ಮುಂಡಗೋಡ ತಾಲೂಕಿನ ಟಿಬೇಟಿಯನ್ ಕ್ಯಾಂಪ್ ನಂಬರ್ 4 ರಲ್ಲಿ ಭೀಕರ ಹತ್ಯೆಯಾಗಿದೆ. ಟಿಬೇಟಿಯನ್ ಮಾಜಿ ಸೈನಿಕನೊಬ್ಬ 36 ವರ್ಷದ ಯುವಕನನ್ನು ಹತ್ಯೆ ಮಾಡಿದ್ದಾನೆ ಅನ್ನೋ ಮಾಹಿತಿ ಲಭ್ಯವಾಗಿದೆ. ಅಂದಹಾಗೆ, ನಟ್ಟ ನಡುರಾತ್ರಿಯಲ್ಲಿ ನಡೆದಿರೋ ಘಟನೆಯಲ್ಲಿ ಆರೋಪಿಯೂ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ.

ಟಿಬೇಟಿಯನ್ ಕ್ಯಾಂಪ್ ನಂಬರ್ 4 ರ Jamyang Dakpa @ Lobsang S/o Tenzin Yeshi(35) ಎಂಬುವವನೇ ಕೊಲೆಯಾದ ವ್ಯಕ್ತಿಯಾಗಿದ್ದಾನೆ. ಇನ್ನು ಅದೇ ಕ್ಯಾಂಪಿನ ವಾಸಿ Gonpo Choedak S/o Thinley (50) ಎಂಬುವನೇ ಕೊಲೆಯ ಆರೋಪಿಯಾಗಿದ್ದಾನೆ.

ಘಟನೆ ಏನು..?
ಮುಂಡಗೋಡ ತಾಲೂಕಿನ ಟಿಬೇಟಿಯನ್ ಕ್ಯಾಂಪ್ ನಂಬರ್ 4 ರಲ್ಲಿ ರಾತ್ರಿ ಕೊಲೆಯಾದ ವ್ಯಕ್ತಿ Jamyang Dakpa @ Lobsang S/o Tenzin Yeshi ತನ್ನ ಮನೆಯ ಸಮೀಪವೇ ಇರುವ ಮಾಜಿ ಸೈನಿಕನ ಮನೆಗೆ ಕೈಯಲ್ಲಿ ಚಾಕು ಹಿಡಿದುಕೊಂಡು ಹೋಗಿದ್ದ ಎನ್ನಲಾಗಿದೆ. ಆ ಹೊತ್ತಲ್ಲಿ, ಬಾಗಿಲು ಬಡಿದಾಗ ಬಾಗಿಲು ತೆರೆದ ಮಾಜಿ ಸೈನಿಕನ ಮೇಲೆ ಏಕಾಏಕಿ ದಾಳಿ ಮಾಡಿದ್ದ ಎನ್ನಲಾಗಿದೆ. ಹೀಗಾಗಿ, ಈ ವೇಳೆ ಗಂಟೆಯ ಹೊತ್ತು ಇಬ್ಬರ ನಡುವೆ ಸೆಣಸಾಟ ನಡೆದಿದೆ ಎನ್ನಲಾಗಿದ್ದು, ಆ ಹೊತ್ತಲ್ಲಿ ಮಾಜಿ ಸೈನಿಕನಿಂದ ವ್ಯಕ್ತಿಯ ಎದೆಗೆ ಚೂರಿಯಿಂದ ಬಲವಾಗಿ ಇರಿತವಾಗಿದೆ. ಹೀಗಾಗಿ, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಅನ್ನೋ ಬಾತ್ಮಿ ತಿಳಿದು ಬಂದಿದೆ. ಘಟನೆಯಲ್ಲಿ ಬರೋಬ್ಬರಿ ನಾಲ್ಕು ಚೂರಿಗಳು ಬಳಕೆಯಾಗಿವೆಯಂತೆ.

ಕೊಲೆಯಾದವ

ಆರೋಪಿಗೂ ಗಾಯ..!
ಇನ್ನು ಘಟನೆಯಲ್ಲಿ ಆರೋಪಿ ಮಾಜಿ ಸೈನಿಕನಿಗೂ ಗಾಯವಾಗಿದ್ದು, ಆತನನ್ನು ಈಗ ಹುಬ್ಬಳ್ಳಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.

ಸ್ಥಳಕ್ಕೆ ಎಸ್ಪಿ ಭೇಟಿ..!
ಇನ್ನು ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಮುಂಡಗೋಡ ಪಿಐ ಬರಮಪ್ಪ ಲೋಕಾಪುರ ಟೀಂ, ಘಟನೆಯ ತನಿಖೆಗಿಳಿದಿದೆ. ಘಟನೆ ಪರಿಶೀಲನೆಗಾಗಿ ಎಸ್ಪಿಯವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮುಂಡಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!