ಮಾರ್ಚ 26 ರಿಂದ ಎರಡು ದಿನ ಜಿಲ್ಲೆಯಲ್ಲಿ ಗೃಹ ಸಚಿವರ ಪ್ರವಾಸ..! ಏನೇನು ಕಾರ್ಯಕ್ರಮ..?

ಕಾರವಾರ: ರಾಜ್ಯದ ಗೃಹ ಸಚಿವ ಡಾ: ಜಿ. ಪರಮೇಶ್ವರ ಅವರು ಮಾರ್ಚ್ 26 ಮತ್ತು 27 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದು, ಪ್ರವಾಸದ ವಿವರಗಳು ಇಂತಿವೆ..

ಕಾರವಾರದಲ್ಲಿ..
ಮಾರ್ಚ್ 26 ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ, ಎಸ್.ಪಿ. ಕಚೇರಿಯಲ್ಲಿ ವಿಧಾನಸಭಾ/ವಿಧಾನ ಪರಿಷತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಖರೀದಿಸಿ ಪೊಲೀಸ್ ಇಲಾಖೆಗೆ ನೀಡಿರುವ ಹೊಸ ವಾಹನಗಳಿಗೆ ಚಾಲನೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಶಿರಸಿ ಪಟ್ಟಣದ ಟ್ರಾಫಿಕ್ ಪೊಲೀಸ್ ಠಾಣೆಯ ವಿದ್ಯುಕ್ತ ಚಾಲನೆ (Through WEBCAST), ಮಾದಕ ವಸ್ತು ಮತ್ತು ಸೈಬರ್ ಅಪರಾಧಗಳ ಬಗ್ಗೆ ಸಾರ್ವಜನಿಕರು ಜಾಗೃತರಾಗಿರಲು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಘಟಕದಿಂದ ಚಿತ್ರಿಸಲಾಗಿರುವ ವಿಡಿಯೋಗಳ ಬಿಡುಗಡೆ, ರೂ.1,15,00,000/- ವೆಚ್ಚದಲ್ಲಿ ನವೀಕರಿಸಲಾದ ಜಿಲ್ಲಾ ಪೊಲೀಸ್ ಕಛೇರಿಯ ವಿವಿಧ ವಿಭಾಗಗಳ ಉದ್ಘಾಟನೆ ನೆರವೇರಲಿದೆ. 1 ಗಂಟೆಯಿoದ 2 ಗಂಟೆಯವರೆಗೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸುವರು. ನಂತರ ವಾಸ್ತವ್ಯ ಮಾಡುವರು.

ಮಾರ್ಚ್ 27 ರಂದು ಸಂಜೆ 5.30 ಕ್ಕೆ ಕಾರವಾರದಿಂದ ಬೆಂಗಳೂರಿಗೆ ತೆರಳುವರು.