ಮುಂಡಗೋಡ ತಾಲೂಕಿನ ಬಾಚಣಕಿ ಗ್ರಾಮದ ಅಂಗಡಿ ಕೆರೆ ಬಳಿ ನಾಡಬಾಂಬ್ ಸ್ಪೋಟಗೊಂಡ ಘಟನೆಗೆ ಸಂಬಂಧಿಸಿದಂತೆ, ಉತ್ತರ ಕನ್ನಡ ಎಸ್ಪಿ ವಿಷ್ಣುವರ್ಧನ್ ಶುಕ್ರವಾರ ರಾತ್ರಿ ಮಜ್ಜಿಗೇರಿ ಗ್ರಾಮಕ್ಕೆ ಭೇಟಿ ನೀಡಿದ್ರು. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರೋ ರೈತ, ಕುರಿಗಾಹಿ ಬರಮಪ್ಪ ವಡ್ಡರ್ ಆರೋಗ್ಯ ವಿಚಾರಿಸಿದ್ರು. ಅಲ್ಲದೇ ಘಟನೆಯ ಸಂಪೂರ್ಣ ಮಾಹಿತಿ ಪಡೆದುಕೊಂಡ್ರು.

ಇದು ದುರಂತ..!
ಅಸಲು, ಘಟನೆ ನಡೆದು ಎರಡು ದಿನವಾಗಿದೆ. ಯಾವಾಗ ನಿಮ್ಮ ಪಬ್ಲಿಕ್ ಫಸ್ಟ್ ನ್ಯೂಸ್ ಘಟನೆಯ ಸಂಪೂರ್ಣ ಚಿತ್ರಣ ತೆರೆದು ಇಟ್ಟಿತ್ತೋ ಅದೇ ಕ್ಷಣದಿಂದ ಪೊಲೀಸ್ ಇಲಾಖೆ ಅಲರ್ಟ್ ಆಗಿದೆ. ಮುಂಡಗೋಡಿನ ಸಿಂಗಂ ಸಿಪಿಐ  ಬರಮಪ್ಪ ಲೋಕಾಪುರ್ ಸಾಹೇಬ್ರು, ಪಿಎಸ್ಐ ಪರಶುರಾಮ್ ಸೇರಿದಂತೆ ಕಾರವಾರದಿಂದ ಎಸ್ಪಿ ಸಾಹೇಬ್ರೇ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಘಟನೆಯ ಕರಾಳತೆಯ ಬಗ್ಗೆ ತನಿಖೆ ನಡೆಸಲು ಮುಂದಾಗಿದ್ದಾರೆ‌.

ಇಲ್ಲಿನವರೇ ಇಲ್ಲ..!
ಆದ್ರೆ, ಈ ಪ್ರಕರಣ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ನಡೆದು, ಕಾಡು ಪ್ರಾಣಿಗಳ ಜೀವ ತೆಗೆಯಲೆಂದೇ ವ್ಯವಸ್ಥಿತ ಗ್ಯಾಂಗ್ ಹೀನ ಕೃತ್ಯ ಮಾಡ್ತಿದೆ ಅನ್ನೋದು ಗೊತ್ತಿದ್ರೂ ಮುಂಡಗೋಡ ಅರಣ್ಯ ಇಲಾಖೆಯ ಯಾವೊಬ್ಬ ಹಿರಿಯ ಅಧಿಕಾರಿಗಳೂ ಸ್ಥಳಕ್ಕೆ ಈ ಕ್ಷಣದವರೆಗೂ ಭೇಟಿ ನೀಡಿಲ್ಲ. ಪಾಪ, ಸ್ಥಳೀಯ ಕೆಲವೊಂದು ಫಾರೆಸ್ಟರುಗಳು, ವಾಚಮನ್ ಗಳು ಘಟನೆಯ ಮಾಹಿತಿ ಪಬ್ಲಿಕ್ ಫಸ್ಟ್ ಮೂಲಕ ತಿಳಿದ ಕೂಡಲೇ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ಆದ್ರೆ RFO. ಸಾಹೇಬರಾಗಲಿ, ACF ಸಾಹೇಬರಾಗಲಿ ಇನ್ನೂ ಸ್ಥಳಕ್ಕೆ ಬಂದಿಲ್ಲ ಅನ್ನೋದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ACF ಸಾಹೇಬ್ರೇ ಯಾಕೆ ನಿರ್ಲಕ್ಷ..?
ನಿನ್ನೆ ಬೆಳಿಗ್ಗೆ ಘಟನೆಯ ಸಂಪೂರ್ಣ ಮಾಹಿತಿ ತಿಳಿದ ಮೇಲೆ ಸ್ಥಳೀಯ ಬೀಟ್ ನ ಅರಣ್ಯ ಸಿಬ್ಬಂದಿಗಳು ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ‌. ಒಂದು ಮಾಹಿತಿಯ ಪ್ರಕಾರ RFO ವಾಗೀಶ್ ರವರು ಅದೇನೋ ಕೋರ್ಟ್ ಕೆಲಸದ ನಿಮಿತ್ತ ಬೇರೆ ಜಿಲ್ಲೆಗೆ ಹೋಗಿದ್ದಾರೆ. ಅದನ್ನ ಒಪ್ಪಿಕೊಳ್ಳೊಣ. ಆದ್ರೆ, ACF ಸಾಹೇಬ್ರು ಇದೇ ಮಾರ್ಗದಲ್ಲೇ ಓಡಾಡಿಕೊಂಡಿದ್ರೂ ಏನಾಯ್ತಪ್ಪ..? ಅಂತಾ ಒಂದೇ ಒಂದು ಮಾತು ಕೇಳಿಲ್ಲ. ಸ್ಥಳಕ್ಕೆ ಭೇಟಿ ನೀಡಿ ಘಟನೆ ಬಗ್ಗೆ ಕಣ್ಣೆತ್ತಿ ನೋಡಿಲ್ಲ. ಅದೂ ಹೋಗಲಿ, ಗಾಯಗೊಂಡಿರೋ ರೈತನಿಗೆ ಒಂದು ಸಣ್ಣ ಸಾಂತ್ವನವನ್ನಾದ್ರೂ ಹೇಳಬೇಕಿತ್ತು ಅಲ್ವಾ..? ಅದನ್ನೂ ಮಾಡಿಲ್ಲ. ಹಾಗಾದ್ರೆ, ಮಾನ್ಯ ACF ಸಾಹೇಬ್ರ ದೃಷ್ಟಿಯಲ್ಲಿ ಈ ಘಟನೆ ಏನಂದ್ರೆ ಏನೂ ಅಲ್ವಾ..?

ಸಾಹೇಬ್ರೆ..!
ನಿಮಗೆ ಅರಿವಿರಲಿ, ಬಾಚಣಕಿ, ಮಜ್ಜಿಗೇರಿ, ವಡಗಟ್ಟಾ ಭಾಗದ ಅರಣ್ಯ ವ್ಯಾಪ್ತಿಯಲ್ಲಿರೋ ಸುಮಾರು 16 ಕೆರೆಗಳ ಅಂಗಳದಲ್ಲಿ ಬಹುತೇಕ ಇಂತದ್ದೇ ಕೃತ್ಯಗಳು ನಿತ್ಯವೂ ನಡೀತಿದೆ. ಅದು ನಿಮ್ಮ ಎಲ್ಲಾ ಸಿಬ್ಬಂದಿಗಳಿಗೂ ಗೊತ್ತಿದೆ. ಅರಣ್ಯದಲ್ಲಿ ಗಸ್ತು ತಿರುಗುವ ನಿಮ್ಮದೇ ಸಿಬ್ಬಂದಿಗಳಿಗೆ ಇಂತಹ ನಾಡಬಾಂಬ್ ಮಾರಕವಾಗಬಹುದು. ಅದೂ ಹೋಗಲಿ, ಮಜ್ಜಿಗೇರಿ ರಸ್ತೆಯ ಪಕ್ಕದಲ್ಲಿರೋ ಪುಟ್ಟ ಕೆರೆಯ ಪಕ್ಕದಲ್ಲಿಯೂ ಇಂತದ್ದೇ ಮಾದರಿಯ ನಾಡಬಾಂಬ್ ಗಳನ್ನು ಜನ ಗಮನಿಸಿದ್ದಾರೆ. ಜನರು ಸದಾ ಕಾಲ ಕಾಲ್ನಡಿಗೆಯಲ್ಲೇ ತೆರಳುವ ರಸ್ತೆ ಪಕ್ಕದಲ್ಲೇ ಇಂತಹ ಕೃತ್ಯಗಳು ನಡೆದಾಗ ನಿಮಗೆ ಏನೂ ಅನಿಸ್ತಿಲ್ವಾ..? ಯಾಕೆ ನಿಮಗೆ ಇಂತಹ ನಿರ್ಲಕ್ಷ..? ಹಾಗಂತ ಜನ ಪ್ರಶ್ನಿಸ್ತಿದಾರೆ‌. ಇನ್ನಾದ್ರೂ ಎಚ್ಚೆತ್ತುಕೊಳ್ಳಿ ಸಾಹೇಬ್ರೆ..!

error: Content is protected !!