ಮುಂಡಗೋಡ ಅರಣ್ಯ ಇಲಾಖೆಯ ಟಿಂಬರ್ ಡೀಪೋದಲ್ಲಿ ಸರ್ಕಾರಿ ಕಳ್ಳರು..? ಎರಡು ಲಾರಿಗಳಲ್ಲಿ ಸಾಗಿಸುತ್ತಿದ್ದ ಮಾಲು ಶಿರಸಿಯಲ್ಲಿ ವಶಕ್ಕೆ..! ಯಾರ ಪಾಲು ಎಷ್ಟೇಷ್ಟು..?




ಮುಂಡಗೋಡಿನ ಅರಣ್ಯ ಇಲಾಖೆಯಲ್ಲಿ ದಂಧೆಕೋರರ ಸಂಖ್ಯೆ ಮಿತಿ‌ ಮೀರಿದೆಯಾ..? ಇಲ್ಲಿ ಅರಣ್ಯದ ಸಂಪತ್ತು ರಕ್ಷಣೆಗೆ ಅಂತಾ ನಿಯುಕ್ತಿಗೊಂಡಿರೋ ದೊಡ್ಡ ದೊಡ್ಡ ಹುದ್ದೆಯಲ್ಲಿರೋರೇ ಅಡ್ನಾಡಿ ದಂಧೆಗಿಳಿದ್ರಾ..? ಅಂತಹದ್ದೊಂದು ಅನುಮಾನ ಸದ್ಯ ಶುರುವಾಗಿದೆ. ಯಾಕಂದ್ರೆ ಮುಂಡಗೋಡಿನ ಸರ್ಕಾರಿ ಟಿಂಬರ್ ಡಿಪೋದಿಂದಲೇ ಲಕ್ಷ ಲಕ್ಷ ಬೆಲೆಬಾಳುವ ಅರಣ್ಯ ಸಂಪತ್ತು ಸಾಗಿಸಲು ಹೋಗಿ ಶಿರಸಿಯಲ್ಲಿ ತಗಲಾಕ್ಕೊಂಡಿದ್ದಾರೆ ಖದೀಮರು. ಮೂಲಗಳ‌ ಪ್ರಕಾರ ಹಾಗೆ ಅಕ್ರಮವಾಗಿ ಸಾಗಿಸಲಾದ ಕಟ್ಟಿಗೆಯ ಕರಾಮತ್ತಿನ ಹಿಂದೆ ಅವನೊಬ್ಬ ದೊಡ್ಡ ಅಧಿಕಾರಿಯ “ರೇಂಜು” ಬಟಾ ಬಯಲಾಗುವ ಎಲ್ಲಾ ಸಾಧ್ಯತೆ ಇದೆ..!

ಶಿರಸಿಯ ಸಮೀಪ ರಾತ್ರೊ ರಾತ್ರಿ..!
ಅಸಲು, ಮುಂಡಗೋಡಿನ ಸರ್ಕಾರಿ ಟಿಂಬರ್ ಡೀಪೋದಿಂದ ಪಾಸ್ ಹೊ‌ಂದಿದ್ದ ಸಾಗವಾನಿ ನಾಟಾಗಳನ್ನು ಶಿರಸಿಯ ಅಡ್ಡೆಯೊಂದರ ಹೆಸರಲ್ಲಿ ಸಾಗಾಟ ಮಾಡಲಾಗುತ್ತಿತ್ತು. ನಿನ್ನೆ ಅಂದ್ರೆ ಶುಕ್ರವಾರ ರಾತ್ರಿ ಸರಿಸುಮಾರು ಒಂಬತ್ತು ಗಂಟೆಯಷ್ಟೊತ್ತಿಗೆ ಎರಡು ಲಾರಿಗಳಲ್ಲಿ ಭರ್ತಿಗೊಳಿಸಿದ ಮಾಲು ರವಾನೆಯಾಗಿತ್ತು. ಹೀಗಿದ್ದಾಗ, ಆ ಮಾಲಿನ ಜೊತೆ ಜೊತೆಯಲ್ಲೇ ಸರ್ಕಾರಿ ಟಿಂಬರ್ ಡೀಪೋದಲ್ಲಿದ್ದ ಲಕ್ಷಾಂತರ ಮೌಲ್ಯದ ನಾಟಾಗಳನ್ನೂ ತುರುಕಲಾಗಿತ್ತು. ಹೀಗಾಗಿ, ಇಂತಹದ್ದೊಂದು ಕಳ್ಳಾಟದ ಹಿಂದೆ ಅವನೊಬ್ಬ “ರೇಂಜರ್” ನ ಕೈವಾಡ ಇದೆ ಅಂತಾ ಅಲ್ಲಿರೋ ಕೆಲವ್ರಿಗೆ ಅಂದಾಜು ಸಿಕ್ಕಿತ್ತು. ಈ ಕಾರಣದಿಂದಲೇ ಕಳ್ಳಾಟ ಕಂಡಿದ್ದ ಕೆಲವು ಖಾಸಗಿಯವರು ಶಿರಸಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಬಾತ್ಮಿ ಕೊಟ್ಟಿದ್ದರು. ಅವಾಗ್ಲೇ ನೋಡಿ ಕಳ್ಳಾಟದ ಅಸಲಿ ಕರಾಮತ್ತು ಬಟಾಬಯಲಾಗಿದ್ದು.

ಆರೋಪಿಗಳು

ಶಿರಸಿ ಸಮೀಪ..!
ಯಾವಾಗ, ಮುಂಡಗೋಡಿನಿಂದ ಅಕ್ರಮವಾಗಿ ಮಾಲು ಸಾಗಾಟ ಆಗ್ತಿದೆ ಅನ್ನೋ ಬಾತ್ಮಿ ಸಿಕ್ಕಿತೋ, ಶಿರಸಿಯ ದಕ್ಷ ಅರಣ್ಯ ಅಧಿಕಾರಿಗಳು ರಾತ್ರಿ ಸರಿ ಸುಮಾರು 12 ಗಂಟೆಯಷ್ಟೊತ್ತಿಗೆ ತಮ್ಮ ಪಡೆಯೊಂದಿಗೆ ಕಾದು ಕುಳಿತಿದ್ರು. ಯಕ್ಕಂಬಿಯ ಹತ್ತಿರ ಬಲೆ ಬೀಸಿ ಕುಳಿತಿದ್ದ ಅಧಿಕಾರಿಗಳಿಗೆ ಎರಡೂ ಲಾರಿಗಳು ಅನಾಮತ್ತಾಗಿ ತಗಲಾಕ್ಕೊಂಡಿವೆ. ಹೀಗಾಗಿ, ತಪಾಸಣೆ ನಡೆಸಿದ ಅಧಿಕಾರಿಗಳಿಗೆ
ಕಳ್ಳ‌ಮಾಲಿನ ಹಕೀಕತ್ತು ಕಣ್ಣಿಗೆ ಕಂಡಿದೆ. ಹೀಗಾಗಿ ತಕ್ಷಣವೇ ಎರಡೂ ಲಾರಿಗಳನ್ನು ಹಾಗೂ ಅದ್ರೊಂದಿಗೆ ಸುಮಾರು ನಾಲ್ಕು ಆರೋಪಿಗಳನ್ನೂ ಮಾಲು ಸಮೇತ ಹೆಡೆಮುರಿ ಕಟ್ಟಿದ್ದಾರಂತೆ. ಅಂದಹಾಗೆ, ಹಾಗೆ “ಸರ್ಕಾರಿ ಕಳ್ಳ” ರಿಂದಲೇ ಸಾಗಾಟ ಆಗ್ತಿದ್ದ ಮಾಲಿನ ಅಂದಾಜು ಮೌಲ್ಯ ಬರೋಬ್ಬರಿ 20 ಲಕ್ಷಕ್ಕೂ ಮಿಗಿಲು ಅಂತಾ ತಿಳಿದು ಬಂದಿದೆ.

ಆರೋಪಿಗಳು

ಯೂನಿಫಾರ್ಮು ತೊಟ್ಟ ಕಳ್ಳರಾ..?
ನಿಮಗೆ ಗೊತ್ತಿರಲಿ, ಮುಂಡಗೋಡಿನ ಅರಣ್ಯ ಇಲಾಖೆಯಲ್ಲಿ ಯೂನಿಫಾರ್ಮು ತೊಟ್ಟ ಕೆಲವು ಕಳ್ಳರಿದ್ದಾರೆ. ಕೆಲವು ರಾಜಕೀಯ ನಾಯಕರ ನೆರಳಲ್ಲಿ ಮಾಡಬಾರದ ದಂಧೆ ಮಾಡಿ ಕೋಟಿ ಕೋಟಿ ಕುಳಗಳಾಗಿದ್ದಾರೆ. ಅದರ ನಡುವೆ, ನಿಜ ಅಂದ್ರೆ ಇವತ್ತಿಗೂ ಮುಂಡಗೋಡಿನ ಅರಣ್ಯ ಇಲಾಖೆಯಲ್ಲಿ ದಕ್ಷತೆಯನ್ನೇ ಉಸಿರಾಗಿಸಿಕೊಂಡು ಬದುಕುವವರೂ ಇದ್ದಾರೆ, ಆದ್ರೆ, ಅವ್ರೇಲ್ಲ ಕೆಲವು ಬ್ರಷ್ಟರ ಅಂಧಾ ದರ್ಬಾರಿನಲ್ಲಿ ತಮ್ಮ ತಮ್ಮ ದನಿಗಳನ್ನೇ ಕಳೆದುಕೊಂಡಂತೆ ಬೆಪ್ಪಗಿದ್ದಾರೆ. ಆ ಕಾರಣಕ್ಕಾಗೇ ಕಾತೂರಿನಲ್ಲಿ ಅರಣ್ಯ ಇಲಾಖೆಯ ಅವನೊಬ್ಬ ಅಧಿಕಾರಿ ಮೆರೆಯುತ್ತಿದ್ದಾನೆ. ಅದು ಬೇರೆ ಮಾತು.

ನಿರಂತರ ಕಳ್ಳಾಟಗಳು..!
ಅಸಲು, ಅರಣ್ಯ ಇಲಾಖೆಯ ಸರ್ಕಾರಿ ಟಿಂಬರ್ ಡೀಪೋದಲ್ಲಿ ನಿತ್ಯವೂ ಇಂತಹ ಕಳ್ಳಾಟಗಳು ನಿರಂತರವಾಗಿವೆ. ಅದಕ್ಕಾಗೇ ಅದೊಂದು ಪಡೆ ಕಾರ್ಯ ನಿರ್ವಹಿಸ್ತಿದೆ ಅನ್ನೋ ಮಾತು ಇದೆ. ಹೀಗೆ ಕಳ್ಳಾಟದ ಮಾಲು ಸಾಗಿಸಲೆಂದೇ ಕೆಲವು ಆಸೆಬುರುಕ ಲಾರಿ ಮಾಲೀಕರು ಅಧಿಕಾರಿಗಳೊಂದಿಗೆ ಶಾಮೀಲಾಗಿ ರಾತ್ರೋ ರಾತ್ರಿ ಕಮಾಯಿ ಮಾಡಿಕೊಳ್ತಿರೋದು ಎಲ್ಲರಿಗೂ ಗೊತ್ತು. ಇಂತಹ ಕಳ್ಳ‌ಮಾಲು ಸಾಗಿಸಲೆಂದೇ ಇರುವ ಕೆಲವು ಲಾರಿ ಮಾಲೀಕರಿಗೆ ಇಂತಹ ಅಧಿಕಾರಿಗಳು ಬಲು ಅಚ್ಚುಮೆಚ್ಚು. ಹೀಗಾಗಿನೇ ಫಿಪ್ಟಿ ಫಿಪ್ಟಿ ಲೆಕ್ಕದಲ್ಲೂ ದಂಧೆಗಿಳಿಯೋ ಈ “ಅಕ್ರಮ ಪ್ರೆಂಡಸಿಪ್ಪು” ಅಧಿಕಾರಿಗಳು ಹಾಗೂ ಲಾರೀ ಮಾಲೀಕರ ನಡುವೆ ಆಗಿರತ್ತೆ. ಹಾಗಂತಾ ಕೆಲವು ಪ್ರಾಮಾಣಿಕ ಅಧಿಕಾರಿಗಳೇ ಮಾತಾಡಿಕೊಳ್ತಿದಾರೆ. ಆದ್ರೆ ಇದನ್ನೇಲ್ಲ ಕಂಡರೂ ಕಾಣದಂತೆ ಇರೋ ಹಿರಿಯ ಅಧಿಕಾರಿಗಳಿಗೂ ಇದ್ರಲ್ಲಿ ಪಾಲಿದೆಯಾ..? ತನಿಖೆಯಿಂದ ತಿಳಿಯಬೇಕಿದೆ ಅಷ್ಟೆ..

ಈ ಕೇಸಲ್ಲಿ..!
ಅಂದಹಾಗೆ, ಸದ್ಯ ಬಲೆಗೆ ಹಾಕಿರೋ ಕೇಸಲ್ಲಿ ಖಡಕ್ಕಾದ ತನಿಖೆಯ ಅವಶ್ಯಕತೆ ಇದೆ. ಈ ಕಾರಣಕ್ಕಾಗೇ ಖುದ್ದು ಯಲ್ಲಾಪುರ ಡಿಎಫ್ ಓ ಶಶಿಧರ್ ಹೆಗಡೆ ಸಾಹೇಬ್ರು ಬೆಳಿಗ್ಗೆಯಿಂದಲೇ ಫಿಲ್ಡಿಗಿಳಿದಿದ್ದಾರೆ. ಮುಂಡಗೋಡಿನ ಟಿಂಬರ್ ಡೀಪೋದಲ್ಲಿ ಕುಳಿತು ಈ ಕೇಸಲ್ಲಿ ಯಾರ್ಯಾರ ಪಾಲು ಎಷ್ಟೇಷ್ಟಿದೆ..? ಅಸಲೀ ಕಳ್ಳರು ಯಾರು..? ಹೇಗೇಲ್ಲ ನಡೀಯತ್ತೆ ಅಕ್ರಮ ಅನ್ನೋದರ ಬಗ್ಗೆ ಸಮಗ್ರ ತನಿಖೆಗಿಳಿದಿದ್ದಾರೆ. ಹಾಗೆ ನೋಡಿದ್ರೆ ಈ ಕೇಸಲ್ಲಿ ಏನಿಲ್ಲವೆಂದರೂ 6 ಜನ ಅಧಿಕಾರಿಗಳು ಸಸ್ಪೆಂಡ್ ಆಗೋದು ಕನ್ಪರ್ಮ್ ಅನ್ನೋ ಮಾಹಿತಿ ಲಭ್ಯವಾಗ್ತಿದೆ. ಅದು ಆಗಲೇ ಬೇಕಿರೋದು ಸದ್ಯದ ಅವಶ್ಯಕತೆ.

ಇನ್ನಾದ್ರೂ..!
ನಿಜ, ಇದು ಸಮಸ್ತ ಪರಿಸರ ಪ್ರಿಯರ ಒತ್ತಾಸೆ. ಮುಂಡಗೋಡಿನ ಅರಣ್ಯ ಇಲಾಖೆಯಲ್ಲಿ ಅಕ್ರಮಿಗಳಿಗೆ ಸರಿಯಾದ ಪಾಠ ಕಲಿಸಲೇ ಬೇಕಿದೆ. ಅದ್ಯಾವನೇ “ರಾಜ” ಕಾರಣಿಯ ಕೃಪೆ ಇದ್ರೂ ಅಕ್ರಮಿಗಳ ಬಾಲ ಕಟ್ ಮಾಡಲೇಬೇಕಿದೆ. ಇಲ್ಲವಾದಲ್ಲಿ ಮುಂಡಗೋಡಿನ ಹಸಿರ ದೇವತೆಯ ನರಳಾಟದ ಶಾಪ ಎಲ್ಲರಿಗೂ ತಟ್ಟದೇ ಇರಲ್ಲ. ಹೀಗಾಗಿ, DFO ಶಶಿಧರ್ ಹಗಡೆ ಸಾಹೇಬರ ಮೇಲೆ ಭರವಸೆ ಇದೆ‌. ಅವ್ರ ಮೂಲಕ ಅಕ್ರಮಿಗಳ ಪಾರುಪತ್ಯ ಕೊನೆಯಾಗಲಿ ಅಷ್ಟೆ.

error: Content is protected !!