ರಾಮನಗರ: ಜೋಯಿಡಾ ತಹಶೀಲ್ದಾರ್ ಹಾಗೂ ರಾಮನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಮರಳು ವಶಪಡಿಸಿಕೊಂಡಿದ್ದಾರೆ. ಬರೋಬ್ಬರಿ 23 ಟಿಪ್ಪರ್ ನಷ್ಟು ಮರಳು ಜಪ್ತಿ ಪಡಿಸಿಕೊಂಡಿದ್ದು ಅಕ್ರಮಿಗಳ ಹೆಡೆಮುರಿ ಕಟ್ಟಿದ್ದಾರೆ. ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯ ವೈಜಗಾಂವ್, ಆಮ್ಸೆತ್, ಗೌಳಿವಾಡ ಮತ್ತು ಪಾಯಸವಾಡಿ ಗ್ರಾಮಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಸುಮಾರು 23 ಟಿಪ್ಪರ್ ನಷ್ಟು, ಅಂದಾಜು 3 ಲಕ್ಷ 30 ಸಾವಿರ ರೂಪಾಯಿ ಮೌಲ್ಯದ ಮರಳು ವಶಪಡಿಸಿಕೊಂಡಿದ್ದಾರೆ. ಜೋಯಿಡಾ ತಹಶೀಲ್ದಾರ್ ಬಸವರಾಜ ತೆರನಹಳ್ಳಿ ಮಾರ್ಗದರ್ಶನದಲ್ಲಿ ರಾಮನಗರ ಪಿಎಸ್ಐ ಬಸವರಾಜ್ ಮಬನೂರು, ಕೃಷ್ಣಕಾಂತ್ ಪಾಟೀಲ್ ನೇತೃತ್ವದಲ್ಲಿ ಕಂದಾಯ ಹಾಗೂ ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ದಾಳಿ ಮಾಡಿದ್ದು, ಮರಳು ವಶ ಪಡಿಸಿಕೊಳ್ಳಲಾಗಿದೆ. ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Top Stories
NMD ಕಿಡ್ನ್ಯಾಪ್ ಕೇಸ್, ಮತ್ತೆ ಐವರು ಆರೋಪಿಗಳು ಅಂದರ್, ಪೊಲೀಸರು ಆರೋಪಿಗಳಮದ್ಯೆ ಭಾರೀ ಕಾಳಗ..! ಗುಂಡೇಟು..!
NMD ಜಮೀರ್ ಬಾಯ್ ಸೇಫ್..! ಗದಗ ರಿಂಗ್ ರೋಡಲ್ಲಿ ಬಿಟ್ಟು ಹೋದ ಕಿಡ್ನ್ಯಾಪರ್ಸ್..! ಐವರು ಆರೋಪಿಗಳ ಹೆಡೆಮುರಿ ಕಟ್ಟಿದ್ರಾ ಮುಂಡಗೋಡ ಪೊಲೀಸ್ರು..?
ಮುಂಡಗೋಡಿನ NMD ಗ್ರೂಪ್ ಮಾಲೀಕನ ಮೇಲೆ ದುಷ್ಕರ್ಮಿಗಳ ಅಟ್ಯಾಕ್
ಟಿಬೇಟಿಯನ್ ಕಾಲೋನಿ ಬಳಿ ಬೈಕ್ ಗಳ ನಡುವೆ ಡಿಕ್ಕಿ, ಓರ್ವ ಸವಾರ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!
ಮುಂಡಗೋಡಿನ ಮುಲ್ಲಾ ಓಣಿಯ ಬಾವಿಯಲ್ಲಿ ವ್ಯಕ್ತಿಯ ಶವ ಪತ್ತೆ..! ಆತ್ಮಹತ್ಯೆನಾ..?
ಮುಂಡಗೋಡಿನ ಅಂಗನವಾಡಿಯಲ್ಲಿ ಹಾವು ಕಚ್ಚಿದ್ದ ಬಾಲಕಿ ಕಿಮ್ಸ್ ನಲ್ಲಿ ಸಾವು..!
ಮುಂಡಗೋಡಿನಲ್ಲಿ ಅಂಗನವಾಡಿಗೆ ಹೋಗಿದ್ದ ಪುಟ್ಟ ಬಾಲಕಿಗೆ ಕಚ್ಚಿದ ಹಾವು..!
ಹಳೇ ದ್ವೇಷದ ಹಿನ್ನಲೆ ಇಬ್ಬರಿಗೆ ಚಾಕು ಇರಿತ
ಇಂದೂರು ಸೊಸೈಟಿ ಚುನಾವಣೆ: ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತರು..! ರೈತ ಒಕ್ಕೂಟಕ್ಕೆ ಮೂರು ಸ್ಥಾನಗಳು ಮಾತ್ರ..!
ಇಂದೂರು ಸೊಸೈಟಿ ಚುನಾವಣೆ ಅಚ್ಚರಿ ಫಲಿತಾಂಶ: ಮಾಜಿ ಜಿಪಂ ಸದಸ್ಯ ರವಿಗೌಡ ಪಾಟೀಲ್ ಸೋಲು..!
ಚವಡಳ್ಳಿ ಸೊಸೈಟಿ ಚುನಾವಣೆ: 11 ರಲ್ಲಿ ಕಾಂಗ್ರೆಸ್ ಬೆಂಬಲಿತರದ್ದೇ ಭರ್ಜರಿ ಗೆಲುವು..! ಬಿಜೆಪಿಗೆ ದಕ್ಕಿದ್ದು ಒಂದೇ ಒಂದು ಸ್ಥಾನ..!
ಮುಂಡಗೋಡ LSMP ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ, 12 ರ ಪೈಕಿ 9 ರಲ್ಲಿ ಕೈ ಬೆಂಬಲಿತರ ಗೆಲುವು..!
ಹುಬ್ಬಳ್ಳಿ ಸಿಲಿಂಡರ್ ಬ್ಲಾಸ್ಟ್: ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಸಾವು, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ ಹಿನ್ನೆಲೆ, ಶುಕ್ರವಾರ ಸರ್ಕಾರಿ ರಜೆ ಘೋಷಣೆ..! ಶಾಲಾ ಕಾಲೇಜುಗಳಿಗೆ ರಜೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ..! ನಾಳೆಯ ಬೆಳಗಾವಿ ಕೈ ಕಾರ್ಯಕ್ರಮ ರದ್ದು..!
ಮುಂಡಗೋಡ ಗಡಿ ಭಾಗದ ಹಾನಗಲ್ ತಾಲೂಕಿನ ಕೊಪ್ಪರಸಿಕೊಪ್ಪದಲ್ಲಿ ನಡೀತು ಭಯಾನಕ, ಅಮಾನುಷ ಘಟನೆ
ಹುಬ್ಬಳ್ಳಿ ಸಿಲಿಂಡರ್ ಸ್ಪೋಟದಲ್ಲಿ ಗಾಯಗೊಂಡಿದ್ದ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಸಾವು..!
ತಡಸ ಕ್ರಾಸ್ ಬಳಿ ಭೀಕರ ಅಪಘಾತ, ಒಂದೇ ಕುಟುಂಬದ ನಾಲ್ವರು ದುರಂತ ಸಾವು..!
ಬೆಡಸಗಾಂವ್ ಸಹಕಾರಿ ಸಂಘದ ಚುನಾವಣೆ ನಡೆದ್ರೂ ಮತ ಎಣಿಕೆಗೆ ಬ್ರೇಕ್..! ಹೈಕೋರ್ಟ್ ತಡೆಯಾಜ್ಞೆ..!
ಬಾರದ ಮಳೆಗಾಗಿ ಕಲಕೇರಿ ಗ್ರಾಮದ ಮಹಿಳೆಯರ ವಿಶೇಷ ಆಚರಣೆ, ಹುಯ್ಯೋ ಹುಯ್ಯೋ ಮಳೆರಾಯ ಅಂದ್ರು ಮಹಿಳೆಯರು..!
ಮುಂಡಗೋಡ: ಜೂನ್ ತಿಂಗಳು ಕಳೆಯುತ್ತ ಬಂದರೂ ಮಳೆರಾಯನ ಆಗಮನ ಇನ್ನೂ ಆಗಿಲ್ಲದಿರುವುದು ತಾಲೂಕಿನ ಅನ್ನದಾತರಿಗೆ ಭಾರೀ ಆತಂಕ ತಂದಿಟ್ಟಿದೆ. ಬಹುತೇಕ ಬಿತ್ತನೆ ಕಾರ್ಯಕ್ಕೆ ಮಳೆರಾಯನ ಮುನಿಸಿನಿಂದ ಭಾರೀ ಅಡಚಣೆಯಾಗಿದೆ. ಕೆಲವು ಕಡೆ ಬೀಜ ಬಿತ್ತನೆ ಕಾರ್ಯ ಮಾಡಿದ್ದರೂ ಬೀಜ ಮೊಳಕೆಯೊಡೆಯಲು ನೀರಿನ ಅಭಾವ ತಲೆದೋರಿದೆ. ಹೀಗಾಗಿ, ತಾಲೂಕಿನ ಕಲಕೇರಿಯ ಮಹಿಳೆಯರು ಮಳೆಗಾಗಿ ವಿಶೇಷ, ವಿಶಿಷ್ಟ ಕಾರ್ಯ ಮಾಡಿದ್ದಾರೆ. ಕಪ್ಪೆಯ ಮೆರವಣಿಗೆ..! ಯಸ್, ಕಲಕೆರಿಯ ಮಹಿಳೆಯರು ಇಂದು ಬೆಳಗಿನಿಂದ ಮಳೆಗಾಗಿ ಕಪ್ಪೆಯ ಪೂಜೆ ಮಾಡಿ ಪ್ರಾರ್ಥಿಸಿದ್ದಾರೆ. ಮಳೆರಾಯನಿಗೆ ಹಾಡುಗಳ ಮೂಲಕ ಗ್ರಾಮದ ತುಂಬೇಲ್ಲ ಕಪ್ಪೆಗಳನ್ನು ಹೊತ್ತು ಮೆರವಣಿಗೆ ಮಾಡಿ ಮಳೆರಾಯ ದಯೆ ತೋರು ಅಂತಾ ಪ್ರಾರ್ಥಿಸಿದ್ದಾರೆ. ಕಪ್ಪೆಗಳನ್ನು ವಿಶೇಷ ಅಲಂಕೃತ ಬುಟ್ಟಿಯಲ್ಲಿ ಹೊತ್ತ ಮಹಿಳೆಯರು ಗ್ರಾಮದ ಮನೆ ಮನೆಗಳಿಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಕಪ್ಪೆ ಹೊತ್ತ ಮಹಿಳೆಗೆ ನೀರು ಸುರಿಯೊ ಮೂಲಕ ಮಳೆರಾಯನಿಗೆ ಆಮಂತ್ರಿಸಿದ್ದಾರೆ. ಪ್ರತೀತಿ..! ಅಸಲು, ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಮುನಿಸಿಕೊಂಡರೆ, ವಿಶೇಷವಾದ ಪೂಜೆ, ಸಂಪ್ರದಾಯಗಳನ್ನು ಮಾಡುತ್ತಾರೆ. ಅದ್ರಂತೆ,...
ಬಾಚಣಕಿ ಸಮೀಪ ಸ್ಕೂಟಿ ಅಪಘಾತ, ಮುಂಡಗೋಡಿನ ಉದಯ್ ಕುರ್ಡೇಕರ್ ಸಾವು..! ಯಮರೂಪಿ ರಸ್ತೆ ಗುಂಡಿಗೆ ಬಲಿಯಾದ್ರಾ ಉದಯ್..?
ಮುಂಡಗೋಡ: ತಾಲೂಕಿನ ಬಾಚಣಕಿ ಸಮೀಪ ಸ್ಕೂಟಿ ಅಪಘಾತವಾಗಿದೆ. ಪರಿಣಾಮ ಸ್ಕೂಟಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ತಡರಾತ್ರಿ ನಡೆದಿರೋ ಘಟನೆಯಲ್ಲಿ ಬಹುಶಃ ಯಮರೂಪಿ ರಸ್ತೆ ಗುಂಡಿಗೆ ಒಂದು ಜೀವ ಬಲಿಯಾದಂತಾಗಿದೆ. ಮೃತ ಬೈಕ್ ಸವಾರನನ್ನು ಮುಂಡಗೋಡಿನ ನಂದೀಶ್ವರ ನಗರದ ನಿವಾಸಿ ಉದಯ್ ಕುರ್ಡೇಕರ್ (47) ಅಂತಾ ಗುರುತಿಸಲಾಗಿದೆ. ನಿನ್ನೆ ರಾತ್ರಿ 11 ಗಂಟೆಯ ಸುಮಾರಿಗೆ ಘಟನೆ ನಡೆದಿದ್ದು, ಅಪಘಾತದಿಂದ ತೀವ್ರ ಗಾಯಗೊಂಡಿದ್ದ ಉದಯ್ ರಸ್ತೆ ಬದಿಯಲ್ಲಿ ಬಿದ್ದು ನರಳಾಡಿದ್ದಾರೆ. ದುರಂತ ಅಂದ್ರೆ ರಾತ್ರಿ ಆಗಿದ್ದ ಕಾರಣ ತಕ್ಷಣವೇ ಯಾರೂ ಗಮನಿಸಿಲ್ಲ. ಆದ್ರೆ, ನಂತರದಲ್ಲಿ ದಾರಿ ಹೋಕರು ಗಮನಿಸಿದ್ದು, ಅಷ್ಟೊತ್ತಿಗಾಗಲೇ ಪ್ರಾಣ ಪಕ್ಷಿ ಹಾರಿಹೋಗಿದೆ ಎನ್ನಲಾಗಿದೆ. ಯಮರೂಪಿ ಗುಂಡಿಗಳು..! ಅಸಲು, ಹುಬ್ಬಳ್ಳಿ ರಸ್ತೆಯ ಮೂಲಕ ನೀವು ಸಾಗುತ್ತಿದ್ದರೆ, ಬಾಚಣಕಿ ಸಮೀಪವಾಗುತ್ತಿದ್ದಂತೆ ಹಲವು ಕಡೆಗಳಲ್ಲಿ ರಸ್ತೆ ಮದ್ಯ ಭಯಾನಕ ಗುಂಡಿಗಳು ಬಾಯ್ತೆರೆದು ಕುಂತಿರೊದು ಕಾಣತ್ತೆ. ಇಂತಹ ಗುಂಡಿಗಳು ವಾಹನ ಸವಾರರಿಗೆ ಜೀವ ಅಂಗೈಯಲ್ಲಿ ಹಿಡಿದು ಸಾಗುವಂತಾಗುತ್ತವೆ. ಆದ್ರೆ, ಇದನ್ನೇಲ್ಲ ಗಮಿಸಬೇಕಾದ ನಮ್ಮ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು...
ಮುಂಡಗೋಡ ಟಿಂಬರ್ ಡೀಪೋದಲ್ಲಿ ಕಟ್ಟಿಗೆ ಕಳ್ಳಾಟ ಕೇಸ್, ಐವರು DyRFO ಗಳು ಸಸ್ಪೆಂಡ್, RFO ಅಮಾನತ್ತಿಗೆ ಪ್ರಸ್ತಾವನೆ..!
ಮುಂಡಗೋಡ ಅರಣ್ಯ ಇಲಾಖೆಯ ಟಿಂಬರ್ ಡೀಪೋದಲ್ಲಿನ ಕಳ್ಳಾಟ ಕೇಸ್ ನಲ್ಲಿ ಸದ್ಯ ಐವರು DyRFO ಗಳು ನಿರ್ಧಾಕ್ಷಿಣ್ಯವಾಗಿ ಅಮಾನತ್ತಾಗಿದ್ದಾರೆ. ಐವರನ್ನೂ ಅಮಾನತ್ತು ಮಾಡಿ ಶಿರಸಿ ಸಿಸಿಎಫ್ ಕೆ. ವಿ. ವಸಂತ ರೆಡ್ಡಿರವರು ಆದೇಶಿಸಿದ್ದಾರೆ. ಇನ್ನು ಇದೇ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರೋ RFO ಜಿ.ಟಿ.ರೇವಣಕರ್ ಸಾಹೇಬ್ರನ್ನು ಅಮಾನತ್ತುಗೊಳಿಸುವಂತೆ ಬೆಂಗಳೂರು PCCF ರವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಹುಶಃ ನಾಳೆ ಸಂಜೆಯಷ್ಟೊತ್ತಿಗೆ RFO ಸಾಹೇಬ್ರೂ ಕೂಡ ಸಸ್ಪೆಂಡ್ ಆಗಿ ವಿಶ್ರಾಂತಿ ಪಡಿಯೋದು ನಿಕ್ಕಿಯಾಗಿದೆ. ಅದ್ರ ಜೊತೆ, ಇಡೀ ಇಲಾಖೆಯ ಮಾನವನ್ನು ಬೀದಿಯಲ್ಲಿ ಹರಾಜು ಹಾಕಿದ್ದ ಪ್ರಕರಣವೀಗ ಒಂದು ಹಂತಕ್ಕೆ ಬಂದಂತಾಗಿದೆ. ಸಸ್ಪೆಂಡ್ ಆದವರು ಯಾರು..? ಮುಂಡಗೋಡ ಸರ್ಕಾರಿ ಮರಮಟ್ಟು ಸಂಗ್ರಹಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉಪ ವಲಯ ಅರಣ್ಯಾಧಿಕಾರಿ ಸುರೇಶ ವಿ ವಡ್ಕರ, ಮಾರುತಿ ಗ. ಸೋರಗಾಂವಿ, ಮಹೇಶ ಎಮ್, ಬೋರಕರ್, ಹನಮಂತ ಭೀ ಬಂಡಿವಡ್ಡರ, ಗುರುಚಂದ್ರ ಎಮ್. ಬ್ಯಾಳಿಯವರ ಇವರುಗಳನ್ನು ಕರ್ನಾಟಕ ಅರಣ್ಯ ಸಂಹಿತೆ ಕಂಡಿಕೆ 121 (3), (b), (c) & (d)...
ಗುಂಜಾವತಿ ಅರಣ್ಯದಲ್ಲಿ ಅನಾಮತ್ತಾಗಿ ಕಡಿದು ಹಾಕಿದ್ದು ಮೂರು ಮರ..! ಆದ್ರೆ, ಸಾಗಿಸುವ ಬದಲು ಚೆಲ್ಲಿ ಹೋಗಿದ್ಯಾಕೆ ಕಳ್ಳರು..? ಅಷ್ಟಕ್ಕೂ ಇದೇಲ್ಲ ಪ್ರೀ ಪ್ಲ್ಯಾನ್ಡಾ..?
ಮುಂಡಗೋಡ ತಾಲೂಕಿನ ಗುಂಜಾವತಿ ಬಳಿ ರವಿವಾರ ಅರಣ್ಯಗಳ್ಳತನದ ವಿಫಲ ಯತ್ನ ನಡೆದಿದೆ. ಮೂರು ಬೆಲೆಬಾಳುವ ಮರಗಳನ್ನ ಕಡಿದು ಸಾಗಾಟ ಮಾಡಲು ಇನ್ನಿಲ್ಲದ ಯತ್ನ ನಡೆಸಿದ್ದಾರೆ ಆಗಂತುಕರು. ಒಂದರ್ಥದಲ್ಲಿ ಮೇಲ್ನೋಟಕ್ಕೆ, ಇದೇಲ್ಲ ಅದ್ಯಾವನೋ ಅಡ್ನಾಡಿ ಹುಂಬ ಅರಣ್ಯ ಭಕ್ಷಾಸುರನ ಫ್ರೀ ಪ್ಲ್ಯಾನ್ಡ್ ಕೃತ್ಯವಾ ಅಂತಾ ಅನಿಸ್ತಿದೆ. ತಮ್ಮ ಅಕ್ರಮಗಳಿಗೆ “ಬಗಣಿ ಗೂಟ” ಇಟ್ಟು ಅಕ್ರಮಗಳ ಬೆನ್ನು ಬಿದ್ದಿದ್ದ ಅರಣ್ಯ ಇಲಾಖೆಯ ದಕ್ಷ ಅಧಿಕಾರಿಗಳನ್ನೇ ಟಾರ್ಗೆಟ್ ಮಾಡಿರೋ ಕೃತ್ಯ ಅನಿಸ್ತಿದೆ. ಕೆಲವು ದಕ್ಷರ ಮೇಲೆ ಕೆಟ್ಟ ಹೆಸರು ತರಲೆಂದೇ ಮಾಡಿರಬಹುದಾದ ಬ್ರಹನ್ನಾಟಕವಾ ಅನ್ನೋ ಪ್ರಶ್ನೆ ಮೇಲ್ನೋಟಕ್ಕೆ ಕಾಡ್ತಿದೆ. ನಮ್ಮ ದೃಷ್ಟಿಕೋನದಲ್ಲಿ..! ಅಂದಹಾಗೆ ನಾವು ಈ ಪ್ರಕರಣವನ್ನು ಎರಡು ಆಯಾಮದಿಂದ ವಿಶ್ಲೇಷಣೆ ಮಾಡಲು ಯತ್ನಿಸಿದ್ದೇವೆ. ಇಲ್ಲಿ ಬಹುಶಃ ಹೀಗೆ ಆಗಿರಬಹುದು ಅಂತಾ ತಮ್ಮ ಮುಂದಿಡುತ್ತಿದ್ದೇವೆ. ಹೀಗಾಗಿ, ಈ ಇಡೀ ಕೇಸನ್ನು ನೀವೂ ಕೂಡ ಹಾಗೆ ಒಮ್ಮೆ ಯೋಚಿಸಿ ನೋಡಿ. ಅಂದಹಾಗೆ, ಇದೇಲ್ಲ ಈ ಭಾಗದ ಹಲವು ಜನ ಅನುಮಾನ ವ್ಯಕ್ತ ಪಡಿಸಿರೋ ಸಂಗತಿಗಳು. ಯಸ್….! ಇದು,...
ಬಸ್ ನಿಂದ ಆಯತಪ್ಪಿ ಬಿದ್ದು 14 ವರ್ಷದ ವಿದ್ಯಾರ್ಥಿನಿ ದಾರುಣ ಸಾವು..!
ಹಾನಗಲ್: ಬಸ್ ನಿಂದ ಆಯತಪ್ಪಿ ಬಿದ್ದು ವಿದ್ಯಾರ್ಥಿನಿಯೋರ್ವಳು ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಹಾನಗಲ್ ತಾಲ್ಲೂಕಿನ ಕುಸನೂರು ಗ್ರಾಮದ ಬಳಿ ಘಟನೆ ನಡೆದಿದ್ದು ಪೋಷಕರ ಆಕ್ರಂಧನ ಮುಗಿಲು ಮುಟ್ಟಿದೆ. ಮಧು ಕುಂಬಾರ (14) ಮೃತಪಟ್ಟ ವಿದ್ಯಾರ್ಥಿನಿಯಾಗಿದ್ದಾಳೆ. ಈಕೆ ಇಂದು ವಾಸನ ಗ್ರಾಮದಿಂದ ಕುಸನೂರು ಗ್ರಾಮಕ್ಕೆ ಪ್ರೌಢಶಾಲೆಗೆ ಆಗಮಿಸುತ್ತಿದ್ಲು, ಈ ವೇಳೆ ಬಸ್ ನಲ್ಲಿ ಜನ ತುಂಬಿದ್ದಾರೆಂದು ವಿದ್ಯಾರ್ಥಿನಿ ಬಸ್ ಬಾಗಿಲ ಬಳಿ ನಿಂತಿದ್ದಳು. ಆದ್ರೆ, ಬಸ್ ಟರ್ನ್ ಆಗುವಾಗ ಆಯ ತಪ್ಪಿ ಬಲವಾಗಿ ತಲೆ ಹಚ್ಚಿ ನೆಲಕ್ಕೆ ಬಿದ್ದು ಸಾವು ಕಂಡಿದ್ದಾಳೆ. ಆಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮುಂಡಗೋಡ ಟಿಂಬರ್ ಡೀಪೋದಿಂದ ಕಟ್ಟಿಗೆ ಕಳ್ಳಾಟ ಕೇಸ್, ಸಿಕ್ಕಿಬಿದ್ದ ಲಾರಿಗಳ ಮಾಲೀಕರು, ಚಾಲಕರ ಕುಟುಂಬಸ್ಥರ ಆಕ್ರೋಶ..!
ಮುಂಡಗೋಡ ಅರಣ್ಯ ಇಲಾಖೆಯ ಟಿಂಬರ್ ಡೀಪೋದಿಂದ ಕಟ್ಟಿಗೆ ಸಾಗಾಟ ಕೇಸ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅಕ್ರಮ ಸಾಗಾಟದ ವೇಳೆ ಸಿಕ್ಕಿಬಿದ್ದಿರೋ ಎರಡೂ ಲಾರಿಗಳ ಮಾಲೀಕರು ಹಾಗೂ ಚಾಲಕರ ಕುಟುಂಬಸ್ಥರು ಇಲಾಖೆ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ್ದಾರೆ. ಕೇಸ್ ಬಗ್ಗೆ ನಮಗೆ ಏನೂ ಗೊತ್ತಿಲ್ಲ. ನಮ್ಮನ್ನ ಬಲಿ ಪಶು ಮಾಡಲಾಗಿದೆ ಅಂತಾ ಆಕ್ರೋಶ ಹೊರಹಾಕಿದ್ದಾರೆ. ಹೌದು, ರವಿವಾರ ಮುಂಡಗೋಡಿನ ಅರಣ್ಯ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ ತಮ್ಮ ಅಳಲು ತೋಡಿಕೊಂಡಿರೋ ಲಾರಿ ಚಾಲಕರು ಹಾಗೂ ಮಾಲೀಕರು, ಈ ಕೇಸಿನಲ್ಲಿ ನಮ್ಮದೇನೂ ತಪ್ಪಿಲ್ಲ. ಡೀಪೋದಲ್ಲಿ ನಾವು ಬಾಡಿಗೆ ಸಲುವಾಗಿ ಅಧಿಕಾರಿಗಳು ಹೇಳಿದಂತೆ ಲೋಡ್ ಸಾಗಿಸುತ್ತೇವೆ. ಡೀಪೋದಲ್ಲಿ ಅಧಿಕಾರಿಗಳೇ ನಿಂತು ನಾಟಾಗಳ ಲೋಡ್ ಮಾಡಿಸಿರ್ತಾರೆ. ಹೀಗಾಗಿ, ಇದ್ರಲ್ಲಿ ನಮಗೇನೂ ಗೊತ್ತೆ ಇರಲ್ಲ. ನಮ್ಮನ್ನು ಬಲಿ ಮಾಡಬೇಡಿ ಅಂತಾ ಮನವಿ ಮಾಡಿದ್ದಾರೆ. ಇನ್ನು, ಸಾಲಸೋಲ ಮಾಡಿ ಲಾರಿ ಖರೀಧಿಸಿದ್ದು, ನಮ್ಮ ಯಜಮಾನರಿಗೆ ಗೊತ್ತಿಲ್ಲದಂತೆ ಇಷ್ಟೇಲ್ಲ ನಡೆದು ಹೋಗಿದೆ. ನಮಗೆ ಅನ್ಯಾಯವಾಗಿದೆ...
ಮುಂಡಗೋಡ ಟಿಂಬರ್ ಡೀಪೋದಲ್ಲಿ ಕಟ್ಟಿಗೆ ಕಳ್ಳಾಟ ಕೇಸ್, RFO ಸೇರಿ ಆರು ಜನರಿಗೆ ಕಡ್ಡಾಯ ರಜೆ..! ಯಾರ್ಯಾರ ಮೇಲೆ “ತೂಗುಕತ್ತಿ” ಗೊತ್ತಾ..?
ಮುಂಡಗೋಡ ಅರಣ್ಯ ಇಲಾಖೆಯ ಟಿಂಬರ್ ಡೀಪೋದಲ್ಲಿನ ಕಳ್ಳಾಟ ಅಕ್ಷರಶಃ ಇಡೀ ಇಲಾಖೆಯ ನಿದ್ದೆಗೆಡಿಸಿದೆ. ಇಲ್ಲಿ ಅಕ್ರಮಿಗಳು ಅಂದ್ರೆ ಅದು ಖುದ್ದು ಇಲಾಖೆಯ ಅನ್ನ ಉಂಡವರೇ ಅನ್ನೋದು ಒಂದೆಡೆಯಾದ್ರೆ, ಯೂನಿಫಾರ್ಮ್ ತೊಟ್ಟ ಕ್ರಿಮಿನಲ್ ಗಳೇ ಇಂತಹದ್ದೊಂದು ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಅಂತಾ ಬಹುಶಃ ಮೇಲ್ನೋಟಕ್ಕೆ ಕಂಡುಬಂದಿದೆ ಎನ್ನಲಾಗ್ತಿದೆ. ಹೀಗಾಗಿನೇ ಬರೋಬ್ಬರಿ ಆರು ಜನ ಅಧಿಕಾರಿಗಳಿಗೆ ಕಡ್ಡಾಯ ರಜೆ ನೀಡಿ ಕಳಿಸಿದ್ದಾರೆ ಡಿಎಫ ಓ ಸಾಹೇಬ್ರು.. ಆರು ಅಧಿಕಾರಿಗಳ ಮೇಲೆ ತೂಗುಕತ್ತಿ..! ಅಂದಹಾಗೆ, ಮುಂಡಗೋಡ ಸರ್ಕಾರಿ ಟಿಂಬರ್ ಡೀಪೋದಿಂದ ಶುಕ್ರವಾರ ರಾತ್ರಿ ಎರಡು ಲಾರಿಗಳ ಮೂಲಕ ಅಕ್ರಮ ಕಟ್ಟಿಗೆ ಸಾಗಿಸಲಾಗಿತ್ತು. ಹಾಗೆ ಸಾಗಿಸಲಾಗಿದ್ದ ಬೆಲೆಬಾಳುವ “ಮಾಲು” ಖುದ್ದು ಖಾಕಿ ತೊಟ್ಟು ಅರಣ್ಯ ರಕ್ಷಣೆಗೆ ನಿಯೋಜನೆ ಗೊಂಡಿದ್ದವರೇ ಮಾಡಿದ್ದು ಅಂತಾ ಮೇಲ್ನೋಟಕ್ಕೆ ಕಂಡು ಬಂದಿದೆ. ಹೀಗಾಗಿ, ಆರು ಜನ ಅಧಿಕಾರಿಗಳ ಮೇಲೆ ಇವಾಗ ತೂಗುಕತ್ತಿ ನೇತಾಡುತ್ತಿದ್ದು, ಮೊದಲ ಹಂತವಾಗಿ ಆ ಆರೂ ಜನ ಅಧಿಕಾರಿಗಳನ್ನು ಕಡ್ಡಾಯ ರಜೆ ನೀಡಿ ಹೊರಗಟ್ಟಲಾಗಿದೆ. ಹಾಗಂತ ಇಲಾಖೆಯ ಉನ್ನತ ಮೂಲಗಳು ಪಬ್ಲಿಕ್...
ಮುಂಡಗೋಡ ಅರಣ್ಯ ಇಲಾಖೆಯ ಟಿಂಬರ್ ಡೀಪೋದಲ್ಲಿ ಸರ್ಕಾರಿ ಕಳ್ಳರು..? ಎರಡು ಲಾರಿಗಳಲ್ಲಿ ಸಾಗಿಸುತ್ತಿದ್ದ ಮಾಲು ಶಿರಸಿಯಲ್ಲಿ ವಶಕ್ಕೆ..! ಯಾರ ಪಾಲು ಎಷ್ಟೇಷ್ಟು..?
ಮುಂಡಗೋಡಿನ ಅರಣ್ಯ ಇಲಾಖೆಯಲ್ಲಿ ದಂಧೆಕೋರರ ಸಂಖ್ಯೆ ಮಿತಿ ಮೀರಿದೆಯಾ..? ಇಲ್ಲಿ ಅರಣ್ಯದ ಸಂಪತ್ತು ರಕ್ಷಣೆಗೆ ಅಂತಾ ನಿಯುಕ್ತಿಗೊಂಡಿರೋ ದೊಡ್ಡ ದೊಡ್ಡ ಹುದ್ದೆಯಲ್ಲಿರೋರೇ ಅಡ್ನಾಡಿ ದಂಧೆಗಿಳಿದ್ರಾ..? ಅಂತಹದ್ದೊಂದು ಅನುಮಾನ ಸದ್ಯ ಶುರುವಾಗಿದೆ. ಯಾಕಂದ್ರೆ ಮುಂಡಗೋಡಿನ ಸರ್ಕಾರಿ ಟಿಂಬರ್ ಡಿಪೋದಿಂದಲೇ ಲಕ್ಷ ಲಕ್ಷ ಬೆಲೆಬಾಳುವ ಅರಣ್ಯ ಸಂಪತ್ತು ಸಾಗಿಸಲು ಹೋಗಿ ಶಿರಸಿಯಲ್ಲಿ ತಗಲಾಕ್ಕೊಂಡಿದ್ದಾರೆ ಖದೀಮರು. ಮೂಲಗಳ ಪ್ರಕಾರ ಹಾಗೆ ಅಕ್ರಮವಾಗಿ ಸಾಗಿಸಲಾದ ಕಟ್ಟಿಗೆಯ ಕರಾಮತ್ತಿನ ಹಿಂದೆ ಅವನೊಬ್ಬ ದೊಡ್ಡ ಅಧಿಕಾರಿಯ “ರೇಂಜು” ಬಟಾ ಬಯಲಾಗುವ ಎಲ್ಲಾ ಸಾಧ್ಯತೆ ಇದೆ..! ಶಿರಸಿಯ ಸಮೀಪ ರಾತ್ರೊ ರಾತ್ರಿ..! ಅಸಲು, ಮುಂಡಗೋಡಿನ ಸರ್ಕಾರಿ ಟಿಂಬರ್ ಡೀಪೋದಿಂದ ಪಾಸ್ ಹೊಂದಿದ್ದ ಸಾಗವಾನಿ ನಾಟಾಗಳನ್ನು ಶಿರಸಿಯ ಅಡ್ಡೆಯೊಂದರ ಹೆಸರಲ್ಲಿ ಸಾಗಾಟ ಮಾಡಲಾಗುತ್ತಿತ್ತು. ನಿನ್ನೆ ಅಂದ್ರೆ ಶುಕ್ರವಾರ ರಾತ್ರಿ ಸರಿಸುಮಾರು ಒಂಬತ್ತು ಗಂಟೆಯಷ್ಟೊತ್ತಿಗೆ ಎರಡು ಲಾರಿಗಳಲ್ಲಿ ಭರ್ತಿಗೊಳಿಸಿದ ಮಾಲು ರವಾನೆಯಾಗಿತ್ತು. ಹೀಗಿದ್ದಾಗ, ಆ ಮಾಲಿನ ಜೊತೆ ಜೊತೆಯಲ್ಲೇ ಸರ್ಕಾರಿ ಟಿಂಬರ್ ಡೀಪೋದಲ್ಲಿದ್ದ ಲಕ್ಷಾಂತರ ಮೌಲ್ಯದ ನಾಟಾಗಳನ್ನೂ ತುರುಕಲಾಗಿತ್ತು. ಹೀಗಾಗಿ, ಇಂತಹದ್ದೊಂದು...
ಮುಂಡಗೋಡಿನ ಯುವಕ ಕಣ್ಮರೆ, ಎಲ್ಲಾದ್ರೂ ಸಿಕ್ಕರೆ ಮಾಹಿತಿ ನೀಡಿ..!
ಮುಂಡಗೋಡಿನ ಯುವಕನೋರ್ವ ನಾಪತ್ತೆಯಾಗಿದ್ದಾನೆ. 23 ವರ್ಷದ ಯುವಕ ಜೂನ್ 3 ರಿಂದಲೇ ನಾಪರ್ತೆಯಾಗಿದ್ದು ಇದುವರೆಗೂ ಪತ್ತೆಯಾಗಿಲ್ಲ. ಹೀಗಾಗಿ, ನಾಪತ್ತೆಯಾಗಿರೋ ಯುವಕನನ್ನು ಹುಡುಕಿಕೊಡಿ ಅಂತಾ ಪೋಷಕರು ಮನವಿ ಮಾಡಿದ್ದಾರೆ. ಅಂದಹಾಗೆ, ಯುವಕನ ಹೆಸರು ಸಿದ್ದಾರೂಢ ಗೌಳಿ (23) ಈತ ಮುಂಡಗೋಡ ಪಟ್ಟಣದ ಆನಂದನಗರ ನಿವಾಸಿಯಾಗಿದ್ದು ಕಳೆದ ಜೂನ್ 3 ರಂದು ಮನೆಯಿಂದ ಹೊರಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವನು ಎರಡು ದಿನ ಕಳೆದರೂ ವಾಪಸ್ ಮನೆಗೆ ಬಂದಿಲ್ಲ. ಹೀಗಾಗಿ, ಕುಟುಂಬಸ್ಥರು ಪರಿಚಯವಿರುವ ಎಲ್ಲಾ ಕಡೆ ತಿರುಗಾಡಿ ಯುವಕನನ್ನು ಹುಡುಕಿದ್ದಾರೆ. ಆದ್ರೆ ಇದುವರೆಗೂ ಪತ್ತೆಯಾಗಿಲ್ಲ. ಹೀಗಾಗಿ, ಆತಂಕದಲ್ಲಿರೋ ಪೋಷಕರು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದಯವಿಟ್ಟು ಈ ಮೇಲೆ ಕಾಣಿಸಿದ ಪೋಟೋದಲ್ಲಿರೊ ಯುವಕ ಕಂಡರೆ ಈ ನಂಬರಿಗೆ ಕಾಲ್ ಮಾಡಿ ಮಾಹಿತಿ ನೀಡಿ 8197524063