ಮುಂಡಗೋಡ: ತಾಲೂಕಿನ ಹುನಗುಂದದಲ್ಲಿ ಹಸಿಮೇವು ತಿಂದು ಕೆಲವೇ ಹೊತ್ತಲ್ಲಿ ಆಕಳು ಮತ್ತು ಕರು ಸಾವನ್ನಪ್ಪಿರೋ ಘಟನೆ ನಡೆದಿದೆ. ಮೇವು ತಿಂದ ಕೆಲವೇ ಹೊತ್ತಲ್ಲಿ ಸಾವು ಕಂಡಿದ್ದು, ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಹುನಗುಂದ ಗ್ರಾಮದ ಬಸವರಾಜ್ ಗುರುಸಿದ್ದಪ್ಪ ಚಬ್ಬಿ ಎಂಬುವವರಿಗೆ ಸೇರಿದ ಸುಮಾರು 37 ಸಾವಿರ ರೂ. ಮೌಲ್ಯದ ಆಕಳು ಮತ್ತು ಕರು ದಾರುಣ ಸಾವು ಕಂಡಿದ್ದು ಆಘಾತ ತಂದಿದೆ. ಇನ್ನು ಪಶು ವೈದ್ಯರು ಸ್ಥಳಕ್ಕೆ ಆಗಮಿಸಿ ಸಾವಿಗೆ ಕಾರಣವೇನು ಅಂತ ಪರಿಶೀಲನೆ ನಡೆಸಿದ್ದಾರೆ.

error: Content is protected !!