ಮುಂಡಗೋಡ ಅರಣ್ಯ ಇಲಾಖೆಯ ಟಿಂಬರ್ ಡೀಪೋದಿಂದ ಕಟ್ಟಿಗೆ ಸಾಗಾಟ ಕೇಸ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅಕ್ರಮ ಸಾಗಾಟದ ವೇಳೆ ಸಿಕ್ಕಿಬಿದ್ದಿರೋ ಎರಡೂ ಲಾರಿಗಳ ಮಾಲೀಕರು ಹಾಗೂ ಚಾಲಕರ ಕುಟುಂಬಸ್ಥರು ಇಲಾಖೆ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ್ದಾರೆ. ಕೇಸ್ ಬಗ್ಗೆ ನಮಗೆ ಏನೂ ಗೊತ್ತಿಲ್ಲ. ನಮ್ಮನ್ನ ಬಲಿ ಪಶು ಮಾಡಲಾಗಿದೆ ಅಂತಾ ಆಕ್ರೋಶ ಹೊರಹಾಕಿದ್ದಾರೆ.
ಹೌದು, ರವಿವಾರ ಮುಂಡಗೋಡಿನ ಅರಣ್ಯ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ ತಮ್ಮ ಅಳಲು ತೋಡಿಕೊಂಡಿರೋ ಲಾರಿ ಚಾಲಕರು ಹಾಗೂ ಮಾಲೀಕರು, ಈ ಕೇಸಿನಲ್ಲಿ ನಮ್ಮದೇನೂ ತಪ್ಪಿಲ್ಲ. ಡೀಪೋದಲ್ಲಿ ನಾವು ಬಾಡಿಗೆ ಸಲುವಾಗಿ ಅಧಿಕಾರಿಗಳು ಹೇಳಿದಂತೆ ಲೋಡ್ ಸಾಗಿಸುತ್ತೇವೆ. ಡೀಪೋದಲ್ಲಿ ಅಧಿಕಾರಿಗಳೇ ನಿಂತು ನಾಟಾಗಳ ಲೋಡ್ ಮಾಡಿಸಿರ್ತಾರೆ. ಹೀಗಾಗಿ, ಇದ್ರಲ್ಲಿ ನಮಗೇನೂ ಗೊತ್ತೆ ಇರಲ್ಲ. ನಮ್ಮನ್ನು ಬಲಿ ಮಾಡಬೇಡಿ ಅಂತಾ ಮನವಿ ಮಾಡಿದ್ದಾರೆ.
ಇನ್ನು, ಸಾಲಸೋಲ ಮಾಡಿ ಲಾರಿ ಖರೀಧಿಸಿದ್ದು, ನಮ್ಮ ಯಜಮಾನರಿಗೆ ಗೊತ್ತಿಲ್ಲದಂತೆ ಇಷ್ಟೇಲ್ಲ ನಡೆದು ಹೋಗಿದೆ. ನಮಗೆ ಅನ್ಯಾಯವಾಗಿದೆ ಅಂತಾ ಲಾರೀ ಮಾಲೀಕ ಕಂ ಚಾಲಕ ಕಲ್ಲಪ್ಪ ಪತ್ನಿ ಲಕ್ಷ್ಮೀ ಎಂಬುವವರು ಕಣ್ಣೀರು ಹಾಕಿದ್ದಾರೆ.
ಒಟ್ನಲ್ಲಿ, ಟಿಂಬರ್ ಡೀಪೋದಿಂದ ಅಕ್ರಮವಾಗಿ ಬೆಲೆಬಾಳುವ ನಾಟಾಗಳನ್ನು ಸಾಗಾಟ ಮಾಡಿರೋ ಪ್ರಕರಣದಲ್ಲಿ ಅಧಿಕಾರಿಗಳ ಬ್ರಷ್ಟತನಕ್ಕೆ ಬಡ ಲಾರಿ ಚಾಲಕರು ಬಲಿಯಾದ್ರಾ ಅನ್ನೋ ಅನುಮಾನ ಶುರುವಾಗಿದೆ. ಆದ್ರೆ, ಕಾನೂನಾತ್ಮಕವಾಗಿ ಇಲಾಖೆಯ ತನಿಖೆಯ ನಂತರವಷ್ಟೇ ಅಸಲಿಯತ್ತು ಹೊರಬರಲಿದೆ.