ಮುಂಡಗೋಡ: ತಾಲೂಕಿನಲ್ಲಿ ಅರಣ್ಯ ಸಂಪತ್ತು ರಕ್ಷಿಸುವ ಅರಣ್ಯ ರಕ್ಷಕರ ಜೀವಗಳಿಗೆ ಬೆಲೆಯೇ ಇಲ್ವಾ..? ಅಥವಾ ತಾಲೂಕಿನ ಅರಣ್ಯ ಇಲಾಖೆಯ ಏಸಿ ರೂಮಲ್ಲಿ ತಣ್ಣಗೆ ಕುಳಿತ ಹಿರಿಯ ಅಧಿಕಾರಿಗಳಿಗೆ “ಬಿಟ್ಟೂ ಬ್ಯಾಸರಕಿ” ಬಂದಿದೆಯಾ..? ಅರ್ಥವೇ ಆಗ್ತಿಲ್ಲ. ತಮ್ಮ ಇಲಾಖೆಯ ಅರಣ್ಯ ರಕ್ಷಕನೊಬ್ಬನ ಮೇಲೆ ಮನಬಂದಂತೆ ಎಗರಾಡಿದವರ ಪರವಾಗಿ “ದೊಡ್ಡ ಗುಣ” ತೋರಿಸಿ ಥೇಟು ಗಾಂಧಿ ತತ್ವದ ನಾಟಕ ಮಾಡ್ತಿದಾರಾ ಮುಂಡಗೋಡಿನ ಅರಣ್ಯ ಅಧಿಕಾರಿಗಳು..?
ಯದ್ವಾ ತದ್ವಾ ರೌಡಿಸಂ..!
ಅಂದಹಾಗೆ, ನಾವೀಗ ನಿಮಗೆ ಒಂದು ವಿಡಿಯೊ ತುಣುಕು ತೋರಿಸಲು ಹೊರಟಿದ್ದಿವಿ..ಈ ವಿಡಿಯೊ ನೋಡಿದ್ರೆ ಮುಂಡಗೋಡ ತಾಲೂಕಿನಲ್ಲಿ ಹೀಗೂ ಆಗ್ತಿದೆಯಾ ಅನ್ನೋ ಕೆಟ್ಟ ಬೇಸರ ಆಗತ್ತೆ. ತಾಲೂಕಿನಲ್ಲಿ ಹೇರಳವಾಗಿರೋ ಅರಣ್ಯ ಸಂಪತ್ತಿನ ರಕ್ಷಣೆಗೆ ನಿಂತಿರೋ ಪ್ರಾಮಾಣಿಕ ಸಿಬ್ಬಂದಿಗಳಿಗೆ ರಕ್ಷಣೆ ಇಲ್ವಾ..? ಅನ್ನೋ ನೋವು ಕಾಡತ್ತೆ.
ಅದು ಗುಂಜಾವತಿ..!
ಮುಂಡಗೋಡ ತಾಲೂಕಿನ ಗುಂಜಾವತಿ ಅರಣ್ಯ ಭಾಗದಲ್ಲಿ ಕೆಲವು ಅರಣ್ಯಗಳ್ಳರ ಅಂಧಾ ದರ್ಬಾರ್ ನಡೀತಿದೆ. ಕೆಲವು ರಾಜಕೀಯ ವ್ಯಕ್ತಿಗಳ ಬೆಂಗಾವಲಿನಲ್ಲಿ ಇನ್ನಿಲ್ಲದ ಅಕ್ರಮಗಳು ನಡೀತಿವೆ ಅನ್ನೋ ಆರೋಪ ಇದೆ. ಆದ್ರೆ ಅದೇಂತದ್ದೇ ಘಟನೆಗಳಾದ್ರೂ ಅದೇಲ್ಲ ರಾಜಕೀಯ ಬಲಗಳ ನಡುವೆ ಮಣ್ಣಾಗಿ ಬಿಡ್ತಿವೆ. ಅಂತಹ ಘಟನೆಗಳಲ್ಲಿ ಈಗ ಮತ್ತೊಂದು ಸೇರಿಯಾಗಿದೆ. ಇದು ಇವತ್ತು, ನಿನ್ನೆ, ಮೊನ್ನೆ ನಡೆದಿರೋ ಘಟನೆಯಲ್ಲ. ಬರೋಬ್ಬರಿ ಒಂದು ತಿಂಗಳ ಹಿಂದೆ ನಡೆದಿರೋ ಘಟನೆ. ಇದೇ ರಾಜಕೀಯದವರ ಬೆರಳ ತುದಿಯ ಆಟಗಳಲ್ಲಿ ತಮ್ಮನ್ನೇ ತಾವು ಅಡ ಇಟ್ಟಿರೋ “ರಾಜೀ” ಮನಸ್ಥಿತಿಯ ಅಧಿಕಾರಿಗಳ ಬೇಜಾವಾಬ್ದಾರಿಗೆ ಹಿಡಿದ ಕೈಗನ್ನಡಿ. ನಿಜ, ತಮ್ಮಡಿಯಲ್ಲಿ ಕೆಲಸ ನಿರ್ವಹಿಸುವ ಬಡ ನೌಕರರನ್ನೇ ಬಲಿ ಕೊಡುವ ಹೀನ ಮನಸ್ತಿತಿಯ ಅಧಿಕಾರಿಗಳ ಬೇಜವಾಬ್ದಾರಿಗೆ ಯಾವ ಪುರಸ್ಕಾರ ನೀಡಬೇಕೋ ಅರ್ಥವೇ ಆಗ್ತಿಲ್ಲ..
ಅಷ್ಟಕ್ಕೂ ಏನದು ಘಟನೆ..?
ಇದು ಒಂದು ತಿಂಗಳ ಹಿಂದಿನ ಕತೆ, ಗುಂಜಾವತಿ ಅರಣ್ಯ ವ್ಯಾಪ್ತಿಯಲ್ಲಿ ಅದ್ಯಾರೋ ವ್ಯಕ್ತಿಗಳು ಅವ್ರ ಇಷ್ಟದಂತೆ ಅದೇನೋ ದೇವರ ಹೆಸರಲ್ಲಿ ಗದ್ದುಗೆ ನಿರ್ಮಾಣ ಮಾಡಲು ಅಣಿಯಾಗಿದ್ರು. ಅಷ್ಟಕ್ಕೂ ಆ ವ್ಯಕ್ತಿಗಳು, ತಮ್ಮಮನೆಯ ಮುಂದೆಯೋ ಅಥವಾ ಗ್ರಾಮದಲ್ಲೋ ಹಾಗೆ ದೇವರ ಗದ್ದುಗೆ ನಿರ್ಮಿಸಲು ಹೋಗಿದ್ದರೆ ಅದರ ಬಗ್ಗೆ ಯಾರೂ ಏನೂ ಅಂತಿರಲಿಲ್ಲವೆನೋ. ಆದ್ರೆ ಅವ್ರು ಅರಣ್ಯದ ಜಾಗದಲ್ಲಿ ಅಂತಹದ್ದೊಂದು ಗದ್ದುಗೆ ನಿರ್ಮಿಸಲು ಮುಂದಾಗಿದ್ರಂತೆ. ಹೀಗಾಗಿ, ಆ ಹೊತ್ತಲ್ಲಿ ಅರಣ್ಯ ರಕ್ಷಣೆಯ ಕಾರ್ಯದಲ್ಲಿದ್ದ ಮಾಜಿ ಸೈನಿಕ, ಹಾಲಿ ಅರಣ್ಯ ರಕ್ಷಕ ನಾರಾಯಣ್ ಸಿಂಗ್ ಅಲ್ಲಿ ಹಾಜರಾಗಿದ್ದಾರೆ. ಅರಣ್ಯ ಇಲಾಖೆಯ ಜಾಗದಲ್ಲಿ ಏನು ಮಾಡ್ತಿದಿರಾ ಅಂತಾ ಪ್ರಶ್ನಿಸಿದ್ದಾರೆ ಅಷ್ಟೇ. ಆ ಅರಣ್ಯ ರಕ್ಷಕ ಮಾಜಿ ಸೈನಿಕ ನಾರಾಯಣ ಸಿಂಗ್ ಮೇಲೆ ಎಗರಿ ಬಿದ್ದಿದ್ದಾರೆ ಆ ಜನ.
ಅವ್ರು ಇದ್ದಿದ್ದು ನಾಲ್ಕು ಜನ..!
ಅರಣ್ಯ ಇಲಾಖೆಯ ಅಪ್ಪಣೆಯಿಲ್ಲದೇ ಯಾಕೆ ಗದ್ದುಗೆ ನಿರ್ಮಿಸ್ತಿದಿರಾ ಅಂತಾ ಪ್ರಶ್ನೆ ಮಾಡಿದ್ದ ಕಾರಣಕ್ಕಾಗಿ ಅವಾಚ್ಯವಾಗಿ ನಿಂದಿಸಿದ್ದಾರೆ, ಎಳೆದಾಡಿದ್ದಾರೆ, ಹಲ್ಲೆಮಾಡಲು ಮುಂದಾಗಿದ್ದಾರೆ. ಅಲ್ಲಿ ಆ ದುರುಳರ ಮದ್ಯೆ ಏಕಾಂಗಿಯಾಗಿದ್ದ ಬಡಪಾಯಿ ಅರಣ್ಯ ಸಿಬ್ಬಂದಿ, ತನ್ನ ಜಂಘಾಬಲವನ್ನೇಲ್ಲ ಪ್ರಯೋಗಿಸಿ ಅವ್ರೊಂದಿಗೆ ಹೋರಾಡಿದ್ದಾರೆ. ಆ ಹೊತ್ತಲ್ಲಿ ಕೆಲವು ಪ್ರಜ್ಞಾವಂತ ಮನಸ್ಥಿತಿಯವರು ಬಂದು ನಡೆಯಬಹುದಾಗಿದ್ದ ಭಯಂಕರತೆಯನ್ನು ಕೊಂಚ ಥಂಡಾ ಮಾಡಿದ್ದಾರೆ. ಆದ್ರೆ, ಆ ಭಯಂಕರರ ಎಗರಾಟ ಮಾತ್ರ ನಿಂತೇ ಇಲ್ಲ. ಸರ್ಕಾರಿ ಸೇವೆಯಲ್ಲಿದ್ದವರ ಮೇಲೆ ಇನ್ನಿಲ್ಲದಂತೆ ಕೊಸರಾಡಿದ್ದಾರೆ, ಅವಾಚ್ಯವಾಗಿ ಬೈದಾಡಿದ್ದಾರೆ, ಹಲ್ಲೆಗೂ ಮುಂದಾಗಿದ್ದಾರೆ. ಇನ್ನೇನು ಆ ಹೊತ್ತಲ್ಲಿ ಯಾರೂ ಇಲ್ಲದೇ ಇದ್ದಿದ್ರೆ ಪಾಪ ಆ ಬಡಪಾಯಿ ಇವತ್ತು ನೆನಪು ಮಾತ್ರ ಅನ್ನುವಂತಾಗುತ್ತಿತ್ತೇನೋ. ಯಾಕಂದ್ರೆ ಅವ್ರ ಎಗರಾಟದ ಶೈಲಿಯೇ ಹಾಗಿತ್ತು. ಅದು ಥೇಟು ಭಂಡ ರೌಡಿಸಂ.
“ಮಾಫಿ” ವೀರರು..!
ಸರಿ, ಇಷ್ಟೇಲ್ಲ ಎಗರಾಟಗಳು ನಡೆದ ಘಟನೆಯ ಸಂಪೂರ್ಣ ವೃತ್ತಾಂತವನ್ನು ಆ ಬಡಪಾಯಿ ನೌಕರ ತನ್ನ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ದುರಂತ ಅಂದ್ರೆ ಇಷ್ಟೇಲ್ಲ ನಡೆದ್ರೂ ಆ ಅಧಿಕಾರಿಗಳು ಮಾತ್ರ ಇದುವರೆಗೂ ಆ ಬಗ್ಗೆ ಚಕಾರ ಎತ್ತಿಲ್ಲ. ಬದಲಾಗಿ ಮಾಫಿ ಮಾಡಿಸೋಕೆ ಓಡಾಡಿದ್ದಾರೆ. ಲೋಕಲ್ ಅಧಿಕಾರಿಗಳು ಕೊನೆಗೆ ರಾಜೀ ಪಂಚಾಯತಿನೂ ಮಾಡಿ ಇಡೀ ಪ್ರಕರಣವನ್ನು ಹಾಗೇ ಅರಣ್ಯದ ಮಣ್ಣೊಳಗೆ ಮಣ್ಣಾಗಿಸಿದ್ದಾರೆ ಅನ್ನೊ ಮಾಹಿತಿ ಲಭ್ಯವಾಗಿದೆ.
(ಗುಂಜಾವತಿಯಲ್ಲಿ ಅರಣ್ಯ ರಕ್ಷಕನ ಮೇಲೆ ನಡೆದ ಗೂಂಡಾಗಿರಿಯ ಸಂಪೂರ್ಣ ವಿಡಿಯೊ ನೋಡಲು ಈ ಕೆಳಗಿನ ಲಿಂಕ್ ಓಪನ್ ಮಾಡಿ👇)
ಇದು ಸರಿನಾ ಅಧಿಕಾರಿಗಳೇ..?
ನಿಮ್ಮ ಇಲಾಖೆಯ ಸಿಬ್ಬಂದಿಯೊಬ್ಬ ಕರ್ತವ್ಯದಲ್ಲಿ ಇರುವಾಗಲೇ ಅವರ್ಯಾರೋ ಎಗರಾಡಿದ್ರೆ ಅದನ್ನ ನೋಡ್ಕೊಂಡು ಸುಮ್ನೆ ಉಳಿತಿರಾ..? ಇವತ್ತು ಜಸ್ಟ್ ಎಳೆದಾಡಿದ್ದಾರೆ ಹೀಗೇ ಬಿಟ್ರೆ ನಾಳೆ ನೀವಿರೋ ಆಫೀಸಿಗೇ ನುಗ್ಗಲ್ಲ ಅನ್ನೋಕೆ ಏನು ಗ್ಯಾರಂಟಿ ಇದೆ..? ಅಷ್ಟಕ್ಕೂ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದು, ಹಾಗೇಲ್ಲ ಸರ್ಕಾರಿ ಸೇವೆಯಲ್ಲಿರೊ ವ್ಯಕ್ತಿಗೆ ಅವಾಚ್ಯವಾಗಿ ಒದರಾಡಿದ್ದು ನಿಮಗೆ ಮಾಫಿನಾ..? ತಕ್ಷಣವೇ ಕ್ರಮ ಕೈಗೊಳ್ಳಿ ಇಲ್ಲವಾದಲ್ಲಿ ಅಮಾಯಕ, ಬಡ ಸಿಬ್ಬಂದಿಗಳು ನಮಗ್ಯಾಕೆ ಬೇಕು ಉಸಾಬರಿ ಅನ್ನೊಮಟ್ಟಿಗೆ ಬರತ್ತೆ. ಹಾಗಾದ್ರೆ ಅರಣ್ಯ ರಕ್ಷಣೆಯ ಗತಿಯೇನು..? ನೀವೇ ಯೋಚಿಸಿ..!