ಮುಂಡಗೋಡ ತಾಲೂಕಿನ ಪಾಳಾ ಹತ್ತಿರ KSRTC ಬಸ್ ಹಾಗೂ ಬೈಕ್ ನಡುವೆ, ಮುಕಾಮುಖಿ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯೂ ಮೃತಪಟ್ಟಿದ್ದಾನೆ. ಮುಂಡಗೋಡ ತಾಲೂಕಾಸ್ಪತ್ರೆಗೆ ಚಿಕಿತ್ಸೆಗೆಂದು ರವಾನಿಸುತ್ತಿದ್ದ ವೇಳೆ ಮೃತಪಟ್ಟಿದ್ದಾನೆ ಅಂತಾ ಮಾಹಿತಿ ತಿಳಿದು ಬಂದಿದೆ. ಈ ಮೂಲಕ ಘಟನೆಯಲ್ಲಿ ಸಾವಿನ ಸಂಖ್ಯೆ ಎರಡಕ್ಕೆ ಏರಿದಂತಾಗಿದೆ.

ಅಂದಹಾಗೆ, ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹುಡೆ ಗ್ರಾಮದ ಜಾಫರ್ ದೇವಸೂರ್(32) ಎಂಬುವವನೇ ಘಟನೆಯಲ್ಲಿ ಮೃತಪಟ್ಟ ಮತ್ತೋರ್ವ ವ್ಯಕ್ತಿಯಾಗಿದ್ದಾನೆ. ಇನ್ನು ಘಟನೆಯಲ್ಲಿ ಹಾನಗಲ್ ತಾಲೂಕಿನ ಆರೆಗೊಪ್ಪ ಗ್ರಾಮದ ಮಾಹಬಲೇಶ್ವರ ಸಂಕಪಾಳೆ(38) ಸ್ಥಳದಲ್ಲೇ ಮೃತಪಟ್ಟಿದ್ದ.

ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

error: Content is protected !!