ಮುಂಡಗೋಡ: ತಾಲೂಕಿನ ಮಳಗಿ ಪೊಲೀಸ್ ಠಾಣೆಯ ಪೊಲೀಸಪ್ಪ ಮಾಡಿರೋ ಅದೊಂದು ರಗಳೆ ,ರಾದ್ದಾಂತ ಇಡೀ ತಾಲೂಕಿನಲ್ಲಿ ಕಿಚ್ಚು ಹೊತ್ತಿಸುತ್ತಿದೆ. ತಾನೇ ಪೊಲೀಸ್ ವರಿಷ್ಠಾಧಿಕಾರಿ ಅಂತಾ ಪೋಸು ಕೊಡುವ ಹುಂಬತನಕ್ಕೆ ಈಗ ಅದೇ ಇಲಾಖೆಯ ಹಿರಿಯರು ತಲೆ ತಗ್ಗಿಸುವ ಮಟ್ಟಿಗೆ ಬಂದು ನಿಂತಿದೆ. ಆಗಿದ್ದೇನು..? ಅದು ಪಾಳಾ ಗ್ರಾಮ, ಮುಂಡಗೋಡ ತಾಲೂಕಿನ ಮಟ್ಟಿಗೆ ಒಂದಿಷ್ಟು ಸೂಕ್ಷ್ಮ ಪ್ರದೇಶ. ಇಲ್ಲಿ ದಶಕಗಳ ಹಿಂದಿನಿಂದಲೂ ಕೋಮು ದಳ್ಳುರಿ ಒಳಗೊಳಗೆ ಹೊಗೆಯಾಡಿ, ಕೆಲವು ಬಾರಿ ಹೊತ್ತಿಕೊಂಡೂ ಉರಿದ ಘಟನೆಗಳಾಗಿತ್ತು. ಆದ್ರೆ ಇತ್ತೀಚೆಗೆ ಇಲ್ಲಿ...
Top Stories
ಮುಂಡಗೋಡ ಪೊಲೀಸ್ರ ದಾಳಿ, ಇಸ್ಪೀಟು ಆಟ ಆಡುತ್ತಿದ್ದವರು ಅಂದರ್, 10 ಜನರಲ್ಲಿ 8 ಜನ ಪರಾರಿ..!
ಶುದ್ಧ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಎಚ್ಚರಿಕೆ ವಹಿಸಿ : ಈಶ್ವರ್ ಕಾಂದೂ
ಕಲಕೇರಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕಂಚಿನ ಪ್ರತಿಮೆ ಅನಾವರಣ..!
ಉದ್ಯೋಗ ಖಾತರಿಯಲ್ಲಿ ಮಹಿಳಾ ಕಾರ್ಮಿಕರು ಭಾಗವಹಿಸುವಿಕೆ ಹೆಚ್ಚಿಸಲು ಸ್ತ್ರೀ ಚೇತನ ಅಭಿಯಾನ..!
ಯತ್ನಾಳ ಉಚ್ಚಾಟನೆಯ ಪರಿಣಾಮ ಎರಡ್ಮೂರು ದಿನದಲ್ಲಿ ಗೊತ್ತಾಗತ್ತೆ: ಶಿವರಾಮ್ ಹೆಬ್ಬಾರ್
ಮುಂಡಗೋಡ ತಾಲೂಕಿನ ಹಲವು ಕಾರ್ಯಕ್ರಮಗಳಲ್ಲಿ ಶಾಸಕ ಶಿವರಾಮ್ ಹೆಬ್ಬಾರ ಭಾಗಿ..!
ಮಳಗಿ ಬಳಿ KSRTC ಬಸ್ ಮೇಲೆ ಉರುಳಿ ಬಿದ್ದ ಮರ, ರಸ್ತೆ ಸಂಚಾರ ಅಸ್ತವ್ಯಸ್ತ, ತಪ್ಪಿದ ಭಾರೀ ಅನಾಹುತ..!
ಜಿಲ್ಲೆಯಲ್ಲಿ ಗೃಹ ಸಚಿವ: ಗೋವಾ ಗಡಿಯಲ್ಲಿ ಎಚ್ಚರಿಕೆ ವಹಿಸಿ: ಡಾ.ಜಿ. ಪರಮೇಶ್ವರ್
ಯತ್ನಾಳ್ ಉಚ್ಚಾಟನೆ, ಇದು ಅನಿವಾರ್ಯವಾಗಿ ತೆಗೆದು ಕೊಂಡಿರೋ ಕ್ರಮ, ವಿಜಯೇಂದ್ರ ಸ್ಪಷ್ಟನೆ..!
ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿಯಿಂದ ಉಚ್ಚಾಟನೆ..! ಕೊನೆಗೂ ಶಾಕ್ ಕೊಟ್ಟ ಹೈಕಮಾಂಡ್..!
ಮುಂಡಗೋಡಲ್ಲಿ SSLC ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ ನೇಣಿಗೆ ಶರಣು..! ಫೇಲ್ ಆಗೋ ಆತಂಕದಲ್ಲಿ ಸಾವಿಗೆ ಕೊರಳೊಡ್ಡಿದ ಬಾಲಕ..!
ಭಾರೀ ಮಳೆ ಗಾಳಿಗೆ ಹಾರಿಬಿದ್ದ ಸಿಡ್ಲಗುಂಡಿ ಶಾಲೆಯ ಮೇಲ್ಚಾವಣಿ, ಅದೃಷ್ಟವಶಾತ್ ವಿದ್ಯಾರ್ಥಿಗಳು ಬಚಾವ್..!
ಮಾರ್ಚ 26 ರಿಂದ ಎರಡು ದಿನ ಜಿಲ್ಲೆಯಲ್ಲಿ ಗೃಹ ಸಚಿವರ ಪ್ರವಾಸ..! ಏನೇನು ಕಾರ್ಯಕ್ರಮ..?
ಖಾಸಗಿ ಫೈನಾನ್ಸ್ ಉದ್ಘಾಟನೆಗೆ ಹೋಗಿದ್ದ ಮತ್ತೋರ್ವ ಶಿಕ್ಷಕಗೂ ನೋಟೀಸ್ ಜಾರಿ..!
IPL ಬೆಟ್ಟಿಂಗ್ ದಂಧೆಕೋರರು ಜಿಲ್ಲೆಯಲ್ಲಿ ಬಾಲ ಬಿಚ್ಚಂಗಿಲ್ಲ, ಎಸ್ಪಿ ನಾರಾಯಣ್ ಖಡಕ್ ಸಂದೇಶ..! ದಂಧೆ ಮಟ್ಟ ಹಾಕಲು ಗಟ್ಟಿ ಪ್ಲಾನ್ ರೆಡಿ..!
ಖಾಸಗಿ ಫೈನಾನ್ಸ್ ಉದ್ಘಾಟನೆಯಲ್ಲಿ ಭಾಗಿಯಾಗಿದ್ದ ಮತ್ತೋರ್ವ ಶಿಕ್ಷಕ..! ಹಾಗಿದ್ರೆ ಅವರ ಮೇಲೆ ಕ್ರಮ ಯಾಕಿಲ್ಲ ಬಿಇಓ ಮೇಡಂ..?
ಮಾ.21 ರಿಂದ SSLC ಪರೀಕ್ಷೆ, ಸುಸೂತ್ರವಾಗಿ ನಡೆಸಲು ಸನ್ನದ್ಧ- ಡಿಸಿ ಲಕ್ಷ್ಮೀ ಪ್ರಿಯ
ಖಾಸಗಿ ಫೈನಾನ್ಸ್ ಉದ್ಘಾಟನೆಗೆ ಸರ್ಕಾರಿ ಅಧಿಕಾರಿ ಭಾಗಿ ಕೇಸ್, ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ ಬಿಇಓ..!
ಪ್ರಯಾಣಿಕರ ಚಿನ್ನದ ಒಡವೆ ಕದಿಯುತ್ತಿದ್ದ ಕಳ್ಳಿಯರ ಗ್ಯಾಂಗ್ ಅರೇಸ್ಟ್..
Category: ಎಡಿಟರ್ ಸ್ಪೀಕ್ಸ್
ಯಲ್ಲಾಪುರ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಬಹುತೇಕ ಫಿಕ್ಸ್..?
ಯಲ್ಲಾಪುರ ಕ್ಷೇತ್ರದಲ್ಲಿ ಅಕ್ಷರಶಃ ಮಕಾಡೆ ಮಲಗಿದ್ದ ಜೆಡಿಎಸ್ ನ ತೆನೆ ಹೊತ್ತ ಮಹಿಳೆ, ಮತ್ತೆ ಮೈ ಕೊಡವಿ ಎದ್ದು ನಿಲ್ಲುವ ಸೂಚನೆಗಳು ಸಿಕ್ಕಿವೆ. ಆಟಕ್ಕುಂಟು ಲೆಕ್ಕಕ್ಕೇ ಇಲ್ಲದ ಹಾಗಿದ್ದ ಪಕ್ಷಕ್ಕೆ ಹುರುಪಿನಿಂದಲೇ ಯುವ ಪಡೆಯೊಂದು ದಾಂಗುಡಿ ಇಟ್ಟಿದೆ. ಇನ್ನೇನು ಕುಮಾರಣ್ಣನ ಇಶಾರೆಗಾಗಿ ಕಾದು ಕುಳಿತಿರೊ ಅದೊಂದು ಟೀಂ ಯಲ್ಲಾಪುರ ಕ್ಷೇತ್ರದಲ್ಲಿ ಆ್ಯಕ್ಟಿವ್ ಆಗುತ್ತಿದೆ. ಅವ್ರು ಸಂತೋಷ್..! ಅವ್ರ ಹೆಸ್ರು ಸಂತೋಷ ರಾಯ್ಕರ್, ಮಳಗಿ ಗ್ರಾಮದವರು. ನಿಮಗೆ ನೆನಪಿರಬಹುದು, ಅದು 2014 ರ ಲೋಕಸಭಾ ಚುನಾವಣೆ. ಬೆಳಗಾವಿ ಲೋಕಸಭಾ...
ಮುಂಡಗೋಡ ಕಾಂಗ್ರೆಸ್ ಅದಃ ಪತನಕ್ಕೆ ಕಾರಣವಾಗತ್ತಾ ಅದೊಂದು ಮಾತು, ಅದೊಂದು ನಿರ್ಧಾರ..? ಪ್ರಶಾಂತಣ್ಣ ಏನಿದೇಲ್ಲ..?
“ನಾನ್ ಇನ್ವೇಸ್ಟ್ ಮಾಡುವವನು, ನಾನೇನ್ ಹೇಳ್ತಿನೋ ಅದನ್ನ ಕೇಳಕೊಂಡು ಬೆಪ್ಪಗೆ ಇರಬೇಕು ಅಷ್ಟೆ” ಇದು ಕಾಂಗ್ರೆಸ್ ಯುವ ಮುಖಂಡ ಪ್ರಶಾಂತ್ ದೇಶಪಾಂಡೆ ಸಾಹೇಬ್ರ ಪಾಲಿಟಿಕಲ್ ಸ್ಟೈಲ್ ಅಂತೆ. ಹಾಗಂತ, ಮುಂಡಗೋಡಿನ ಕೆಲವು ಕಾಂಗ್ರೆಸ್ ಮುಖಂಡರಿಗೆ ಖಡಕ್ಕಾಗಿ ಹೇಳಿಬಿಟ್ಟಿದ್ರಂತೆ… ಹೀಗಾಗಿನೇ, ಯಲ್ಲಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅನ್ನೋದು ಅಧಃ ಪತನವಾಗ್ತಿದೆ ಅಂತಿದಾರೆ ಖುದ್ದು ಅದೇ ಪಕ್ಷದ ಕಾರ್ಯಕರ್ತರು. ಈ ಮಾತನ್ನ ನಾವಿಲ್ಲಿ ಯಾಕೆ ಹೇಳ್ತಿದಿವಿ ಅಂದ್ರೆ, ಇಡೀ ಯಲ್ಲಾಪುರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಜವಾಬ್ದಾರಿ ಅನಾಯಾಸವಾಗಿ ಬಂದೊದಗಿತ್ತು ಪ್ರಶಾಂತಣ್ಣಂಗೆ, ಇಡೀ...
ಗುಂಜಾವತಿ ಅರಣ್ಯದಲ್ಲಿ ಅಪ್ಪಟ ರೌಡಿಸಂ, ಅರಣ್ಯ ರಕ್ಷಕನ ಮೇಲೆ ಭಂಡರ ಗೂಂಡಾಗಿರಿ.. ಶ್..! ನಿದ್ದೆಯಲ್ಲಿದ್ದಾರೆ ಅಧಿಕಾರಿಗಳು
ಮುಂಡಗೋಡ: ತಾಲೂಕಿನಲ್ಲಿ ಅರಣ್ಯ ಸಂಪತ್ತು ರಕ್ಷಿಸುವ ಅರಣ್ಯ ರಕ್ಷಕರ ಜೀವಗಳಿಗೆ ಬೆಲೆಯೇ ಇಲ್ವಾ..? ಅಥವಾ ತಾಲೂಕಿನ ಅರಣ್ಯ ಇಲಾಖೆಯ ಏಸಿ ರೂಮಲ್ಲಿ ತಣ್ಣಗೆ ಕುಳಿತ ಹಿರಿಯ ಅಧಿಕಾರಿಗಳಿಗೆ “ಬಿಟ್ಟೂ ಬ್ಯಾಸರಕಿ” ಬಂದಿದೆಯಾ..? ಅರ್ಥವೇ ಆಗ್ತಿಲ್ಲ. ತಮ್ಮ ಇಲಾಖೆಯ ಅರಣ್ಯ ರಕ್ಷಕನೊಬ್ಬನ ಮೇಲೆ ಮನಬಂದಂತೆ ಎಗರಾಡಿದವರ ಪರವಾಗಿ “ದೊಡ್ಡ ಗುಣ” ತೋರಿಸಿ ಥೇಟು ಗಾಂಧಿ ತತ್ವದ ನಾಟಕ ಮಾಡ್ತಿದಾರಾ ಮುಂಡಗೋಡಿನ ಅರಣ್ಯ ಅಧಿಕಾರಿಗಳು..? ಯದ್ವಾ ತದ್ವಾ ರೌಡಿಸಂ..! ಅಂದಹಾಗೆ, ನಾವೀಗ ನಿಮಗೆ ಒಂದು ವಿಡಿಯೊ ತುಣುಕು ತೋರಿಸಲು ಹೊರಟಿದ್ದಿವಿ..ಈ...
ವಿ.ಎಸ್.ಪಾಟೀಲ್ “ಹಸ್ತ”ಲಾಘವಕ್ಕೆ ವೇದಿಕೆ ಸಜ್ಜು, ಅಷ್ಟಕ್ಕೂ “ಕೈ”ಮುಂದೆ ಪಾಟೀಲರ ಕಂಡೀಶನ್ಸ್ ಏನು..?
ಯಲ್ಲಾಪುರ ಕ್ಷೇತ್ರದಲ್ಲಿ ಸದ್ಯ ವಿಲಿ ವಿಲ ಒದ್ದಾಡುತ್ತಿರೋ ಕೈ ಪಾಳಯಕ್ಕೆ ಆಕ್ಸಿಜನ್ ಒದಗಿಸಬಲ್ಲ ವಿದ್ಯಮಾನಗಳು ಒಳಗೊಳಗೆ ಜಾರಿಯಲ್ಲಿವೆ. ಬಿಜೆಪಿಯ ಮಾಜಿ ಶಾಸಕ ಹಾಲಿ ವಾಯುವ್ಯ KSRTC ಅಧ್ಯಕ್ಷ ವಿ.ಎಸ್ ಪಾಟೀಲ್ ಕಾಂಗ್ರೆಸ್ ಸೇರೋದು ಬಹುತೇಕ ಫಿಕ್ಸ್ ಆಗಿರೋ ಎಲ್ಲಾ ಲಕ್ಷಣಗಳು ಕಾಣ್ತಿವೆ. ಆದ್ರೆ, ಚಾಣಾಕ್ಷ ವಿ.ಎಸ್. ಪಾಟೀಲ್ ಸುಮ್ಮ ಸುಮ್ಮನೇ ಕಾಂಗ್ರೆಸ್ ಸೇರ್ತಿಲ್ಲ, ಬದಲಾಗಿ ಅದಕ್ಕೊಂದು ಬಲಿಷ್ಟ “ಕಣ” ಕಾರ್ಯತಂತ್ರ ರೂಪಿಸಿಕೊಂಡೇ ಕೈ ಪಡೆಗೆ ಎಂಟ್ರಿ ಕೊಡುವ ಎಲ್ಲಾ ಸಾಧ್ಯತೆಗಳೂ ದಟ್ಟವಾಗಿದೆ. ಪ್ರಶಾಂತ್ ಯಡವಟ್ಟು..? ನಿಜ, ಸದ್ಯ...
ಮಳಗಿ ಡ್ಯಾಂನಲ್ಲಿ ಕೊಲೆಯಾದ್ನಾ ಭಟ್ಕಳದ ವಿನಾಯಕ..? ಆ ಸಾವಿನ ಸುತ್ತ ಕುಟುಂಬಸ್ಥರ ಅನುಮಾನಗಳೇನು..?
ಮುಂಡಗೋಡ: ಮಳಗಿ ಧರ್ಮಾ ಜಲಾಶಯದ ಒಡಲಿನಲ್ಲಿ ಕ್ರೌರ್ಯಗಳೂ ನಡಿತಿವೆಯಾ..? ನಿಜಕ್ಕೂ ಆ ಒಂದು ಸಾವು, ಸಾವಿನಾಚೆಗಿನ ಬಿಡಿಸಲಾಗದ ಸತ್ಯಗಳು ಎಂತವರನ್ನೂ ಒಂದುಕ್ಷಣ ತಲ್ಲಣಗೊಳಿಸ್ತಿವೆ. ಭಟ್ಕಳದಿಂದ ಶಿರಸಿ ಮಾರಿ ಜಾತ್ರೆಗೆ ಬಂದಿದ್ದ ಯುವಕ ನೀರುಪಾಲಾಗಿದ್ದರ ಹಿಂದೆ, ಬರೀ ಅನುಮಾನಗಳೇ ಹಾಸು ಹೊಕ್ಕಾಗಿವೆ. ಮಗನನ್ನ ಕಳೆದುಕೊಂಡ ಕುಟುಂಬವೀಗ ಅಕ್ಷರಶಃ ಅನಾಥವಾಗಿದೆ. ಅವತ್ತು ಮಾ.22 ಭಟ್ಕಳದ ಶಿರಾಲಿ ಮೂಲದ ವಿನಾಯಕ ಜನ್ನು ಎನ್ನುವ ಯುವಕ ಮಾರ್ಚ್ 22ರಂದು ಇದೇ ಮಳಗಿಯ ಧರ್ಮಾ ಜಲಾಶಯದಲ್ಲಿ ಹೆಣವಾಗಿ ಸಿಕ್ಕಿದ್ದ. ತನ್ನ ಗೆಳೆಯರೊಂದಿಗೆ ಶಿರಸಿ ಜಾತ್ರೆಗೆ...
ಮುಂಡಗೋಡ ತಹಶೀಲ್ದಾರ್ ವಿರುದ್ಧ ದಲಿತರ ಅನಿರ್ಧಿಷ್ಟ ಧರಣಿ, ಸಾಹೇಬ್ರೇ ಇನ್ನೂ ಎಷ್ಟು ದಿನ..?
ನಿಜ, ಮುಂಡಗೋಡಿನ ಇತಿಹಾಸದಲ್ಲೇ ಇದು ಬಹುದೊಡ್ಡ ನಾಚಿಗ್ಗೇಡಿನ ಸಂಗತಿ ಅಂದ್ರೂ ತಪ್ಪಿಲ್ಲ ಅನಿಸತ್ತೆ. ತಾಲೂಕಿನ ದಂಡಾಧಿಕಾರಿಯೊಬ್ಬರ ವಿರುದ್ಧ ಈ ಪರಿಯ ಹೋರಾಟ ಬಹುಶಃ ಹಿಂದೆ ಎಂದೂ ನಡೆದಿರಲಿಲ್ಲವೆನೋ..? ಇಷ್ಟಾದ್ರೂ ಆ ಅಧಿಕಾರಿಯನ್ನ ಬಚಾವ್ ಮಾಡುವಲ್ಲಿ ತೆರೆಮರೆಯ ಕಸರತ್ತು ನಡೆಸ್ತಿರೋ “ದೊಡ್ಡ”ವರಿಗೆ ಏನೂ ಅನಿಸ್ತಾನೇ ಇಲ್ವಾ..? ಅದೂ ಹೋಗಲಿ, ತಮ್ಮ ಮೇಲೆ ಅಂತಹದ್ದೊಂದು ಭಯಂಕರ ಆರೋಪ ಬಂದು, ಪೊಲೀಸ್ ಠಾಣೆಯ ಮೆಟ್ಟಿಲೇರಿ ಜಗಜ್ಜಾಹೀರಾದಾಗಲೂ ಆ ಅಧಿಕಾರಿಗೆ ಮುಂಡಗೋಡಿಗರ ತಾಳ್ಮೆ ಅರ್ಥ ಆಗ್ತಿಲ್ವಾ..? ಇದು ಬಹುತೇಕ ಮುಂಡಗೋಡಿನ ಪ್ರಜ್ಞಾವಂತರ ಪ್ರಶ್ನೆ..!...
ಯಲ್ಲಾಪುರ ಕ್ಷೇತ್ರದ ಕೇಸರಿ ಪಡೆಯಲ್ಲಿ ಇದೇನಿದು “ಆಲೆಮನೆ” ಮೀಟಿಂಗು..? ಅಷ್ಟಕ್ಕೂ, ಬಂಡೇದ್ದ ಬಳಗದ ಲೀಡರ್ ಯಾರು..?
ಯಲ್ಲಾಪುರ ಬಿಜೆಪಿಗೆ ಅದೇನಾಗಿದೆಯೋ ಗೊತ್ತಿಲ್ಲ. ಪಂಚರಾಜ್ಯಗಳ ಚುನಾವಣೆಲಿ ಅಭೂತಪೂರ್ವ ಯಶಸ್ಸು ಪಡೆದ ಸಂಭ್ರಮದ ಮದ್ಯೆಯೂ, ಒಳಗೊಳಗೇ ಯಾರೂ ನಿರೀಕ್ಷಿಸದ ಲೋಕಲ್ ಬೆಳವಣಿಗೆಗಳು ನಡೆಯುತ್ತಿವೆ. ಸದ್ಯದ ಪರಿಸ್ಥಿತಿಗಳು ಹಾಗೂ ಒಳಗೊಳಗಿನ ಚಟುವಟಿಕೆಗಳು ಬಲಿಷ್ಟವಾಗುತ್ತ ಹೋದರೆ ಇನ್ನೇನು ಚುನಾವಣೆ ಹೊತ್ತಿಗೇಲ್ಲ ಭರ್ಜರಿ ಬದಲಾವಣೆಗಳು ಆಗಲಿವೆ ಅನ್ನೋದು ಅದೇ ಪಕ್ಷದ ದೊಡ್ಡ ಮಂದಿಯೇ ಹೇಳುತ್ತಿರೋ ಬಹುದೊಡ್ಡ ಮಾತುಗಳು. ಆ ಆರು ತಿಂಗಳು..! ನಿಜ ಕಳೆದ ಆರು ತಿಂಗಳಿಂದ ಯಲ್ಲಾಪುರ, ಮುಂಡಗೋಡ ಬಿಜೆಪಿಯಲ್ಲಿ ಅದೊಂದು ಬಣ ಇನ್ನಿಲ್ಲದಂತೆ ಆ್ಯಕ್ಟಿವ್ ಆಗಿದೆಯಂತೆ. ಮೇಲಿಂದ ಮೇಲೆ...
ನೀರಿಗೆ ಜಿಗಿಯೋಕೂ ಮುನ್ನ ವಿಷ ಕುಡಿದಿತ್ತಾ ಜೋಡಿ..? ಅಷ್ಟಕ್ಕೂ ಬಾಚಣಕಿ ಡ್ಯಾಂ ಅಂಗಳದಲ್ಲಿ ನಡೆದದ್ದಾದ್ರೂ ಏನು..?
ಮುಂಡಗೋಡ: ಏನಾಗ್ತಿದೆ ನಮ್ಮ ಮುಂಡಗೋಡ ತಾಲೂಕಿನ ಯುವಕ ಯುವತಿಯರಿಗೆ..? ನಿಜಕ್ಕೂ ಮಮ್ಮಲ ಮರಗುತ್ತಿದೆ ಇಡೀ ತಾಲೂಕು. ಯಾಕಂದ್ರೆ ಇನ್ನೂ ಮೀಸೆ ಚಿಗುರದ, ವಯಸ್ಸಲ್ಲದ ವಯಸ್ಸಲ್ಲಿ ಪ್ರೀತಿ ಪ್ರೇಮ ಅಂತೇಲ್ಲ ಇಡೀ ಬದುಕನ್ನೇ ಹಾಳು ಮಾಡಿಕೊಳ್ತಿದಾರಾ ಯುವ ಪಡೆ..? ಹಾಗಂತ ಆತಂಕಗೊಂಡಿದ್ದಾರೆ ತಂದೆ ತಾಯಂದಿರು. ಪ್ರೀತಿಗೆ ಬಲಿ..? ಯಸ್, ಮುಂಡಗೋಡ ತಾಲೂಕಿನಲ್ಲಿ ಇತ್ತೀಚೆಗೆ ಪ್ರೇಮ ಪ್ರಕರಣಗಳಲ್ಲಿ ನಾಪತ್ತೆಯಾದ ಯುವಕ ಯುವತಿಯರ ಸಂಖ್ಯೆ ಇನ್ನಿಲ್ಲದ ಹಾಗೆ ಏರಿಕೆಯಾಗಿದೆ. ಅದ್ರೊಟ್ಟಿಗೆ, ಇವತ್ತಿನ ಈ ಪ್ರಕರಣ ಬಹುಶಃ ಇಡೀ ತಾಲೂಕಿನ ಮಂದಿಗೆ ಬೆಚ್ಚಿ...
ಮುಂಡಗೋಡಿನಲ್ಲಿ ಮತ್ತೆ ಮಟ್ಕಾ ಶುರು..? ಬರಗೆಟ್ಟವನ ಮಂತ್ಲಿ ಆಸೆಗೆ ದಕ್ಕಿದ್ದು ಎಷ್ಟು ಲಕ್ಷ..?
ಮುಂಡಗೋಡ ತಾಲೂಕಿನ ಮಟ್ಕಾ ಪ್ರಿಯರಿಗೆ ಸಂತಸದ ಸುದ್ದಿಯಿದು. ಇನ್ನೇನು ಇವತ್ತಿನಿಂದ ಅಂದ್ರೆ ಸೋಮವಾರದಿಂದ ಮುಂಡಗೋಡ ತಾಲೂಕಿನಲ್ಲಿ ಮಟ್ಕಾ ಭರ್ಜರಿ ಶುಭಾರಂಭ ಮಾಡ್ತಿದೆಯಂತೆ. ಅಷ್ಟಕ್ಕೂ ಮಟ್ಕಾ ದಂಧೆಯ ಮಂತ್ಲಿ ಹಣದ ಕೈ ಬಿಸಿ ಇಲ್ಲದೇ ಈ ಛಳಿಗಾಲ ಸಾಗೋಕೆ ಸಾಧ್ಯವೇ ಇಲ್ಲ ಅಂತಾ ಅವನೊಬ್ಬ ಚಕ್ಕಂಬಕ್ಕಳ ಹಾಕ್ಕೊಂಡು ಡೀಲಿಗೆ ಕುಳಿತಿದ್ದನಂತೆ. ಅವನ ಪರಿಶ್ರಮದ ಫಲವಾಗೇ ಈಗ ಮತ್ತೆ ಮಟ್ಕಾ ಅನ್ನೋದು ಮನೆ ಮಾತಾಗುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿದೆಯಂತೆ. ಹೀಗೆ ಇತ್ಯಾದಿ ಇತ್ಯಾದಿಯಾಗಿ ಇಡೀ ಮುಂಡಗೋಡ ತಾಲೂಕಿನಲ್ಲಿ ಗುಲ್ಲೆದ್ದಿದೆ. ಗುಲ್ಲು...