ಚೌಡಳ್ಳಿ ಸೊಸೈಟಿಯಲ್ಲಿ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷ, ಬಿಜೆಪಿಗೆ ಭಾರೀ ಮುಖಭಂಗ..!

ಮುಂಡಗೋಡ: ತಾಲೂಕಿನ ಚೌಡಳ್ಳಿ ಸೊಸೈಟಿಯಲ್ಲಿ ಬಿಜೆಪಿಗೆ ಭಾರೀ ಹೊಡೆತ ಬಿದ್ದಂತಾಗಿದೆ. ನಿಚ್ಚಳ ಬಹುಮತವಿದ್ದರೂ ಬಿಜೆಪಿಗೆ ಅಧಿಕಾರ ಅಕ್ಷರಶಃ ಕೈತಪ್ಪಿದೆ‌. ಬದಲಾಗಿ, ಕಾಂಗ್ರೆಸ್ ಬೆಂಬಲಿತರು ಸೊಸೈಟಿಯಲ್ಲಿ ಜಯದ ಝಂಡಾ ಹಾರಿಸಿದ್ದಾರೆ. ಇದ್ರೊಂದಿಗೆ ಇಲ್ಲಿ ಬಿಜೆಪಿಗೆ ಭಾರೀ ಮುಖಭಂಗ ಆದಂತಾಗಿದೆ.

ಅಂದಹಾಗೆ, ಚೌಡಳ್ಳಿ ಸೊಸೈಟಿಯಲ್ಲಿ ಕಾಂಗ್ರೆಸ್ ಬೆಂಬಲಿತ ಧರ್ಮಣ್ಣ ಬಸಪ್ಪ ಅರೆಗೊಪ್ಪ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಜೊತೆಗೆ, ಬಿಜೆಪಿಯ ರಾಜವ್ವ ದೇವಿಂದ್ರಪ್ಪ ಹಾನಗಲ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಒಟ್ಟು 13 ಸದಸ್ಯ ಬಲದ ಚೌಡಳ್ಳಿ  ಸೊಸೈಟಿಯಲ್ಲಿ ಕೇವಲ 7 ಸದಸ್ಯರ ಅಧ್ಯಕ್ಷರ ಪರವಾಗಿ ಮತ ಚಲಾಯಿಸಿದ್ದಾರೆ. ಹಾಗೆನೇ, ಉಪಾಧ್ಯಕ್ಷ ಸ್ಥಾನಕ್ಕಾಗಿ ಕಣದಲ್ಲಿದ್ದ ಬಿಜೆಪಿ ಬೆಂಬಲಿತ ಸದಸ್ಯೆಗೆ 7 ಸದಸ್ಯರು ಮತ ಚಲಾಯಿಸಿದ್ದಾರೆ. ಹೀಗಾಗಿ, ಅಧ್ಯಕ್ಷ ಸ್ಥಾನ ಬಿಜೆಪಿಗೆ ತಪ್ಪಿ ಕಾಂಗ್ರೆಸ್ ಬೆಂಬಲಿತರ ಪಾಲಾಗಿದೆ.

error: Content is protected !!