ಮುಂಡಗೋಡ: ಏನಾಗ್ತಿದೆ ನಮ್ಮ ಮುಂಡಗೋಡ ತಾಲೂಕಿನ ಯುವಕ ಯುವತಿಯರಿಗೆ..? ನಿಜಕ್ಕೂ ಮಮ್ಮಲ‌ ಮರಗುತ್ತಿದೆ ಇಡೀ ತಾಲೂಕು. ಯಾಕಂದ್ರೆ ಇನ್ನೂ‌ ಮೀಸೆ ಚಿಗುರದ, ವಯಸ್ಸಲ್ಲದ ವಯಸ್ಸಲ್ಲಿ ಪ್ರೀತಿ ಪ್ರೇಮ ಅಂತೇಲ್ಲ ಇಡೀ ಬದುಕನ್ನೇ ಹಾಳು ಮಾಡಿಕೊಳ್ತಿದಾರಾ ಯುವ ಪಡೆ..? ಹಾಗಂತ ಆತಂಕಗೊಂಡಿದ್ದಾರೆ ತಂದೆ ತಾಯಂದಿರು.

ಪ್ರೀತಿಗೆ ಬಲಿ..?
ಯಸ್, ಮುಂಡಗೋಡ ತಾಲೂಕಿನಲ್ಲಿ ಇತ್ತೀಚೆಗೆ ಪ್ರೇಮ ಪ್ರಕರಣಗಳಲ್ಲಿ ನಾಪತ್ತೆಯಾದ ಯುವಕ ಯುವತಿಯರ ಸಂಖ್ಯೆ ಇನ್ನಿಲ್ಲದ ಹಾಗೆ ಏರಿಕೆಯಾಗಿದೆ‌. ಅದ್ರೊಟ್ಟಿಗೆ, ಇವತ್ತಿನ ಈ ಪ್ರಕರಣ ಬಹುಶಃ ಇಡೀ ತಾಲೂಕಿನ ಮಂದಿಗೆ ಬೆಚ್ಚಿ ಬೀಳುವಂತೆ ಮಾಡಿದೆ. ಅಷ್ಟಕ್ಕೂ ಬಾಚಣಕಿ ಜಲಾಶಯದ ಅಂಗಳದಲ್ಲಿ ಮಟ ಮಟ ಮದ್ಯಾಹ್ನ ಹಾಗೆ ಶವವಾಗಿ ಸಿಕ್ಕವಳ ಜೊತೆ ಪ್ರೇಮ್ ಕಹಾನಿಯಿತ್ತಾ..? ಅಷ್ಟಕ್ಕೂ ಜೊತೆಗೇ ಆ ಹುಡುಗನೂ ಬಲಿಯಾಗಿದ್ದಾನಾ..? ಇದೇಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ಬಹುಶಃ ಹುಡುಗನ ಶವ ಪತ್ತೆಯಾದ ಮೇಲೆಯೇ ಉತ್ತರ ಸಿಗಬಹುದೆನೋ..? ಹಾಗಾದ್ರೆ ಪ್ರೀತಿಗೆ ಬಲಿಯಾಯ್ತಾ ಜೋಡಿ..?

ಅವ್ರದ್ದು ಮೂರು ವರ್ಷದ ಪ್ರೀತಿಯಂತೆ..?
ಅಂದಹಾಗೆ, ಇವತ್ತು ಬಾಚಣಕಿ ಜಲಾಶಯದ ನೀರಿನಲ್ಲಿ ಉಸಿರು ಚೆಲ್ಲಿರೊ ಆ ಹುಡುಗಿಯ ಕಣ್ಣಲ್ಲಿ ಅದೇಷ್ಟು ಕನಸುಗಳಿದ್ದವೋ ಗೊತ್ತಿಲ್ಲ. ಅದ್ಯಾವ ಕಡೆಯಿಂದ ಎಣಿಸಿದ್ರೂ ಆಕೆಗಿನ್ನೂ 19 ರ ಪ್ರಾಯ. ಹೆಸ್ರು ತನುಜಾ. ಈಗಷ್ಟೇ ಮುಂಡಗೋಡಿನ ಪದವಿ ಪೂರ್ವ ಕಾಲೇಜಿನಲ್ಲಿ ಪಿಯೂಸಿ ಎರಡನೇ ವರ್ಷದ ಕಾಮರ್ಸ್ ಸ್ಟುಡೆಂಟ್. ಅಂತವಳು, ಇವತ್ತು ಏಕಾಏಕಿ ಬಾಚಣಕಿ ಡ್ಯಾಂ ನ ಅಂಗಳದಲ್ಲಿ ಹೆಣವಾಗಿ ಬಿದ್ದಿದ್ದಾಳೆ ಅಂದ್ರೆ ಏನರ್ಥ..?

ಅಂದಹಾಗೆ, ಇದೇ ತನುಜಾ ನಿನ್ನೆ ರಾತ್ರಿ ಅಂದ್ರೆ ರವಿವಾರ 11.49 ಕ್ಕೆ ತನ್ನ‌ ವಾಟ್ಸಪ್ ಸ್ಟೇಟಸ್ ನಲ್ಲಿ ತೀರ ಅನ್ನುವಷ್ಟರ ಮಟ್ಟಿಗೆ ಸೂಚ್ಯವಾಗಿ ನೋವು ತೋಡಿಕೊಂಡಿದ್ದಳು. “ಈ ಪ್ರಪಂಚದಲ್ಲಿ ಯಾರೂ ಶಾಶ್ವತ ಅಲ್ಲಾ.. ನಾನೂ ಕೂಡ” ಅಂತಾ ಅಕ್ಷರಶಃ ಜಿಗುಪ್ಸೆಯ ಭಾವ ತೋಡಿಕೊಂಡಿದ್ದಳು. ಹಾಗಿದ್ರೆ, ಸಾವಿನ ಸನಿಹಕ್ಕೆ ನಿನ್ನೆಯೇ ಬಂದಾಗಿತ್ತಾ ಆ ಹುಡುಗಿ..? ಅಷ್ಟಕ್ಕೂ ಯಾಕೆ ಇಂತಹ ತೀರ್ಮಾನ..?

ಆತ ಹನುಮಾಪುರದ ಹುಡುಗ..!
ಅಂದಹಾಗೆ, ಇವತ್ತು ಬಾಚಣಕಿ ಡ್ಯಾಂ ನ ನೀರಲ್ಲಿ ಮುಳುಗಿ ನಾಪತ್ತೆಯಾಗಿದ್ದಾನೆ ಅಂತಾ ಹೇಳಲಾಗ್ತಿರೋ ಹುಡುಗನ ಹೆಸರು ಮಹೇಶ್, ಹನುಮಾಪುರ ಗ್ರಾಮದ ಹುಡುಗ. ಮುಂಡಗೋಡ ಡಿಗ್ರಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಎ ವ್ಯಾಸಂಗ ಮಾಡ್ತಿದ್ದ. ಇವತ್ತು ಬೆಳಿಗ್ಗೆ 11 ಗಂಟೆಯಷ್ಟೊತ್ತಿಗೆ ಬಾಚಣಕಿ ಜಲಾಶಯದ ಅಂಗಳಕ್ಕೆ ಆ ಹುಡುಗಿಯ ಜೊತೆ ಮುಂಡಗೋಡಿನಿಂದ ಬಸ್ ಗೆ ಬಂದಿಳಿದಿದ್ದ ಅಂತಾ ಹೇಳಲಾಗ್ತಿದೆ. ಬೆಳಿಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆವರೆಗೂ ಇವ್ರಿಬ್ರು ಡ್ಯಾಂ ನ ಅಂಗಳದಲ್ಲೇ ಇದ್ರು ಅಂತಾ ನೋಡಿದವರು ಹೇಳ್ತಿದಾರೆ. ಆ ನಂತರದಲ್ಲಿ ಅದೇನಾಯ್ತೊ ಗೊತ್ತಿಲ್ಲ‌. ಕೆಲವೇ ಹೊತ್ತಲ್ಲಿ ಆ ಹುಡುಗಿಯ ಶವ ಸಿಕ್ಕಿದೆ. ಅದ್ರ ಜೊತೆ ಡ್ಯಾಂ ನ ದಂಡೆಯ ಮೇಲೆ ಹುಡುಗನ ಪಾದರಕ್ಷೆಗಳೂ ಸಿಕ್ಕಿವೆ. ಆದ್ರೆ ಹುಡುಗನ ಶವ ಸಿಕ್ಕಿಲ್ಲ. ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ಹಾಗಿದ್ರೆ ಏನಾಯ್ತು ಅಲ್ಲಿ..? ಇದೇ ಈಗ ಎಲ್ಲರಿಗೂ ಕಾಡುತ್ತಿರೋ ಮಿಲಿಯನ್ ಡಾಲರ್ ಪ್ರಶ್ನೆ..!

ನಾಪತ್ತೆಯಾಗಿದ್ದಾನೆ ಅಂತಾ ಹೇಳಲಾಗ್ತಿರೊ ಮಹೇಶ್

ಪ್ರೀತಿಗೆ ವಿರೋಧವಾಯ್ತಾ ಮನೇಲಿ..? ಪಬ್ಲಿಕ್ ಫಸ್ಟ್ ನ್ಯೂಸ್ ಗೆ ಬಂದಿರೋ ಮಾಹಿತಿ ಪ್ರಕಾರ, ಹೌದಂತೆ. ನಿಜ ಅಂದ್ರೆ, ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿಗೆ ಕಳೆದ ಒಂದು ವಾರದ ಹಿಂದೆಯಷ್ಟೇ ಮನೆಯಲ್ಲಿ ಒಂದಿಷ್ಟು ಬುದ್ದಿ ಮಾತು ಹೇಳಿದ್ರು ಎನ್ನಲಾಗ್ತಿದೆ. ಹಾಗಿದ್ರೆ, ಇಷ್ಟಕ್ಕೇ ಈ ಪ್ರೇಮಿಗಳು ಸಾಯುವ ತೀರ್ಮಾನಕ್ಕೆ ಬಂದ್ರಾ..? ಇದೇಲ್ಲ ಪೊಲೀಸರ
ತನಿಖೆಯ ನಂತರವಷ್ಟೇ ಬರಬೇಕಿದೆ‌. ಅದೇಲ್ಲದಕ್ಕಿಂತ ಮುಂಚೆ, ಯುವಕನ ಶವ ಪತ್ತೆಯಾಗಬೇಕಿದೆ.

ವಿಷ ಸೇವಿಸಿದ್ರಾ..?
ಈ ಮದ್ಯೆ ಇಲ್ಲಿ ಇನ್ನೊಂದು ಆತಂಕಕಾರಿ ವಿಷಯ ಬಯಲಾಗಿದೆ. ಶವ ಶೋಧ ಕಾರ್ಯದಲ್ಲಿ ತೊಡಗಿದ್ದ ವೇಳೆ ಅಲ್ಲೊಂದು ಅರ್ದ ಕುಡಿದು ಎಸೆದಿದ್ದ ವಿಷದ ಬಾಟಲ್ ಪತ್ತೆಯಾಗಿದೆ. ಹಾಗಾದ್ರೆ ನೀರಿಗೆ ಧುಮುಕೋ ಮುನ್ನ ವಿಷ ಸೇವಿಸಿದ್ರಾ ಪ್ರೇಮಿಗಳು..? ಗೊತ್ತಿಲ್ಲ. ತನಿಖೆ ನಂತರವಷ್ಟೇ ತಿಳಿಯಲಿದೆ.

ಏನಿದು ಹುಚ್ಚತನ..?
ನಿಜಕ್ಕೂ, ತಾಲೂಕಿನಲ್ಲಿ ತಮ್ಮ ಮಕ್ಕಳನ್ನು ಕಾಲೇಜಿಗೆ ಕಳಿಸೋ ಬಹುತೇಕ ತಂದೆ ತಾಯಂದಿರು ಆತಂಕದಲ್ಲಿದ್ದಾರೆ. ಯಾಕಂದ್ರೆ, ತಾಲೂಕಿನಲ್ಲಿ ಕೊರೋನಾ ಲಾಕ್ ಡೌನ್ ನಂತರದಲ್ಲಿ ಹುಡುಗಿಯರ ನಾಪತ್ತೆ ಪ್ರಕರಣಗಳು ಜಾಸ್ತಿಯಾಗಿದೆ. ಈ ಕುರಿತು ಪೊಲೀಸರು ಸಾಕಷ್ಟು ಜಾಗ್ರತಿ ಮೂಡಿಸಿದ್ದಾರೆ. ಕೊರೋನಾ ಸಂಕಷ್ಟದ ಮದ್ಯೆ ಶಿಕ್ಷಣವೇಲ್ಲ ಆನ್ ಲೈನ್ ಗೆ ಜೋತು ಬಿದ್ದು, ಮಕ್ಕಳ ಕೈಯಲ್ಲಿ ಮೊಬೈಲ್ ಕೊಟ್ಟ ನಂತರ ಈ ರೀತಿಯ ಪ್ರೇಮ ಪ್ರಕರಣಗಳು ಜಾಸ್ತಿಯಾಯ್ತಾ..? ಗೊತ್ತಿಲ್ಲ.

ಆದ್ರೆ ಪೋಷಕರೂ ಮಕ್ಕಳ ಬಗ್ಗೆ ಒಂದಿಷ್ಟು ಜಾಗ್ರತಿ ವಹಿಸಬೇಕಿದೆ. ಅಲ್ವಾ..?

error: Content is protected !!