ಮುಂಡಗೋಡ ತಾಲೂಕಿನ ಬಾಚಣಕಿಯ ಅಂಗಡಿ ಕೆರೆಯಲ್ಲಿ ನಾಡಬಾಂಬ್ ಸ್ಪೋಟ ಪ್ರಕರಣ ಭಾರೀ ಸಂಚಲನ ಮೂಡಿಸಿದೆ. ಘಟನಾ ಸ್ಥಳಕ್ಕೆ ಉತ್ತರ ಕನ್ನಡ ಎಸ್ಪಿ ವಿಷ್ಣುವರ್ಧನ್ ಭೇಟಿ ನೀಡಿ ಹೋದ ನಂತರ, ಇಂದು ಮಂಗಳೂರಿನಿಂದ FSL ತಂಡ ಬೇಟಿ ನೀಡಿ ಪರಿಶೀಲನೆ ಕೈಗೊಂಡಿದೆ.

ಶ್ಯಾಂಪಲ್ ಸಂಗ್ರಹ..!
ಅಂದಹಾಗೆ, ಶನಿವಾರ ಬೆಳಿಗ್ಗೆ ಮಂಗಳೂರಿನಿಂದ ಬಾಚಣಕಿಯ ಘಟನಾ ಸ್ಥಳಕ್ಕೆ ಭೇಟಿ ನೀಡಿರೋ ವಿಧಿ ವಿಜ್ಞಾನ ಪ್ರಯೋಗಾಲಯ (FSL) ತಂಡ, ನಾಡಬಾಂಬ್ ಸ್ಪೋಟಗೊಂಡ ಸ್ಥಳದಿಂದ ಅವಶೇಷಗಳನ್ನು ಸಂಗ್ರಹಿಸಿದೆ. ಅಲ್ಲದೇ ಸ್ಪೋಟದ ತೀವ್ರತೆಯ ಬಗ್ಗೆ ಸಮಗ್ರ ತನಿಖೆಗಾಗಿ ಸಂಬಂಧಿಸಿದ ಶ್ಯಾಂಪಲ್ ಗಳನ್ನು ಪಡೆದಿದೆ‌. ಹಾಗೇ, ಸ್ಥಳದಲ್ಲಿ ಬಿದ್ದಿದ್ದ ರಕ್ತದ ಶ್ಯಾಂಪಲ್ ಪಡೆದುಕೊಂಡಿದೆ. ಇದ್ರಿಂದ ಘಟನೆಯ ತೀವ್ರತೆಯ ಬಗ್ಗೆ ಸಂಶೋಧನೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ವೇಳೆ ಮುಂಡಗೋಡಿನ ಸಿಂಗಂ ಸಿಪಿಐ ಬರಮಪ್ಪ ಲೋಕಾಪುರ, ಪಿಎಸ್ ಐ ಪರಶುರಾಮ್ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಸಾಥ್ ನೀಡಿದ್ರು.

error: Content is protected !!