ಮುಂಡಗೋಡ ಟಿಂಬರ್ ಡೀಪೋದಲ್ಲಿ ಕಟ್ಟಿಗೆ ಕಳ್ಳಾಟ ಕೇಸ್, ಐವರು DyRFO ಗಳು ಸಸ್ಪೆಂಡ್, RFO ಅಮಾನತ್ತಿಗೆ ಪ್ರಸ್ತಾವನೆ..!

ಮುಂಡಗೋಡ ಅರಣ್ಯ ಇಲಾಖೆಯ ಟಿಂಬರ್ ಡೀಪೋದಲ್ಲಿನ ಕಳ್ಳಾಟ ಕೇಸ್ ನಲ್ಲಿ ಸದ್ಯ ಐವರು DyRFO ಗಳು ನಿರ್ಧಾಕ್ಷಿಣ್ಯವಾಗಿ ಅಮಾನತ್ತಾಗಿದ್ದಾರೆ. ಐವರನ್ನೂ ಅಮಾನತ್ತು ಮಾಡಿ ಶಿರಸಿ ಸಿಸಿಎಫ್ ಕೆ. ವಿ. ವಸಂತ ರೆಡ್ಡಿರವರು ಆದೇಶಿಸಿದ್ದಾರೆ. ಇನ್ನು ಇದೇ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರೋ RFO ಜಿ.ಟಿ.ರೇವಣಕರ್ ಸಾಹೇಬ್ರನ್ನು ಅಮಾನತ್ತುಗೊಳಿಸುವಂತೆ ಬೆಂಗಳೂರು PCCF ರವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಹುಶಃ ನಾಳೆ ಸಂಜೆಯಷ್ಟೊತ್ತಿಗೆ RFO ಸಾಹೇಬ್ರೂ ಕೂಡ ಸಸ್ಪೆಂಡ್ ಆಗಿ ವಿಶ್ರಾಂತಿ ಪಡಿಯೋದು ನಿಕ್ಕಿಯಾಗಿದೆ‌. ಅದ್ರ ಜೊತೆ, ಇಡೀ ಇಲಾಖೆಯ ಮಾನವನ್ನು ಬೀದಿಯಲ್ಲಿ ಹರಾಜು ಹಾಕಿದ್ದ ಪ್ರಕರಣವೀಗ ಒಂದು ಹಂತಕ್ಕೆ ಬಂದಂತಾಗಿದೆ.

ಅಮಾನತ್ತು ಆದೇಶ

ಸಸ್ಪೆಂಡ್ ಆದವರು ಯಾರು..?
ಮುಂಡಗೋಡ ಸರ್ಕಾರಿ ಮರಮಟ್ಟು ಸಂಗ್ರಹಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉಪ ವಲಯ ಅರಣ್ಯಾಧಿಕಾರಿ ಸುರೇಶ ವಿ ವಡ್ಕರ, ಮಾರುತಿ ಗ. ಸೋರಗಾಂವಿ, ಮಹೇಶ ಎಮ್, ಬೋರಕರ್, ಹನಮಂತ ಭೀ ಬಂಡಿವಡ್ಡರ, ಗುರುಚಂದ್ರ ಎಮ್. ಬ್ಯಾಳಿಯವರ ಇವರುಗಳನ್ನು ಕರ್ನಾಟಕ ಅರಣ್ಯ ಸಂಹಿತೆ ಕಂಡಿಕೆ 121 (3), (b), (c) & (d) ನ್ನು ಉಲ್ಲಂಘಿಸಿರುವುದು ಹಾಗೂ ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮಗಳು, 2021ರ ನಿಯಮ 3(1) 1, 10, 11, 2) (i) ದ ಆಸ್ಪದಗಳಿಗೆ ವ್ಯತಿರಿಕ್ತವಾಗಿ ವರ್ತಿಸಿ, ಸರ್ಕಾರಿ ನೌಕರನಿಗೆ ತಕ್ಕುದಲ್ಲದ ರೀತಿಯಲ್ಲಿ ನಡೆದುಕೊಂಡು ಅಪರಾಧಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದು ಕಂಡು ಬಂದಿರುವುದು, ಕರ್ತವ್ಯದಲ್ಲಿ ಬೇಜವಾಬ್ದಾರಿತನ ಹಾಗೂ ಕರ್ತವ್ಯಲೋಪ ಎಸಗಿರುವುದು ಮತ್ತು ಸರ್ಕಾರಿ ಕರ್ತವ್ಯವನ್ನು ನಿರ್ವಹಿಸುವಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ನಾಗರೀಕ ಸೇವಾ ವರ್ಗಿಕರಣ ನಿಯಂತ್ರಣ ಮತ್ತು ಮೇಲ್ಮನವಿ ನಿಯಮಾವಳಿ 1957ರ ನಿಯಮ 10(1)ರ ಪ್ರಕಾರ ಇಲಾಖಾ ವಿಚಾರಣೆಯನ್ನು ಬಾಕಿಯಿರಿಸಿ, ಈ ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಸರ್ಕಾರಿ ಸೇವೆಯಿಂದ ಅಮಾನತ್ತಿನಲ್ಲಿರಿಸಿ ಆದೇಶಿಸಲಾಗಿದೆ.

RFO ರೇವಣಕರ್
error: Content is protected !!