ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ಮುಂಡಗೋಡ ಠಾಣೆಯಲ್ಲಿ ಕೇಸು ದಾಖಲಾಗಿದೆ. ಮೊನ್ನೆ ದಿನಾಂಕ 23 ರಂದು ಮುಂಡಗೋಡ ತಾಲೂಕಿನ ಪಾಳಾ, ಇಂದೂರು ಭಾಗದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಿವಾದಿತ ಹೇಳಿಕೆ ನೀಡಿದ್ದರು ಅನ್ನೋ ಆರೋಪದ ಮೇಲೆ ಸಂಸದರ ವಿರುದ್ಧ FIR ದಾಖಲಿಸಲಾಗಿದೆ.
ಅಂದಹಾಗೆ, ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಬಾಯಿ ಹರಿಬಿಟ್ಟಿದ್ದ ಅನಂತಣ್ಣ, ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸಿದ್ದರಾಮುಲ್ಲಾಖಾನ್ ಅಂತಾ ವ್ಯಂಗ್ಯವಾಡಿದ್ದರು. ಅಲ್ದೆ, ಅಲ್ಪಸಂಖ್ಯಾತರ ತುಷ್ಟಿಕರಣಕ್ಕಾಗಿ ಹಿಂದೂ ದೇವಸ್ಥಾನಗಳ ಹುಂಡಿಗೆ ಹಾಕಿದ ಹಣವನ್ನು, ಚರ್ಚ್, ಮಸೀದಿಗಳಿಗೆ ನೀಡುತ್ತಾರೆ. ಇವ್ರ ಕೈಯಲ್ಲಿ ಅಧಿಕಾರ ಕೊಟ್ರೆ ನಮ್ಮನ್ನೇಲ್ಲ ಮಾರಿ ಬಿಡುತ್ತಾರೆ ಅಂತಾ ಮಾತನಾಡಿದ್ದ ಅನಂತಕುಮಾರ್ ಹೆಗಡೆ ವಿರುದ್ಧ ಮಾದ್ಯಮಗಳ ವಿಡಿಯೊ ಆಧರಿಸಿ ಮುಂಡಗೋಡ ಪೊಲೀಸರು ಸುಮೊಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನು, ಮುಂಡಗೋಡ ಠಾಣೆಯ ಪೇದೆ ಗಣಪತಿ ಬಸವಂತಪ್ಪ ಹುನ್ನಳ್ಳಿ, ಸಂಸದರ ವಿರುದ್ಧ ದೂರು ನೀಡಿದ್ದು, ಎಎಸ್ಐ ಪರಮೇಶ್ವರ ಮೇಸ್ತಾ ಪ್ರಕರಣ ದಾಖಲಿಸಿಕೊಂಡಿದ್ದಾರೆ.