ಬಸ್ ನಿಂದ ಆಯತಪ್ಪಿ ಬಿದ್ದು 14 ವರ್ಷದ ವಿದ್ಯಾರ್ಥಿನಿ ದಾರುಣ ಸಾವು..!

ಹಾನಗಲ್: ಬಸ್ ನಿಂದ ಆಯತಪ್ಪಿ ಬಿದ್ದು‌ ವಿದ್ಯಾರ್ಥಿನಿಯೋರ್ವಳು ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಹಾನಗಲ್ ತಾಲ್ಲೂಕಿನ ಕುಸನೂರು ಗ್ರಾಮದ ಬಳಿ ಘಟನೆ ನಡೆದಿದ್ದು ಪೋಷಕರ ಆಕ್ರಂಧನ ಮುಗಿಲು ಮುಟ್ಟಿದೆ.

ಮಧು ಕುಂಬಾರ (14) ಮೃತಪಟ್ಟ ವಿದ್ಯಾರ್ಥಿನಿಯಾಗಿದ್ದಾಳೆ. ಈಕೆ ಇಂದು
ವಾಸನ ಗ್ರಾಮದಿಂದ ಕುಸನೂರು ಗ್ರಾಮಕ್ಕೆ ಪ್ರೌಢಶಾಲೆಗೆ ಆಗಮಿಸುತ್ತಿದ್ಲು, ಈ ವೇಳೆ ಬಸ್ ನಲ್ಲಿ ಜನ ತುಂಬಿದ್ದಾರೆಂದು ವಿದ್ಯಾರ್ಥಿನಿ ಬಸ್ ಬಾಗಿಲ ಬಳಿ ನಿಂತಿದ್ದಳು. ಆದ್ರೆ, ಬಸ್ ಟರ್ನ್ ಆಗುವಾಗ ಆಯ ತಪ್ಪಿ ಬಲವಾಗಿ ತಲೆ ಹಚ್ಚಿ ನೆಲಕ್ಕೆ ಬಿದ್ದು ಸಾವು ಕಂಡಿದ್ದಾಳೆ. ಆಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ‌.

error: Content is protected !!