ಮುಂಡಗೋಡ: ತಮ್ಮ ಬಿಡುವಿಲ್ಲದ ರಾಜಕೀಯ ತೊಳಲಾಟಗಳ ನಡುವೆಯೂ ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ್ ಹೆಬ್ಬಾರ್ ಕ್ಷೇತ್ರದ ಜನರ ದುಃಖ ದುಮ್ಮಾನಗಳನ್ನು ಮರೆತಿಲ್ಲ. ಬದಲಾಗಿ, ಕ್ಷೇತ್ರದ ಜನರ ನೋವಿನಲ್ಲಿ ಭಾಗಿಯಾಗಿದ್ದಾರೆ. ಅಂದಹಾಗೆ, ಇಂದಷ್ಟೇ ನಿಧನರಾದ ಮುಂಡಗೋಡ ತಾಲೂಕಿನ ಉಗ್ಗಿನಕೇರಿ ಗ್ರಾಮದ ಹಿರಿಯ ಸಹಕಾರಿ ಧುರೀಣ ಬಸಯ್ಯ ನಡುವಿನಮನಿ ಯವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದುಕೊಂಡ್ರು. ಅಲ್ದೆ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ರು.
ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿಗೆ ತೆರಳಿದ್ದ ಶಾಸಕ ಶಿಚರಾಮ್ ಹೆಬ್ಬಾರ್, ರಾಜ್ಯಸಭಾ ಚುನಾವಣೆಯಲ್ಲಿ ಮತದಾನ ಮಾಡದೇ ಗೈರಾಗಿದ್ದರು. ಇನ್ನೇನು ಸಂಜೆಯಷ್ಟೊತ್ತಿಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬಹುದಾಗಿದ್ದ ಮಾತುಗಳೂ ಕೇಳಿಬಂದಿದ್ದವು. ಆದ್ರೆ, ಸದ್ಯ ಶಾಸಕ ಶಿವರಾಮ್ ಹೆಬ್ಬಾರ್ ಸ್ವ ಕ್ಷೇತ್ರಕ್ಕೆ ವಾಪಸ್ ಬಂದಿದ್ದು, ಮುಂದಿನ ನಡೆಯ ಬಗ್ಗೆ ಕುತೂಹಲ ಕೆರಳಿಸಿದೆ.