Home ಉತ್ತರ ಕನ್ನಡ ಮುಂಡಗೋಡ ಸುದ್ದಿ

Category: ಮುಂಡಗೋಡ ಸುದ್ದಿ

Post
ಬಾಚಣಕಿ ವಿದ್ಯಾರ್ಥಿನಿ ಜನಪದ ಗಾಯನ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ..! ಗ್ರಾಮಸ್ಥರ ಹರ್ಷ

ಬಾಚಣಕಿ ವಿದ್ಯಾರ್ಥಿನಿ ಜನಪದ ಗಾಯನ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ..! ಗ್ರಾಮಸ್ಥರ ಹರ್ಷ

ಮುಂಡಗೋಡ ತಾಲೂಕಿನ ಬಾಚಣಕಿಯ ಗ್ರಾಮೀಣ ಪ್ರತಿಭೆಯೊಂದು ಸಾಧನೆ ಮಾಡಿದೆ. ಜನಪದ ಗೀತಗಾಯನ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡದು ಮುಂಡಗೋಡ ತಾಲೂಕಿಗೆ ಕೀರ್ತಿ ತಂದಿದ್ದಾಳೆ‌. ಅಂದಹಾಗೆ ಬಾಚಣಕಿ ಗ್ರಾಮದ ಅನುಪಮ ನಾಗಪ್ಪ ಕೊಂಡಿಕೊಪ್ಪ ಎಂಬುವವಳೆ ಸಾಧನೆಗೈದ ವಿದ್ಯಾರ್ಥಿನಿ. ಸದ್ಯ ಮುಂಡಗೋಡ ಲೊಯೊಲಾ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡ್ತಿರೋ ವಿದ್ಯಾರ್ಥಿನಿ ತಾಲೂಕಾ ಮಟ್ಟ, ಜಿಲ್ಲಾ ಮಟ್ಟ, ವಿಭಾಗ ಮಟ್ಟದಲ್ಲಿಯೂ ಪ್ರಶಸ್ತಿ ಪಡೆದು ಸದ್ಯ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಳು. ಇಂದು ಬೆಂಗಳೂರಿನ ಕ್ರೈಸ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ...

Post
ಇಂದೂರಿನ ವ್ಯಕ್ತಿಯಿಂದ ನಿವೇಶನ ಸಕ್ರಮ ಹೆಸರಲ್ಲಿ ಅಕ್ರಮ..! ತಹಶೀಲ್ದಾರ್ ಹೆಸರು ಬಳಸಿ ದಂಧೆ ಆರೋಪ..!!

ಇಂದೂರಿನ ವ್ಯಕ್ತಿಯಿಂದ ನಿವೇಶನ ಸಕ್ರಮ ಹೆಸರಲ್ಲಿ ಅಕ್ರಮ..! ತಹಶೀಲ್ದಾರ್ ಹೆಸರು ಬಳಸಿ ದಂಧೆ ಆರೋಪ..!!

ಮುಂಡಗೋಡ ತಾಲೂಕಿನ ಇಂದೂರಿನ ವ್ಯಕ್ತಿಯೋರ್ವ ತಹಶೀಲ್ದಾರ್ ಹೆಸರಲ್ಲಿ ಹಣ ವಸೂಲಿ ದಂಧೆ ಶುರುವಿಟ್ಟಿದ್ದಾನೆ ಆತನಿಂದ ಸಾರ್ವಜನಿಕರು ಎಚ್ಚರದಿಂದ ಇರಿ ಅಂತಾ ತಹಶೀಲ್ದಾರ್ ಶಂಕರ್ ಗೌಡಿ ಎಚ್ಚರಿಸಿದ್ದಾರೆ. ಇಂದೂರು ಗ್ರಾಮದ ಹಜರತ್ ಅಲಿ ಬಾಷಾಸಾಬ ಜಾತಗಾರ, ಎಂಬುವವನೇ ಸದ್ಯ ವಂಚಿಸಿರೋ ಆರೋಪ ಹೊತ್ತಿದ್ದು. ಇಂದೂರ ಗ್ರಾಮದ ಮನೆಗಳ ನಿವೇಶನ ಸಕ್ರಮ ಮಾಡುವ ಕುರಿತಾಗಿ 4 ಜನ ಸಾರ್ವಜನಿಕರಿಂದ ತಲಾಟಿ, ಕಂದಾಯ ನಿರೀಕ್ಷಕ ಮತ್ತು ತಹಶೀಲ್ದಾರ್ ಹೆಸರು ದುರುಪಯೋಗ ಮಾಡಿ, ಸುಳ್ಳು ಹೇಳಿ, ಹಣ ವಸೂಲಿ ಮಾಡಿದ್ದಾನೆ ಅಂತಾ ಖುದ್ದು...

Post
ಮುಂಡಗೋಡ ಹುಬ್ಬಳ್ಳಿ ರಸ್ತೆಯಲ್ಲಿ ಬೈಕ್ ಅಪಘಾತ, ಸವಾರನಿಗೆ ಗಂಭೀರ ಗಾಯ..!

ಮುಂಡಗೋಡ ಹುಬ್ಬಳ್ಳಿ ರಸ್ತೆಯಲ್ಲಿ ಬೈಕ್ ಅಪಘಾತ, ಸವಾರನಿಗೆ ಗಂಭೀರ ಗಾಯ..!

ಮುಂಡಗೋಡ ಪಟ್ಟಣದ ಹೊರವಲಯದ ಹುಬ್ಬಳ್ಳಿ ರಸ್ತೆಯಲ್ಲಿ ಬೈಕ್ ಸ್ಕಿಡ್ ಆಗಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಗಾಯಾಳು ಬೈಕ್ ಸವಾರ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ಹೆಸರು ಇನ್ನೂ ತಿಳಿದು ಬಂದಿಲ್ಲ. ಮುಂಡಗೋಡ ಶಿರಸಿ ರಸ್ತೆಯಲ್ಲಿ ಬೈಕ್ ಮೇಲೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದ್ದು, ರಸ್ತೆಯಲ್ಲೇ ಗಾಯಗೊಂಡು ಬಿದ್ದಿದ್ದ ಎನ್ನಲಾಗಿದೆ. ಹೀಗಾಗಿ ಇದೇ ವೇಳೆ ದಾರಿಹೋಕರು ಗಮನಿಸಿ ತಕ್ಷಣವೇ 108 ಅಂಬ್ಯಲೆನ್ಸ್ ಗೆ ಕರೆ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ 108 ಅಂಬ್ಯುಲೆನ್ಸ್ ಸಿಬ್ಬಂದಿಗಳಾದ ಧನರಾಜ್, ಹಾಗೂ ಚಾಲಕ...

Post
ಮುಂಡಗೋಡಿನಲ್ಲಿ ಶ್ರೀಗಂಧ ಕಳ್ಳತನ ಮಾಡಿದ್ದ ಖತರ್ನಾಕ ಗ್ಯಾಂಗ್ ಆರೆಸ್ಟ್..!

ಮುಂಡಗೋಡಿನಲ್ಲಿ ಶ್ರೀಗಂಧ ಕಳ್ಳತನ ಮಾಡಿದ್ದ ಖತರ್ನಾಕ ಗ್ಯಾಂಗ್ ಆರೆಸ್ಟ್..!

ಮುಂಡಗೋಡ ಹಾಗೂ ಮಂಚಿಕೇರಿ ಅರಣ್ಯ ಅಧಿಕಾರಿಗಳ ಬ್ರಿಲ್ಲಿಯಂಟ್ ಕಾರ್ಯಾಚರಣೆ ಸಕ್ಸೆಸ್ ಆಗಿದೆ. ಪರಿಣಾಮ ಖತರ್ನಾಕ ಅರಣ್ಯ ರಾಬರಿ ಗ್ಯಾಂಗ್ ಅಂದರ್ ಆಗಿದೆ. ಅಕ್ಟೋಬರ್ 7 ರ ಆಸುಪಾಸಿನಲ್ಲಿ ಮುಂಡಗೋಡ ತಾಲೂಕಿನ ಹಲವು ಕಡೆ ನಡೆದಿದ್ದ ಶ್ರೀಗಂಧ ಮರ ಕಳ್ಳತನ ಕೇಸಿನಲ್ಲಿ ಬೇಕಾಗಿದ್ದ ಅರಣ್ಯ ಸ್ಮಗ್ಲಿಂಗ್ ಕ್ರಿಮಿಗಳನ್ನು ಬಹುತೇಕ ಅಂದರ್ ಮಾಡಲಾಗಿದೆ. ದೂರದ ಮದ್ಯ ಪ್ರದೇಶದಿಂದ ಬಂದು ಪಟ್ಟಣಗಳು, ಹಳ್ಳಿಗಳ ಹೊರಗೆ ಟೆಂಟ್ ಹಾಕಿ ಸಂಚು ರೂಪಿಸೋ ಭಯಾನಕ ಸ್ಮಗ್ಲಿಂಗ್ ಪಡೆಯನ್ನ ಮೊದಲ ಬಾರಿಗೆ ಹೆಡೆಮುರಿ ಕಟ್ಟಲಾಗಿದೆ. ಅಷ್ಟಕ್ಕೂ...

Post
ಸನವಳ್ಳಿಯಲ್ಲಿ ನೇಣಿಗೆ ಶರಣಾದ ಪಿಡಿಓ, ತನ್ನ ತೋಟದಲ್ಲೇ ಆತ್ಮಹತ್ಯೆ ಮಾಡಿಕೊಂಡ ನೌಕರ..!

ಸನವಳ್ಳಿಯಲ್ಲಿ ನೇಣಿಗೆ ಶರಣಾದ ಪಿಡಿಓ, ತನ್ನ ತೋಟದಲ್ಲೇ ಆತ್ಮಹತ್ಯೆ ಮಾಡಿಕೊಂಡ ನೌಕರ..!

ಮುಂಡಗೋಡ ತಾಲೂಕಿನ ಸನವಳ್ಳಿಯಲ್ಲಿ ಗ್ರಾಮ ಪಂಚಾಯತಿ ನೌಕರ (ಪ್ರಭಾರ ಪಿಡಿಓ) ನೇಣಿಗೆ ಶರಣಾಗಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಸೋಮವಾರ ಬೆಳ್ಳಂ ಬೆಳಿಗ್ಗೆ ತಮ್ಮದೇ ತೋಟದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತಾ ಹೇಳಲಾಗ್ತಿದೆ. ಸನವಳ್ಳಿ ಗ್ರಾಮದ ರಾಮಲಿಂಗ ಶಿವಲಿಂಗಪ್ಪ ಕಳಸಗೇರಿ(39) ಎಂಬುವವರೇ ನೇಣಿಗೆ ಶರಣಾಗಿದ್ದಾರೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹೊನ್ನತ್ತಿ ಗ್ರಾಮ ಪಂಚಾಯತಿಯ ಪ್ರಭಾರ ಪಿಡಿಓ ಆಗಿ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ರವಿವಾರ ರಜೆ ಇದ್ದ ಕಾರಣ ಸ್ವಗ್ರಾಮಕ್ಕೆ ಬಂದಿದ್ದರು. ಆದ್ರೆ, ಇಂದು ಏಕಾಏಕಿ ತೋಟದಲ್ಲೇ...

Post
ಅತ್ತಿವೇರಿ ಬಸವಧಾಮದಲ್ಲಿ ಉ.ಕ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನ ಯಶಸ್ವಿ..! ಹಸಿರ ಸಿರಿಯ ನಡುವೆ ಭೋರ್ಗರೆದ ವಚನಾಮೃತ..!!

ಅತ್ತಿವೇರಿ ಬಸವಧಾಮದಲ್ಲಿ ಉ.ಕ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನ ಯಶಸ್ವಿ..! ಹಸಿರ ಸಿರಿಯ ನಡುವೆ ಭೋರ್ಗರೆದ ವಚನಾಮೃತ..!!

ಮುಂಡಗೋಡ ತಾಲೂಕಿನ ಅತ್ತಿವೇರಿ ಬಸವಧಾಮದಲ್ಲಿ ಉತ್ತರ ಕನ್ನಡ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಭಾಗಿಯಾಗಿದ್ದ ವಚನ ಸಾಹಿತ್ಯ ಪ್ರಿಯರ ಸಮ್ಮುಖದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಿಜಗುಣಾನಂದ ಶ್ರೀಗಳು ತಮ್ಮ ಆಶೀರ್ವಚನದಲ್ಲಿ ಶರಣರ ವಚನಗಳ ಕುರಿತು ಮನಮುಟ್ಟುವ ಹಾಗೆ ವರ್ಣಿಸಿದ್ರು. ನಮ್ಮ‌ ದೇಶದಲ್ಲಿ ಎಲ್ಲರೂ ಬರೀ ದೇವರ ಬಗ್ಗೆ ಮಾತಾಡಿದ್ರು, ಆದ್ರೆ ಬಸವಣ್ಣನವರು ಮಾತ್ರ ಮನುಷ್ಯರ ಬಗ್ಗೆ ಮಾತಾಡಿದ್ರು. ಹೀಗಾಗಿ, ಶರಣರ ವಚನಗಳು ಇಂದಿಗೂ ಜನಸಾಮಾನ್ಯರ ನಡುವೆ ನಿಚ್ಚಳವಾಗಿವೆ ಅಂತಾ ತಿಳಿಸಿದ್ರು....

Post
ನಂದಿಕಟ್ಟಾ, ಹುಲಿಹೊಂಡ ಭಾಗದಲ್ಲಿ ಕಾಡಾನೆಗಳ ಹಿಂಡು, ರೈತರ ತೋಟ, ಗದ್ದೆಗಳಲ್ಲಿ ಹಾನಿ..!

ನಂದಿಕಟ್ಟಾ, ಹುಲಿಹೊಂಡ ಭಾಗದಲ್ಲಿ ಕಾಡಾನೆಗಳ ಹಿಂಡು, ರೈತರ ತೋಟ, ಗದ್ದೆಗಳಲ್ಲಿ ಹಾನಿ..!

 ಮುಂಡಗೋಡ ತಾಲೂಕಿನ ಹುಲಿಹೊಂಡ, ಬಸಾಪುರ, ನಂದಿಕಟ್ಟಾ ಭಾಗದಲ್ಲಿ ಕಾಡಾನೆಗಳು ಹಿಂಡು ದಾಂಗುಡಿ ಇಟ್ಟಿದೆ. ಕಾಡಂಚಿನ ಗ್ರಾಮಗಳ ರೈತರ ಗದ್ದೆಗಳು, ತೋಟಗಳಿಗೆ ದಾಳಿ ಮಾಡಿ ಬೆಳೆ ನಾಶ ಮಾಡಿವೆ. ಶನಿವಾರ ರಾತ್ರಿ ಹುಲಿಹೊಂಡ ಗ್ರಾಮದ ಕಾಡಂಚಿನ ಗದ್ದೆ ತೋಟಗಳಿಗೆ ದಾಳಿ ಮಾಡಿರೋ ಗಜರಾಜನ ಹಿಂಡು, ರೈತರ ಅಡಿಕೆ ಗಿಡ, ಕಬ್ಬು, ಬಾಳೆ ಫಸಲನ್ನು ತಿಂದು, ತುಳಿದು ಹಾನಿಮಾಡಿವೆ. ಹುಲಿಹೊಂಡ ಗ್ರಾಮದ ನಾಗಪ್ಪ ಅಲ್ಲಾಪುರ, ರಾಜು ಕಂಬಾರ, ಮಂಜುನಾಥ್ ರಾಯ್ಕರ್, ಈಶ್ವರ ಅಲ್ಲಾಪುರ ಎಂಬುವ ರೈತರ ಕಬ್ಬಿನ ಬೆಳೆ...

Post
ಟಿಬೇಟಿಯನ್ ಕ್ಯಾಂಪ್ ನಂ.1 ಕ್ರಾಸ್ ಬಳಿ ಮೊಬೈಲ್ ಶಾಪ್ ಕಳ್ಳತನ, ಬೆಲೆ ಬಾಳುವ ಮೊಬೈಲ್ ಎಗರಿಸಿದ ಕಳ್ಳರು..!

ಟಿಬೇಟಿಯನ್ ಕ್ಯಾಂಪ್ ನಂ.1 ಕ್ರಾಸ್ ಬಳಿ ಮೊಬೈಲ್ ಶಾಪ್ ಕಳ್ಳತನ, ಬೆಲೆ ಬಾಳುವ ಮೊಬೈಲ್ ಎಗರಿಸಿದ ಕಳ್ಳರು..!

 ಮುಂಡಗೋಡ ಟಿಬೇಟಿಯನ್ ಕ್ಯಾಂಪ್ ನಂಬರ್ 1 ರ ಕ್ರಾಸ್ ಬಳಿ ಮೊಬೈಲ್ ಅಂಗಡಿ ಕಳ್ಳತನವಾಗಿದೆ. ಯಲ್ಲಾಪುರ ರಸ್ತೆಯ ಟಿಬೇಟಿಯನ್ ಕ್ಯಾಂಪ್ ಕ್ರಾಸ್ ಬಳಿ ಮೊಬೈಲ್ ಅಂಗಡಿ ಮೇಲಿನ ಸೀಟ್ ಕೊರೆದು ಕಳ್ಳರು ಒಳ ನುಗ್ಗಿದ್ದು ಬೆಲೆಬಾಳುವ ಮೊಬೈಲ್ ಗಳನ್ನು ಎಗರಿಸಿಕೊಂಡು ಹೋಗಿದ್ದಾರೆ‌. ಸುರೇಶ್ ಶೇಟ್ ಎಂಬುವವರಿಗೆ ಸೇರಿದ ಮೊಬೈಲ್ ಶಾಪ್ ನಲ್ಲಿ ಹತ್ತಕ್ಕೂ ಹೆಚ್ಚು ಬೆಲೆಬಾಳುವ ಮೊಬೈಲ್ ಗಳನ್ನು ಕಳ್ಳರು ಎಗರಿಸಿದ್ದಾರೆ ಎನ್ನಲಾಗಿದೆ. ಏನಿಲ್ಲವೆಂದರೂ ಈ ಮೊಬೈಲ್ ಗಳ‌ ಮೌಲ್ಯ ಒಂದು ಲಕ್ಷ ರೂ. ಗೂ...

Post
ಕಾತೂರಿನ ಅಟ್ಟಣಗಿ ಬಳಿ ಬೈಕ್ ಅಪಘಾತ, ತಾಯಿ ಮಗನಿಗೆ ಗಂಭೀರ ಗಾಯ..!

ಕಾತೂರಿನ ಅಟ್ಟಣಗಿ ಬಳಿ ಬೈಕ್ ಅಪಘಾತ, ತಾಯಿ ಮಗನಿಗೆ ಗಂಭೀರ ಗಾಯ..!

ಮುಂಡಗೋಡ ತಾಲೂಕಿನ ಕಾತೂರು ಉಮ್ಮಚಗಿ ರಸ್ತೆಯ ಅಟ್ಟಣಗಿ ಬಳಿ ಬೈಕ್ ಅಪಘಾತವಾಗಿದೆ. ಪರಿಣಾಮ ಬೈಕ್ ಮೇಲೆ ತೆರಳುತ್ತಿದ್ದ ತಾಯಿ‌ ಮಗನಿಗೆ ಗಂಭೀರ ಗಾಯವಾಗಿದೆ. ಹಿಂದಿನಿಂದ ಬೈಕ್ ಗೆ ಲಾರಿ ಗುದ್ದಿದ ಪರಿಣಾಮ ಅಪಘಾತ ಸಂಭವಿಸಿದೆ ಅಂತಾ ಮಾಹಿತಿ ಲಭ್ಯವಾಗಿದೆ. ಘಟನೆಯಲ್ಲಿ ಅಟ್ಟಣಗಿ ಗ್ರಾಮದ ಶಿವಪುತ್ರ ರಾಮಣ್ಣ ಹೋತ್ನಳ್ಳಿ (45) ಹಾಗೂ ಆತನ ತಾಯಿ ದೇವಕ್ಕ ರಾಮಣ್ಣ ಹೋತ್ನಳ್ಳಿ(70) ಗಾಯಗೊಂಡಿದ್ದಾರೆ. ಇನ್ನು, ಸ್ಥಳಕ್ಕೆ ಬಂದ 108 ಅಂಬ್ಯುಲೆನ್ಸ್ ಸಿಬ್ಬಂದಿ, ವೈದ್ಯಕೀಯ ತಂತ್ರಜ್ಞ ಧನರಾಜ್ ಮತ್ತು ಚಾಲಕ ಕೆಂಚೇಶ್ ತಕ್ಷಣ...

Post
ಮುಂಡಗೋಡ PWD ಇಂಜಿನೀಯರ್ ಆಗಿದ್ದ ಎಂ.ರಾಮರಾವ್ ಹೃದಯಾಘಾತದಿಂದ ವಿಧಿವಶ..!

ಮುಂಡಗೋಡ PWD ಇಂಜಿನೀಯರ್ ಆಗಿದ್ದ ಎಂ.ರಾಮರಾವ್ ಹೃದಯಾಘಾತದಿಂದ ವಿಧಿವಶ..!

ಮುಂಡಗೋಡಿನ ಲೋಕೋಪಯೋಗಿ ಇಲಾಖೆಯ ಇಂಜಿನೀಯರ್ ಆಗಿ ಕಾರ್ಯನಿರ್ವಹಿಸಿದ್ದ, ಸದ್ಯ ಕಲಘಟಗಿ PWD ಉಪವಿಭಾಗದ ಸಹಾಯಕ ಇಂಜಿನೀಯರ್ ಆಗಿ ಕಾರ್ಯ ನಿರ್ವಹಿಸ್ತಿದ್ದ ಎಂ.ರಾಮರಾವ್ ವಿಧಿವಶರಾಗಿದ್ದಾರೆ. ಇಂದು ಬೆಳಿಗ್ಗೆ ಹೃದಯಾಘಾತದಿಂದ ವಿಧಿವಶರಾಗಿದ್ದು, ಹುಬ್ಬಳ್ಳಿಯ ಸನ್ಪೋಲ್ ಚರ್ಚ್ ಹತ್ತಿರ ಮೃತರ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇನ್ನು ಎಂ.ರಾಮರಾವ್ ರವರ ಅಂತಿಮ‌ ಸಂಸ್ಕಾರ ನಾಳೆ ದಿನಾಂಕ 28 ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ. ಹುಬ್ಬಳ್ಳಿಯ ಗದಗ ರಸ್ತೆಯ ಸನ್ ಪೀಟರ್ ಚರ್ಚನಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ ಅಂತಾ ಕುಟುಂಬದವರು...

error: Content is protected !!