ಮುಂಡಗೋಡ ಪೊಲೀಸರು ಜಾಗ್ರತರಾಗಿದ್ದಾರೆ. ಪಟ್ಟಣದಲ್ಲಿ ಅಪರಾಧ ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ಮಹತ್ತರ ಹೆಜ್ಜೆಗಳನ್ನಿಡುತ್ತಿದ್ದಾರೆ. ಇಲ್ಲಿ ಇನ್ನು ಯಾವುದೇ ಅಪರಾಧಿಕ ಕೃತ್ಯಗಳಿಗೆ ಜಾಗವಿಲ್ಲ, ಖಾಕಿ ಕಟ್ಟೆಚ್ಚರದಿಂದ ಕಾವಲಿಗಿದೆ ಅನ್ನೋದನ್ನ ಜನಸಾಮಾನ್ಯರಿಗೆ ಮುಟ್ಟಿಸಿ, ಜೊತೆಗೆ ಸಾರ್ವಜನಿಕರ ಸಹಕಾರಗಳನ್ನು ಕೋರಿದ್ದಾರೆ ಪೊಲೀಸರು. ಈ ಕಾರಣಕ್ಕಾಗೇ ಪಟ್ಟಣದಲ್ಲಿ ನೂತನ ಸಿಪಿಐ ಬಿ.ಎಸ್.ಲೋಕಾಪುರ್ ಇವತ್ತು ಒಂದಿಷ್ಟು ಜಾಗ್ರತಿಯ ಹೆಜ್ಜೆಗಳನ್ನಿಟ್ಟಿದ್ದಾರೆ.

ಬ್ಯಾಂಕ್ ವ್ಯವಸ್ಥಾಪಕರೊಂದಿಗೆ..!
ಇನ್ನು ಪಟ್ಟಣದ ಎಲ್ಲಾ ಬ್ಯಾಂಕ್ ಮ್ಯಾನೇಜರಗಳೊಂದಿಗೆ ಇವತ್ತು ಸಭೆ ನಡೆಸಿದ ಸಿಪಿಐ, ಆಯಾ ಬ್ಯಾಂಕುಗಳ ವ್ಯಾಪ್ತಿಯಲ್ಲಿ ಬರುವ ಎಟಿಎಂಗಳಲ್ಲಿ ಸೂಕ್ತ ಭದ್ರತಾ ಕ್ರಮಗಳನ್ನು ಅಳವಡಿಸುವ ಸಂಬಂಧ ಕ್ರಮ ಕೈಗೊಳ್ಳುವಂತೆ ಖಡಕ್ ಸೂಚನೆ‌ ನೀಡಿದ್ದಾರೆ. ಸಮರ್ಪಕ ಸಿಸಿಟಿವಿಗಳನ್ನು ಅಳವಡಿಸುವುದು, ಅಲ್ಲದೇ, ದಿನದ 24 ಗಂಟೆಯೂ ಕಾವಲುಗಾರರನ್ನು ನೇಮಿಸಿಕೊಳ್ಳುವಂತೆ ಸೂಚಿಸಿದ್ದಾರೆ. ಜಾಗೃತ ಗಂಟೆಗಳನ್ನು ಅಳವಡಿಸಿ, ರಾತ್ರಿ ಹೊತ್ತಿನಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ ಮಾಡುವ ಕುರಿತು ತಿಳಿಸಿದ್ದಾರೆ. ಇದರಿಂದ ಕಳ್ಳರ ಕೈಚಳಕ ತಡೆಗಟ್ಟುವಲ್ಲಿ‌ ಮಹತ್ತರ ಕ್ರಮ ಕೈಗೊಳ್ಳುವಂತಾಗುತ್ತದೆ ಅಂತಾ ಜಾಗ್ರತಿ ಮೂಡಿಸಿದ್ದಾರೆ.

ಜ್ಯುವೇಲ್ಲರ್ಸ್ ಗೆ ಸೂಚನೆ..!
ಇನ್ನು ಬಹುತೇಕ ಕಳ್ಳರ ಕೈಚಳಕಕ್ಕೆ ಗುರಿಯಾಗುವ ಜ್ಯುವೇಲ್ಲರಿ ಶಾಪ್ ಗಳ ಬಗ್ಗೆ ಎಚ್ಚರಿಕೆ ವಹಿಸಿರೋ ಪೊಲೀಸ್ ಇಲಾಖೆ, ಪಟ್ಟಣದ ಜ್ಯುವೇಲ್ಲರಿ ಅಂಗಡಿಗಳ‌ ಮಾಲೀಕರನ್ನು ಕರೆದು ಸಭೆ ಮಾಡಿದೆ. ಸಿಪಿಐ ಬಿ.ಎಸ್.ಲೋಕಾಪುರ, ಜ್ಯುವೇಲ್ಲರಿ ಮಾಲೀಕರ ಜೊತೆ ಸಭೆ ಮಾಡಿ, ಕಳ್ಳತನ ತಡೆಯುವ ನಿಟ್ಟಿನಲ್ಲಿ ಜಾಗ್ರತರಾಗಿರುವಂತೆ ಪಾಠ ಮಾಡಿದ್ದಾರೆ. ಕಡ್ಡಾಯವಾಗಿ ಪ್ರತಿಯೊಂದೂ ಜ್ಯುವೇಲ್ಲರಿ ಶಾಪ್ ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ, ಸೂಕ್ತವಾದ ಲಾಕರಗಳನ್ನು ಹಾಕಿ ಜಾಗೃತಿಯಿಂದ ನೋಡಿಕೊಳ್ಳುವಂತೆ ಎಚ್ಚರಿಸಿದ್ದಾರೆ.

ಒಟ್ನನಲ್ಲಿ, ಸದ್ಯ ಮುಂಡಗೋಡಿನಲ್ಲಿ ಕಳ್ಳರ ಕೈಚಳಕದ ಕೃತ್ಯಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸರು ಜಾಗ್ರತಿಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಜೊತೆಗೆ ಸಾರ್ವಜನಿಕರ ಸಹಕಾರದೊಂದಿಗೆ ಪಟ್ಟಣದಲ್ಲಿ ಕ್ರೈಮುಗಳ ರೇಟ್ ಹತೋಟಿಗೆ ತರುವಲ್ಲಿ ಮಹತ್ತರ ಹೆಜ್ಜೆ ಇಡುತ್ತಿರೋದು ಸಾರ್ವಜನಿಕರಿಗೆ ಒಂದಿಷ್ಟು ನೆಮ್ಮದಿ ತರುವುದಂತೂ ಸತ್ಯ.

error: Content is protected !!