ಮುಂಡಗೋಡ ತಾಲೂಕಿನ ಹುನಗುಂದದಲ್ಲಿ ಇಂದು ಮಂಗಳವಾರ ಗ್ರಾಮ ಸಭೆ ಆಯೋಜಿಸಲಾಗಿತ್ತು. ವಿಠ್ಠಲ ರುಕುಮಾಯಿ ಮಂದಿರದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಬಹುತೇಕ ಚಿಕ್ಕ ನೀರಾವರಿ ಇಲಾಖೆ ಅಧಿಕಾರಿಯ ಬೇಜವಾಬ್ದಾರಿ ಹಾಗೂ ಅಸಂಬದ್ಧ ಉತ್ತರಗಳಿಂದ ಭಾರೀ ಕೋಲಾಹಲಕ್ಕೆ ಕಾರಣವಾಯ್ತು. ಚಿಕ್ಕ ನೀರಾವರಿ ಇಲಾಖೆಯ ಅಧಿಕಾರಿಯನ್ನು ಗ್ರಾಮಸ್ಥರು ಹಿಗ್ಗಾ ಮುಗ್ಗಾ ಜಾಡಿಸಿದ್ರು. ಅದು 75 ಲಕ್ಷದ ಕಾಮಗಾರಿ..! ಅಸಲು, ಹುನಗುಂದ ಗ್ರಾಮ ಪಂಚಾಯತಿ ವ್ಯಾಪ್ತಿಯ ಅತ್ತಿವೇರಿ ಜಲಾಶಯದ ಕಾಲುವೆ ಕಾಮಗಾರಿಯಲ್ಲಿ ಭಾರೀ ಅವ್ಯವಹಾರದ ಆರೋಪ ಕೇಳಿ ಬಂದಿದೆ. ಜಲಾಶಯದ ಅಡಿಯಲ್ಲಿ ಬರುವ ಅತ್ತಿವೇರಿ, ಹುನಗುಂದ, ಅಗಡಿ ಗ್ರಾಮಗಳ ರೈತರ ಜಮೀನುಗಳಿಗೆ ನೀರುಣಿಸುವ ಕಾಲುವೆ ಕಾಮಗಾರಿ ಅಕ್ಷರಶಃ ಕಳಪೆಯಾಗಿದ್ದು, ಬರೋಬ್ಬರಿ 75 ಲಕ್ಷ ರೂ. ವೆಚ್ಚದ ಕಾಮಗಾರಿ ಹಳ್ಳ ಹಿಡಿದಿದೆ. ಈ ಕುರಿತು ಗ್ರಾಮಸ್ಥರು ಚಿಕ್ಕ ನೀರಾವರಿ ಇಲಾಖೆಯ ಅಧಿಕಾರಿಯನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಸಮರ್ಪಕ ಉತ್ತರ ನೀಡಬೇಕಿದ್ದ ಅಧಿಕಾರಿ, ಅದನ್ನೇಲ್ಲ ಈಗ್ಯಾಕೇ ಕೇಳ್ತಿದ್ದಿರಿ..? ಅವಾಗ ನೀವು ಎಲ್ಲಿ ಹೋಗಿದ್ರಿ..? ಅವಾಗ್ಲೇ ಕೇಳಬೇಕಿತ್ತು ಅಂತಾ...
Top Stories
ಮಹಾರಾಷ್ಟ್ರದಿಂದ ಕಬ್ಬು ಕಟಾವಿಗೆ ಬಂದಿದ್ದ ಅಪ್ರಾಪ್ತೆಯನ್ನ ಆ ಹುಡುಗ ಅತ್ಯಾಚಾರ ಮಾಡಿದ್ನಾ..? ಹಾಗಿದ್ರೆ ಕೇಸ್ ಏನಾಯ್ತು..?
ಟ್ಯಾಕ್ಸ್ ವಸೂಲಿಯಲ್ಲಿ ಮುಂಡಗೋಡ ತಾಲೂಕು ರಾಜ್ಯಕ್ಕೇ ಪ್ರಥಮ..! ತಾಪಂ ಗ್ರಾಪಂ ಅಧಿಕಾರಿ, ಸಿಬ್ಬಂದಿಗಳ ಸಾಧನೆ..!!
ಮುಂಡಗೋಡ ಬೆಂಡಿಗೇರಿ ಪೆಟ್ರೊಲ್ ಬಂಕ್ ಹತ್ತಿರ ಬೈಕ್ ಅಪಘಾತ, ವೃದ್ದನ ಕಾಲು ಕಟ್..!
ಮಳಗಿ-ಬನವಾಸಿ ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ, ಓರ್ವ ಸ್ಥಳದಲ್ಲೇ ಓರ್ವ ಸಾವು, ಮತ್ತೋರ್ವ ಗಂಭೀರ..!
NMD ಕಿಡ್ನ್ಯಾಪ್ ಕೇಸ್, ಮತ್ತೆ ಐವರು ಆರೋಪಿಗಳು ಅಂದರ್, ಪೊಲೀಸರು ಆರೋಪಿಗಳಮದ್ಯೆ ಭಾರೀ ಕಾಳಗ..! ಗುಂಡೇಟು..!
NMD ಜಮೀರ್ ಬಾಯ್ ಸೇಫ್..! ಗದಗ ರಿಂಗ್ ರೋಡಲ್ಲಿ ಬಿಟ್ಟು ಹೋದ ಕಿಡ್ನ್ಯಾಪರ್ಸ್..! ಐವರು ಆರೋಪಿಗಳ ಹೆಡೆಮುರಿ ಕಟ್ಟಿದ್ರಾ ಮುಂಡಗೋಡ ಪೊಲೀಸ್ರು..?
ಮುಂಡಗೋಡಿನ NMD ಗ್ರೂಪ್ ಮಾಲೀಕನ ಮೇಲೆ ದುಷ್ಕರ್ಮಿಗಳ ಅಟ್ಯಾಕ್
ಟಿಬೇಟಿಯನ್ ಕಾಲೋನಿ ಬಳಿ ಬೈಕ್ ಗಳ ನಡುವೆ ಡಿಕ್ಕಿ, ಓರ್ವ ಸವಾರ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!
ಮುಂಡಗೋಡಿನ ಮುಲ್ಲಾ ಓಣಿಯ ಬಾವಿಯಲ್ಲಿ ವ್ಯಕ್ತಿಯ ಶವ ಪತ್ತೆ..! ಆತ್ಮಹತ್ಯೆನಾ..?
ಮುಂಡಗೋಡಿನ ಅಂಗನವಾಡಿಯಲ್ಲಿ ಹಾವು ಕಚ್ಚಿದ್ದ ಬಾಲಕಿ ಕಿಮ್ಸ್ ನಲ್ಲಿ ಸಾವು..!
ಮುಂಡಗೋಡಿನಲ್ಲಿ ಅಂಗನವಾಡಿಗೆ ಹೋಗಿದ್ದ ಪುಟ್ಟ ಬಾಲಕಿಗೆ ಕಚ್ಚಿದ ಹಾವು..!
ಹಳೇ ದ್ವೇಷದ ಹಿನ್ನಲೆ ಇಬ್ಬರಿಗೆ ಚಾಕು ಇರಿತ
ಇಂದೂರು ಸೊಸೈಟಿ ಚುನಾವಣೆ: ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತರು..! ರೈತ ಒಕ್ಕೂಟಕ್ಕೆ ಮೂರು ಸ್ಥಾನಗಳು ಮಾತ್ರ..!
ಇಂದೂರು ಸೊಸೈಟಿ ಚುನಾವಣೆ ಅಚ್ಚರಿ ಫಲಿತಾಂಶ: ಮಾಜಿ ಜಿಪಂ ಸದಸ್ಯ ರವಿಗೌಡ ಪಾಟೀಲ್ ಸೋಲು..!
ಚವಡಳ್ಳಿ ಸೊಸೈಟಿ ಚುನಾವಣೆ: 11 ರಲ್ಲಿ ಕಾಂಗ್ರೆಸ್ ಬೆಂಬಲಿತರದ್ದೇ ಭರ್ಜರಿ ಗೆಲುವು..! ಬಿಜೆಪಿಗೆ ದಕ್ಕಿದ್ದು ಒಂದೇ ಒಂದು ಸ್ಥಾನ..!
ಮುಂಡಗೋಡ LSMP ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ, 12 ರ ಪೈಕಿ 9 ರಲ್ಲಿ ಕೈ ಬೆಂಬಲಿತರ ಗೆಲುವು..!
ಹುಬ್ಬಳ್ಳಿ ಸಿಲಿಂಡರ್ ಬ್ಲಾಸ್ಟ್: ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಸಾವು, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ ಹಿನ್ನೆಲೆ, ಶುಕ್ರವಾರ ಸರ್ಕಾರಿ ರಜೆ ಘೋಷಣೆ..! ಶಾಲಾ ಕಾಲೇಜುಗಳಿಗೆ ರಜೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ..! ನಾಳೆಯ ಬೆಳಗಾವಿ ಕೈ ಕಾರ್ಯಕ್ರಮ ರದ್ದು..!
ಹುನಗುಂದ ಗ್ರಾಮಸಭೆಯಲ್ಲಿ ಕೋಲಾಹಲ, ಅಸಂಬದ್ಧ ಉತ್ತರಿಸಿದ ಚಿಕ್ಕ ನೀರಾವರಿ ಇಲಾಖೆ ಅಧಿಕಾರಿಗೆ ಹಿಗ್ಗಾ ಮುಗ್ಗಾ ತರಾಟೆ..!
ಹಸಿಮೇವು ತಿಂದ ಕೆಲವೇ ಹೊತ್ತಲ್ಲಿ ಆಕಳು ಮತ್ತು ಕರು ದಾರುಣ ಸಾವು, ಹುನಗುಂದದಲ್ಲಿ ಘಟನೆ..!
ಮುಂಡಗೋಡ: ತಾಲೂಕಿನ ಹುನಗುಂದದಲ್ಲಿ ಹಸಿಮೇವು ತಿಂದು ಕೆಲವೇ ಹೊತ್ತಲ್ಲಿ ಆಕಳು ಮತ್ತು ಕರು ಸಾವನ್ನಪ್ಪಿರೋ ಘಟನೆ ನಡೆದಿದೆ. ಮೇವು ತಿಂದ ಕೆಲವೇ ಹೊತ್ತಲ್ಲಿ ಸಾವು ಕಂಡಿದ್ದು, ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹುನಗುಂದ ಗ್ರಾಮದ ಬಸವರಾಜ್ ಗುರುಸಿದ್ದಪ್ಪ ಚಬ್ಬಿ ಎಂಬುವವರಿಗೆ ಸೇರಿದ ಸುಮಾರು 37 ಸಾವಿರ ರೂ. ಮೌಲ್ಯದ ಆಕಳು ಮತ್ತು ಕರು ದಾರುಣ ಸಾವು ಕಂಡಿದ್ದು ಆಘಾತ ತಂದಿದೆ. ಇನ್ನು ಪಶು ವೈದ್ಯರು ಸ್ಥಳಕ್ಕೆ ಆಗಮಿಸಿ ಸಾವಿಗೆ ಕಾರಣವೇನು ಅಂತ ಪರಿಶೀಲನೆ ನಡೆಸಿದ್ದಾರೆ.
ಚೌಡಳ್ಳಿ ಸೊಸೈಟಿಯಲ್ಲಿ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷ, ಬಿಜೆಪಿಗೆ ಭಾರೀ ಮುಖಭಂಗ..!
ಮುಂಡಗೋಡ: ತಾಲೂಕಿನ ಚೌಡಳ್ಳಿ ಸೊಸೈಟಿಯಲ್ಲಿ ಬಿಜೆಪಿಗೆ ಭಾರೀ ಹೊಡೆತ ಬಿದ್ದಂತಾಗಿದೆ. ನಿಚ್ಚಳ ಬಹುಮತವಿದ್ದರೂ ಬಿಜೆಪಿಗೆ ಅಧಿಕಾರ ಅಕ್ಷರಶಃ ಕೈತಪ್ಪಿದೆ. ಬದಲಾಗಿ, ಕಾಂಗ್ರೆಸ್ ಬೆಂಬಲಿತರು ಸೊಸೈಟಿಯಲ್ಲಿ ಜಯದ ಝಂಡಾ ಹಾರಿಸಿದ್ದಾರೆ. ಇದ್ರೊಂದಿಗೆ ಇಲ್ಲಿ ಬಿಜೆಪಿಗೆ ಭಾರೀ ಮುಖಭಂಗ ಆದಂತಾಗಿದೆ. ಅಂದಹಾಗೆ, ಚೌಡಳ್ಳಿ ಸೊಸೈಟಿಯಲ್ಲಿ ಕಾಂಗ್ರೆಸ್ ಬೆಂಬಲಿತ ಧರ್ಮಣ್ಣ ಬಸಪ್ಪ ಅರೆಗೊಪ್ಪ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಜೊತೆಗೆ, ಬಿಜೆಪಿಯ ರಾಜವ್ವ ದೇವಿಂದ್ರಪ್ಪ ಹಾನಗಲ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಒಟ್ಟು 13 ಸದಸ್ಯ ಬಲದ ಚೌಡಳ್ಳಿ ಸೊಸೈಟಿಯಲ್ಲಿ ಕೇವಲ 7 ಸದಸ್ಯರ ಅಧ್ಯಕ್ಷರ ಪರವಾಗಿ ಮತ ಚಲಾಯಿಸಿದ್ದಾರೆ. ಹಾಗೆನೇ, ಉಪಾಧ್ಯಕ್ಷ ಸ್ಥಾನಕ್ಕಾಗಿ ಕಣದಲ್ಲಿದ್ದ ಬಿಜೆಪಿ ಬೆಂಬಲಿತ ಸದಸ್ಯೆಗೆ 7 ಸದಸ್ಯರು ಮತ ಚಲಾಯಿಸಿದ್ದಾರೆ. ಹೀಗಾಗಿ, ಅಧ್ಯಕ್ಷ ಸ್ಥಾನ ಬಿಜೆಪಿಗೆ ತಪ್ಪಿ ಕಾಂಗ್ರೆಸ್ ಬೆಂಬಲಿತರ ಪಾಲಾಗಿದೆ.
ಟಿಬೇಟಿಯನ್ ಕ್ಯಾಂಪ್ ನಂಬರ್ 4 ರಲ್ಲಿ ವ್ಯಕ್ತಿಯ ಭೀಕರ ಹತ್ಯೆ..! ಕಳ್ಳತನಕ್ಕೆ ಬಂದವನು ಮಾಜಿ ಸೈನಿಕನಿಂದ ಹೆಣವಾದ್ನಾ..?
ಮುಂಡಗೋಡ ತಾಲೂಕಿನ ಟಿಬೇಟಿಯನ್ ಕ್ಯಾಂಪ್ ನಂಬರ್ 4 ರಲ್ಲಿ ಭೀಕರ ಹತ್ಯೆಯಾಗಿದೆ. ಟಿಬೇಟಿಯನ್ ಮಾಜಿ ಸೈನಿಕನೊಬ್ಬ 36 ವರ್ಷದ ಯುವಕನನ್ನು ಹತ್ಯೆ ಮಾಡಿದ್ದಾನೆ ಅನ್ನೋ ಮಾಹಿತಿ ಲಭ್ಯವಾಗಿದೆ. ಅಂದಹಾಗೆ, ನಟ್ಟ ನಡುರಾತ್ರಿಯಲ್ಲಿ ನಡೆದಿರೋ ಘಟನೆಯಲ್ಲಿ ಆರೋಪಿಯೂ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ. ಟಿಬೇಟಿಯನ್ ಕ್ಯಾಂಪ್ ನಂಬರ್ 4 ರ Jamyang Dakpa @ Lobsang S/o Tenzin Yeshi(35) ಎಂಬುವವನೇ ಕೊಲೆಯಾದ ವ್ಯಕ್ತಿಯಾಗಿದ್ದಾನೆ. ಇನ್ನು ಅದೇ ಕ್ಯಾಂಪಿನ ವಾಸಿ Gonpo Choedak S/o Thinley (50) ಎಂಬುವನೇ ಕೊಲೆಯ ಆರೋಪಿಯಾಗಿದ್ದಾನೆ. ಘಟನೆ ಏನು..? ಮುಂಡಗೋಡ ತಾಲೂಕಿನ ಟಿಬೇಟಿಯನ್ ಕ್ಯಾಂಪ್ ನಂಬರ್ 4 ರಲ್ಲಿ ರಾತ್ರಿ ಕೊಲೆಯಾದ ವ್ಯಕ್ತಿ Jamyang Dakpa @ Lobsang S/o Tenzin Yeshi ತನ್ನ ಮನೆಯ ಸಮೀಪವೇ ಇರುವ ಮಾಜಿ ಸೈನಿಕನ ಮನೆಗೆ ಕೈಯಲ್ಲಿ ಚಾಕು ಹಿಡಿದುಕೊಂಡು ಹೋಗಿದ್ದ ಎನ್ನಲಾಗಿದೆ. ಆ ಹೊತ್ತಲ್ಲಿ, ಬಾಗಿಲು ಬಡಿದಾಗ ಬಾಗಿಲು ತೆರೆದ ಮಾಜಿ ಸೈನಿಕನ ಮೇಲೆ ಏಕಾಏಕಿ ದಾಳಿ ಮಾಡಿದ್ದ...
ಹುನಗುಂದ ಬಸವೇಶ್ವರ ದೇವಸ್ಥಾನ ನಿರ್ಮಾಣಕ್ಕೆ 1 ಲಕ್ಷ ರೂ. ಚೆಕ್ ಹಸ್ತಾಂತರ..!
ಮುಂಡಗೋಡ ತಾಲೂಕಿನ ಹುನಗುಂದ ಬಸವೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ಮಂಜೂರಾದ ಅನುದಾನ 1 ಲಕ್ಷ ರೂ. ಮೊತ್ತದ ಡಿ ಡಿ ವಿತರಿಸಲಾಯಿತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕರು ಹಾಗೂ ಯೋಜನಾಧಿಕಾರಿ ಗಳು DD ಯನ್ನು ಬಸವೇಶ್ವರ ಟ್ರಸ್ಟ ಕಮಿಟಿ ಅಧ್ಯಕ್ಷರಿಗೆ, ಸರ್ವ ಸದ್ಯಸರಿಗೆ ಹಸ್ತಾಂತರಿಸಿದ್ರು.. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದ್ಯಸ್ಯರು, ಹಾಗೂ ಸಮಿತಿಯ ಸದಸ್ಯರು, ಗಣ್ಯರು ಸೇರಿದಂತೆ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನಂದಿಕಟ್ಟಾ, ಬಸಾಪುರ, ಅಗಡಿ ಆಸುಪಾಸು ಚಿರತೆ ಪ್ರತ್ಯಕ್ಷ, ಹೆಜ್ಜೆ ಗುರುತುಗಳು ಪತ್ತೆ, ಮರಿಯೊಂದಿಗೆ ಓಡಾಡುತ್ತಿದೆಯಾ ಚಿರತೆ..?
ಮುಂಡಗೋಡ ತಾಲೂಕಿನ ಬಸಾಪುರ, ನಂದಿಕಟ್ಟಾ, ಅಗಡಿ ಭಾಗದ ಅರಣ್ಯ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷಗೊಂಡಿದೆ. ಮರಿಯೊಂದಿಗೆ ತಾಯಿ ಚಿರತೆ ಇಲ್ಲಿ ಓಡಾಡುತ್ತಿದೆ ಅನ್ನೋದು ಕನ್ಫರ್ಮ್ ಆಗಿದೆ. ಹಾಗಂತ ಅರಣ್ಯ ಇಲಾಖೆಯ ಮೂಲಗಳು ದೃಢಪಡಿಸಿವೆ. ಬಸಾಪುರದ ಕಾಂಡಚಿನ ಗದ್ದೆಗಳಲ್ಲಿ ಹೆಜ್ಜೆಯ ಗುರುತುಗಳು ಪತ್ತೆಯಾಗಿದ್ದು, ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ, ಸಾರ್ವಜನಿಕರಿಗೆ ಅರಣ್ಯ ಇಲಾಖೆಯಿಂದ ಎಚ್ಚರಿಕೆಯ ಸಂದೇಶಗಳನ್ನು ಡಂಗುರದ ಮೂಲಕ ರವಾನಿಸಲಾಗುತ್ತಿದೆ. ನಾಯಿ ಕೊಂಡೊಯ್ದ ಚಿರತೆ..! ಅಂದಹಾಗೆ, ಕಳೆದ ನಾಲ್ಕೈದು ದಿನಗಳ ಹಿಂದೆ ಬಸಾಪುರ ಸಮೀಪದ ಕಾಡಂಚಿನ ಗದ್ದೆಯಲ್ಲಿ ಗೋವಿನಜೋಳ ಕಾಯಲು ಹೋಗಿದ್ದ ರೈತನಿಗೆ ಚಿರತೆ ಇರುವುದು ಕಂಡು ಬಂದಿದೆ. ಗದ್ದೆ ಕಾಯಲು ಜೊತೆಯಿದ್ದ ನಾಯಿಯನ್ನು ಚಿರತೆ ಎತ್ತಿಕೊಂಡು ಹೋಗಿ ತಿಂದು ಹಾಕಿತ್ತು. ನಂತರದಲ್ಲಿ, ಎಚ್ಚೆತ್ತುಕೊಂಡಿದ್ದ ಆ ಭಾಗದ ರೈತರು, ಸಾರ್ವಜನಿಕರು ಅರಣ್ಯ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಚಿರತೆ ಹೆಜ್ಜೆ ಗುರುತು ಪತ್ತೆ..! ಇನ್ನು, ಚಿರತೆ ಬಂದಿದೆ ಅನ್ನೋ ಮಾಹಿತಿ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಚಿರತೆ ಬಂದಿರೋ...
ಹಾವೇರಿ ಪಟಾಕಿ ಗೋದಾಮಿಗೆ ಬೆಂಕಿ ಪ್ರಕರಣ: ಮೂವರ ಜೀವಂತ ದಹನ, ಇನ್ನೂ ಹಲವರು ಸಾವು ಶಂಕೆ..!
ಹಾವೇರಿ : ನಗರಕ್ಕೆ ಸಮೀಪದ ಅಲದಕಟ್ಟಿ ಗ್ರಾಮದಲ್ಲಿನ ಪಟಾಕಿ ದಾಸ್ತಾನು ಮಾಡಿದ್ದ ಗೋದಾಮಿಗೆ ಬೆಂಕಿ ತಗಲಿ ಭಾರೀ ಅನಾಹುತ ಸಂಭವಿಸಿದೆ. ಈ ವೇಳೆ ಮೂರು ಅಮೂಲ್ಯ ಜೀವಗಳು ಬೆಂಕಿಯ ಕೆನ್ನಾಲಿಗೆಯಲ್ಲಿ ಬೆಂದಿರುವುದು ಘಟನೆಯ ಭೀಕರತೆಗೆ ಸಾಕ್ಷಿಯಾಗಿದೆ. ಈಗ್ಗೆ ಕೆಲವೇ ಹೊತ್ತಿನಲ್ಲಿ ಸಂಜೆ 5 ಗಂಟೆ ವೇಳೆಗೆ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತಂದು ಪರಿಶೀಲಿಸುವ ವೇಳೆ ಶೆಟರ್ಸ್ ಬಳಿ ಮೂವರ ಶವ ಕಂಡು ಬಂದಿವೆ. ಗೋದಾಮಿನಲ್ಲಿ ರ್ಯಾಕ್ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು. ಅದರ ಒಳಗೆ ಇನ್ನು ಹಲವರ ಶವಗಳು ಇರಬಹುದು ಎಂದು ಶಂಕಿಸಲಾಗಿದೆ. ಪರಿಶೀಲನೆಯ ಕಾರ್ಯ ಮುಂದುವರೆದಿದ್ದು, ಗೋದಾಮಿನ ಒಳಗಡೆ ನಾಲ್ವರ ಇದ್ದರೆಂದು ಹೇಳಲಾಗುತ್ತಿದೆ. ಭೀಕರ ಘಟನೆಯಲ್ಲಿ ಸಾವನ್ನಪ್ಪಿದವರನ್ನು ತಾಲೂಕಿನ ಕಾಟೇನಹಳ್ಳಿ ಗ್ರಾಮದ ಕಾರ್ಮಿಕರೆಂದು ಹೇಳಲಾಗುತ್ತಿದೆ. ಮೃತರ ಸಂಬಂಧಿಕರ ಶೋಕಸಾಗರದಲ್ಲಿದ್ದಾರೆ. ಮೂವರ ಶವಗಳನ್ನು ಸದ್ಯಕ್ಕೆ ಹಾವೇರಿಯ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ. ಗೋದಾಮಿನ ಪೂರ್ಣಪ್ರಮಾಣದ ಪರಿಶೀನೆ ಮುಕ್ತಾಯದ ನಂತರ ಈ ದುರ್ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಎಷ್ಟು...
ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆ, ನಾವು ಅಂದುಕೊಂಡಂಗಿಲ್ಲ ಲೆಕ್ಕ..! ಅಸಲೀಯತ್ತು ಬೇರೆಯದ್ದೇ ಇದೆ..!
ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಹಾಲಿ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ಸೇರೋದು ಬಹುತೇಕ ಪಕ್ಕಾ ಎನ್ನುವಂತಾಗಿದೆ. ಆದ್ರೆ, ಈಗಲೇ ಸೇರ್ತಾರಾ ಅಥವಾ ಲೇಟಾಗತ್ತಾ ಅನ್ನೊ ಹಲವು ಪ್ರಶ್ನೆಗಳು ಇಡೀ ಕ್ಷೇತ್ರದಾದ್ಯಂತ ಚರ್ಚೆಗೆ ಕಾರಣವಾಗಿವೆ. ಅಸಲು, ಅದೇನೇ ಚರ್ಚೆ ನಡೆದ್ರೂ, ಅದೇನೇ ಊಹಾಪೋಹಗಳು ಜಾರಿಯಲ್ಲಿದ್ರೂ, ಹೆಬ್ಬಾರ್ ಸಾಹೇಬ್ರು ಮಾತ್ರ ಡೋಂಟ್ ಕೇರ್ ಅನ್ನೊ ಮನಸ್ಥಿತಿಯಲ್ಲಿದ್ದಾರೆ. ಯಾಕಂದ್ರೆ, ಅವ್ರ ಆಂತರಿಕ ಲೆಕ್ಕಾಚಾರಗಳೇ ಬೇರೆಯದ್ದಿದೆ. ಭಾಗಾಕಾರ, ಗುಣಾಕಾರಗಳೇ ಬೇರೆ..! ಅಂದಹಾಗೆ, ಸದ್ಯ ಹರಡಾಡ್ತಿರೋ ಕಾಂಗ್ರೆಸ್ ಸೇರೋ ಬಣ್ಣ ಬಣ್ಣದ ರೂಮರ್ರುಗಳಿಗೆ ಹೆಬ್ಬಾರ್ ಪಡೆಯ ಅಂಗಳದಲ್ಲಿ ನಾಜೂಕಿನ ಪ್ರತ್ಯುತ್ತರಗಳು ಸಿಗುತ್ತಿವೆ. ಇಂತಹದ್ದೊಂದು ರೂಮರ್ರುಗಳು ಹೆಚ್ಚೆಚ್ಚು ಹರಡಿದಷ್ಟು ಹೆಬ್ಬಾರ್ ಪಡೆಗೆ ಕ್ಷೇತ್ರದ ಜನರ ಮನಸ್ಥಿತಿ ಅರಿಯಲು ಸಾಧನವಾಗುವಂತಿದೆ ಅಷ್ಟೆ. ಆದ್ರೆ, ಅದರಾಚೆಗಿನ ಹಕೀಕತ್ತುಗಳು, ಲಾಭ ನಷ್ಟಗಳ ಗುಣಾಕಾರಗಳು, ಭಾಗಾಕಾರಗಳು ಒಳಗೊಳಗೇ ಸಮೀಕರಣಗೊಳ್ಳುತ್ತಿವೆ. ರಾಜಕೀಯ ಚಾಣಾಕ್ಷತೆಯಲ್ಲಿ ಲೆಕ್ಕ ಹಾಕ್ತಿರೋ ಶಿವರಾಮ್ ಹೆಬ್ಬಾರ್ ತಮ್ಮದೇ ಆದ ದಾರಿಯಲ್ಲಿ ಈಗಾಗಲೇ ಎಲ್ಲ ಮಜಲುಗಳ ಬ್ಲ್ಯೂ ಪ್ರಿಂಟ್ ರೆಡಿ ಮಾಡಿಕೊಂಡು ಆಗಿದೆಯಂತೆ. ಡಿಸೆಂಬರ್...
ಮುಂಡಗೋಡ ಜೂನಿಯರ್ ಕಾಲೇಜಿನಲ್ಲಿ ಬಿಸಿ ಸಾಂಬಾರ್ ಮೈಮೇಲೆ ಬಿದ್ದು ಗಾಯಗೊಂಡಿದ್ದ ಮಹಿಳೆ ಸಾವು..!
ಮುಂಡಗೋಡ ಪಟ್ಟಣದ ಪದವಿ ಪೂರ್ವ ಕಾಲೇಜಿನಲ್ಲಿ ಬಿಸಿ ಸಾಂಬಾರ್ ಬಿದ್ದು ತೀವ್ರ ಗಾಯಗೊಂಡಿದ್ದ ಬಿಸಿಯೂಟದ ಅಡುಗೆ ಸಹಾಯಕಿ ಮೃತಪಟ್ಟಿದ್ದಾಳೆ. ಕಳೆದ ಶನಿವಾರ ನಡೆದಿದ್ದ ಘಟನೆಯಲ್ಲಿ ಗಾಯಗೊಂಡು ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ,ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ ಅಂತಾ ಮಾಹಿತಿ ಲಭ್ಯವಾಗಿದೆ. ಅಂದಹಾಗೆ, ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಅಡುಗೆ ಸಹಾಯಕಿ ಅನ್ನಪೂರ್ಣ ಹುಳ್ಯಾಳ(49) ಸುಟ್ಟು ಗಾಯಗೊಂಡು ಸದ್ಯ ಮೃತಪಟ್ಟಿರೋ ಮಹಿಳೆಯಾಗಿದ್ದಾಳೆ. ಕಳೆದ ಶನಿವಾರ ಬಿಸಿಯೂಟದ ಅಡುಗೆ ಮನೆಯಿಂದ ಶಾಲಾ ಮಕ್ಕಳಿಗೆ ಸಾಂಬಾರ ಬಡಿಸಲು ಅಣಿಯಾಗಿದ್ದಳು. ಆ ಹೊತ್ತಲ್ಲಿ ಮತ್ತೋರ್ವ ಅಡುಗೆ ಸಹಾಯಕಿ ಪಾರ್ವತಿ ಎಂಬುವರ ಜೊತೆ ಸೇರಿ ಸಾಂಬಾರ ಪಾತ್ರೆ ತರುವಾಗ ಅನ್ನಪೂರ್ಣ ಕಾಲು ಜಾರಿ ಬಿದ್ದಿದ್ದಳು. ಹೀಗಾಗಿ, ಬಿಸಿ ಸಾಂಬಾರ ಅವರ ಮೈ ಮೇಲೆ ಬಿದ್ದಿತ್ತು. ಪರಿಣಾಮ, ಅವರ ದೇಹವು ತೀವ್ರ ಸುಟ್ಟು ಗಾಯವಾಗಿತ್ತು. ತಕ್ಷಣವೇ ಗಾಯಗೊಂಡ ಅಡುಗೆ ಸಹಾಯಕಿಯನ್ನು ತಾಲೂಕಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿತ್ತು. ಆದ್ರೆ,...
ಮುಂಡಗೋಡಿನಲ್ಲಿ ಇನ್ಮೇಲೆ ಕಳ್ಳಕಾಕರು ಕೆಮ್ಮಂಗಿಲ್ಲ, ಕಟ್ಟುನಿಟ್ಟಿನ ಕ್ರಮಗಳ ಜಾರಿಗೆ ಮುಂದಾದ ಪೊಲೀಸ್ರು..!
ಮುಂಡಗೋಡ ಪೊಲೀಸರು ಜಾಗ್ರತರಾಗಿದ್ದಾರೆ. ಪಟ್ಟಣದಲ್ಲಿ ಅಪರಾಧ ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ಮಹತ್ತರ ಹೆಜ್ಜೆಗಳನ್ನಿಡುತ್ತಿದ್ದಾರೆ. ಇಲ್ಲಿ ಇನ್ನು ಯಾವುದೇ ಅಪರಾಧಿಕ ಕೃತ್ಯಗಳಿಗೆ ಜಾಗವಿಲ್ಲ, ಖಾಕಿ ಕಟ್ಟೆಚ್ಚರದಿಂದ ಕಾವಲಿಗಿದೆ ಅನ್ನೋದನ್ನ ಜನಸಾಮಾನ್ಯರಿಗೆ ಮುಟ್ಟಿಸಿ, ಜೊತೆಗೆ ಸಾರ್ವಜನಿಕರ ಸಹಕಾರಗಳನ್ನು ಕೋರಿದ್ದಾರೆ ಪೊಲೀಸರು. ಈ ಕಾರಣಕ್ಕಾಗೇ ಪಟ್ಟಣದಲ್ಲಿ ನೂತನ ಸಿಪಿಐ ಬಿ.ಎಸ್.ಲೋಕಾಪುರ್ ಇವತ್ತು ಒಂದಿಷ್ಟು ಜಾಗ್ರತಿಯ ಹೆಜ್ಜೆಗಳನ್ನಿಟ್ಟಿದ್ದಾರೆ. ಬ್ಯಾಂಕ್ ವ್ಯವಸ್ಥಾಪಕರೊಂದಿಗೆ..! ಇನ್ನು ಪಟ್ಟಣದ ಎಲ್ಲಾ ಬ್ಯಾಂಕ್ ಮ್ಯಾನೇಜರಗಳೊಂದಿಗೆ ಇವತ್ತು ಸಭೆ ನಡೆಸಿದ ಸಿಪಿಐ, ಆಯಾ ಬ್ಯಾಂಕುಗಳ ವ್ಯಾಪ್ತಿಯಲ್ಲಿ ಬರುವ ಎಟಿಎಂಗಳಲ್ಲಿ ಸೂಕ್ತ ಭದ್ರತಾ ಕ್ರಮಗಳನ್ನು ಅಳವಡಿಸುವ ಸಂಬಂಧ ಕ್ರಮ ಕೈಗೊಳ್ಳುವಂತೆ ಖಡಕ್ ಸೂಚನೆ ನೀಡಿದ್ದಾರೆ. ಸಮರ್ಪಕ ಸಿಸಿಟಿವಿಗಳನ್ನು ಅಳವಡಿಸುವುದು, ಅಲ್ಲದೇ, ದಿನದ 24 ಗಂಟೆಯೂ ಕಾವಲುಗಾರರನ್ನು ನೇಮಿಸಿಕೊಳ್ಳುವಂತೆ ಸೂಚಿಸಿದ್ದಾರೆ. ಜಾಗೃತ ಗಂಟೆಗಳನ್ನು ಅಳವಡಿಸಿ, ರಾತ್ರಿ ಹೊತ್ತಿನಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ ಮಾಡುವ ಕುರಿತು ತಿಳಿಸಿದ್ದಾರೆ. ಇದರಿಂದ ಕಳ್ಳರ ಕೈಚಳಕ ತಡೆಗಟ್ಟುವಲ್ಲಿ ಮಹತ್ತರ ಕ್ರಮ ಕೈಗೊಳ್ಳುವಂತಾಗುತ್ತದೆ ಅಂತಾ ಜಾಗ್ರತಿ ಮೂಡಿಸಿದ್ದಾರೆ. ಜ್ಯುವೇಲ್ಲರ್ಸ್ ಗೆ ಸೂಚನೆ..! ಇನ್ನು ಬಹುತೇಕ ಕಳ್ಳರ ಕೈಚಳಕಕ್ಕೆ...