ಮುಂಡಗೋಡ ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯಾಧಿಕಾರಿ, ಖಾಸಗಿ ಫೈನಾನ್ಸ್ ಶಾಖೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಘಟನೆಗೆ ಸಂಬಂಧಿಸಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಕ್ರಮ ಕೈಗೊಂಡಿದ್ದಾರೆ. ಈ ಕುರಿತು ಪಬ್ಲಿಕ್ ಫಸ್ಟ್ ನ್ಯೂಸ್ ಗೆ ಮುಂಡಗೋಡ ಬಿಇಓ ಸುಮಾ ಜಿ. ಯವರು ಮಾಹಿತಿ ನೀಡಿದ್ದಾರೆ.
ಮಂಗಳವಾರ ಪಬ್ಲಿಕ್ ಫಸ್ಟ್ ನ್ಯೂಸ್ ನಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತುಕೊಂಡು ಇಲಾಖೆಯ ಅಧಿಕಾರಿಗಳು, ಪ್ರಭಾರ ಕ್ಷೇತ್ರ ಸಮನ್ವಯಾಧಿಕಾರಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದಾರೆ. ಮೂರು ದಿನಗಳ ಒಳಗಾಗಿ ಸೂಕ್ತ ಕಾರಣ ನೀಡಿ ಉತ್ತರಿಸುವಂತೆ ನೋಟೀಸ್ ಜಾರಿ ಮಾಡಿದ್ದಾರೆ.
ಅಂದಹಾಗೆ, ಸರ್ಕಾರಿ ಸೇವೆಯಲ್ಲಿರೋ ಅಧಿಕಾರಿಗಳು ತಮ್ಮ ಕರ್ತವ್ಯದ ಸಂರ್ಭದಲ್ಲಿ ಯಾವುದೇ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುಂತಿಲ್ಲ, ಹಾಗೊಂದು ವೇಳೆ ಭಾಗವಹಿಸುವ ಅನಿವಾರ್ಯತೆ ಇದ್ರೆ ರಜೆ ಪಡೆದು ಭಾಗವಹಿಸಬಹುದು ಅಂತಾ ಬಿಇಓ ಸುಮಾ ಜಿ. ಮೇಡಂ ತಿಳಿಸಿದ್ದಾರೆ.