ ಎತ್ತಾಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಪೊಲೀಸ್ರಿಂದ ಚೇಸಿಂಗ್ ಶುರು..!
ಸುದ್ದಿ ತಿಳಿದ ಮುಂಡಗೋಡ ಪೊಲೀಸರು ಕಿಡ್ನ್ಯಾಪ್ ಮಾಡಿಕೊಂಡು ಪರಾರಿಯಾಗಿರೋ ಆಗಂತುಕರಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ. KA 23 ನೋಂದಣಿ ಸಂಖ್ಯೆಯ ಕಾರ್ ಇದಾಗಿದ್ದು, ಹುಬ್ಬಳ್ಳಿ ರಸ್ತೆ ಕಡೆ ಪರಾರಿಯಾಗಿದೆ ಎನ್ನಲಾಗ್ತಿದೆ.

ಸದ್ಯ ಮುಂಡಗೋಡ ಮತ್ತಷ್ಟು ಆತಂಕಗೊಂಡಿದೆ. ಯಾವ ಹೊತ್ತಲ್ಲಿ ಏನೇನಾಗತ್ತೋ ಯಾರಿಗೂ ತಿಳಿಯದ ಹಾಗಾಗಿದೆ. ಮುಂದೆ ದೇವ್ರೇ ಕಾಪಾಡಬೇಕು.

error: Content is protected !!