ಖಾಸಗಿ ಫೈನಾನ್ಸ್ ಉದ್ಘಾಟನೆಗೆ ಹೋಗಿದ್ದ ಮತ್ತೋರ್ವ ಶಿಕ್ಷಕಗೂ ನೋಟೀಸ್ ಜಾರಿ..!

ಮುಂಡಗೋಡಿನ ಖಾಸಗಿ ಫೈನಾನ್ಸ್ ಉದ್ಘಾಟನೆಯ ರಿಬ್ಬನ್ ಕಟ್ ಮಾಡಲು, ಸರ್ಕಾರದ ಕೆಲಸ ಬಿಟ್ಟು ಹೋಗಿದ್ದ ಮತ್ತೋರ್ವ ಖಾಸಗಿ ಅನುದಾನಿತ ಶಿಕ್ಷಕನಿಗೂ ಬಿಇಓ ಮೇಡಂ ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದಾರೆ. ಅಸಲು, ಪಬ್ಲಿಕ್ ಫಸ್ಟ್ ನ್ಯೂಸ್ ನಲ್ಲಿ ಸುದ್ದಿ ಪ್ರಸಾರ ಆದ ತಕ್ಷಣವೇ, ಅಂದ್ರೆ ಗುರುವಾರ ಮಾರ್ಚ್ 20 ರಂದೇ ನೋಟೀಸು ಜಾರಿ ಮಾಡಿರೋ ಬಿಇಓ ಮೇಡಮ್ಮು, ಮೂರು ದಿನಗಳೊಳಗಾಗಿ ಉತ್ತರ ನೀಡಿ ಅಂತಾ ನೋಟೀಸಿನಲ್ಲಿ ತಿಳಿಸಿದ್ದಾರೆ.

ಅಂದಹಾಗೆ, ಮುಂಡಗೋಡಿನ ಪ್ರತಿಷ್ಠಿತ ಲೊಯೊಲಾ ಸಂಸ್ಥೆಯಲ್ಲಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಸನ್ಮಾನ್ಯ ಶಿಕ್ಷಕರಿಗೆ ನೋಟೀಸು ಜಾರಿಯಾಗಿದೆ. ಜೊತೆಗೆ ಲೊಯೊಲಾ ಸಂಸ್ಥೆಯ ಆಡಳಿತ‌ ಮಂಡಳಿಗೂ ಈ ಕುರಿತು ನೋಟೀಸಿನ ಪ್ರತಿ ರವಾನಿಸಲಾಗಿದೆ. ಹೀಗಾಗಿ, ನಾಳೆಯೊಳಗಾಗಿ ನೋಟೀಸಿಗೆ ಸಮರ್ಪಕ ಉತ್ತರ ನೀಡಬೇಕಿರೋದು ಆ ಶಿಕ್ಷಕರ ಕೆಲಸವಾಗಿದೆ. ಹಾಗೆ ಅವ್ರು ನೀಡಿದ ಉತ್ತರದ ಆಧಾರದಲ್ಲಿ ಮುಂದಿನ ಕ್ರಮ ಜರುಗಿಸಲಾಗತ್ತೆ ಅಂತಾ ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

ಕ್ಷೇತ್ರ ಸಮನ್ವಯಾಧಿಕಾರಿ ಉತ್ತರಿಸಿದರೆ..?
ಇನ್ನು, ಖಾಸಗಿ ಫೈನಾನ್ಸ್ ಗಳ ಬಗೆಗೆ ಕಳೆದ ಎರಡು ಮೂರು ತಿಂಗಳುಗಳಿಂದ ರಾಜ್ಯದಲ್ಲಿ ಏನೇನೇಲ್ಲ ಬೆಳವಣಿಗೆಗಳು ಆಗಿದ್ದವು ಅಂತಾ ಎಲ್ಲರಿಗೂ ಗೊತ್ತು. ಖುದ್ದು ಸರ್ಕಾರವೇ ಖಾಸಗಿ ಫೈನಾನ್ಸ್ ಗಳಿಗೆ ಮೂಗುದಾರ ಹಾಕಲು, ಹೊಸ ಕಟ್ಟಳೆಗಳನ್ನು ಜಾರಿ‌ಮಾಡಿತ್ತು. ಇದೇಲ್ಲ ಗೊತ್ತಿದ್ದರೂ, ಅದೇ ಸರ್ಕಾರದ ಅಧಿಕಾರಿಯೊಬ್ಬ ತನ್ನ ಇಲಾಖೆಯಲ್ಲೇ ಕೆಲಸ ಮಾಡುವ ಶಿಕ್ಷಕನೊಂದಿಗೆ ಸೇರಿ, ಸರ್ಕಾರದ ಕೆಲಸದ ಅವಧಿಯಲ್ಲೇ ಖಾಸಗಿ ಫೈನಾನ್ಸ್ ಶಾಖೆಯ ಉದ್ಘಾಟನೆ ಮಾಡ್ತಾರೆ. ಅಂತಂದ್ರೆ, ಯಾರು ತಾನೆ ಸಹಿಸಲು ಸಾಧ್ಯ ಹೇಳಿ..? ಈ ಕಾರಣಕ್ಕಾಗೇ, ಪಬ್ಲಿಕ್ ಫಸ್ಟ್ ನ್ಯೂಸ್ ನಲ್ಲಿ ಸುದ್ದಿ ಪ್ರಸಾರ ಆಗ್ತಿದ್ದಂತೆ, ಅವತ್ತೇ ಬಿಇಓ ಮೇಡಂ ಕಾರಣ ಕೇಳಿ ನೋಟೀಸು ಜಾರಿ ಮಾಡಿದ್ದರು. ಮೂರು ದಿನಗಳೊಳಗಾಗಿ ಉತ್ತರಿಸುವಂತೆ ಕಟ್ಟಾಜ್ಞೆ ಹೊರಡಿಸಿದ್ದರು. ಆದ್ರೆ, ಹಾಗೆ ನೋಟೀಸು ಜಾರಿ ಮಾಡಿ ಮೂರು ದಿನಗಳು ಕಳೆದಿದೆ. ಸಮನ್ವಯಾಧಿಕಾರಿ ಸಾಹೇಬ್ರು ನೋಟೀಸಿಗೆ ಉತ್ತರಿಸಿದ್ರಾ..? ಗೊತ್ತಿಲ್ಲ. ಇಲಾಖೆಯ ಹಿರಿಯ ಅಧಿಕಾರಿಗಳು, ಶಿರಸಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಸಾಹೇಬ್ರು, ಬೆಳಗಾವಿ ವಿಭಾಗದ ಜೆಡಿ ಸಾಹೇಬ್ರು ಈ ಬಗ್ಗೆ ಗಮನಿಸಬೇಕಿದೆ.

ಶಿಕ್ಷಣ ಸಚಿವರ ಗಮನಕ್ಕೂ..?
ನಿಜ ಅಂದ್ರೆ, ಈ ಸುದ್ದಿ ಪ್ರಸಾರ ಆದ ಕೆಲವೇ ಹೊತ್ತಲ್ಲಿ, ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ಕಚೇರಿಗೂ ಈ ವಿಷಯ ತಲುಪಿದೆ. ಸ್ಥಳೀಯ ಅಧಿಕಾರಿಗಳು ಅದ್ಯಾವ ಕ್ರಮ ಕೈಗೊಳ್ತಾರೆ ಅನ್ನೋದನ್ನ ಸೂಕ್ಷ್ಮವಾಗಿ ಗಮನಿಸಲಾಗ್ತಿದೆ. ಏನಾದ್ರೂ ಎಪರಾ ತಪರಾ ಆದ್ರೆ ಖಂಡಿತ ಶಿಕ್ಷಣ ಸಚಿವರೇ ಖುದ್ದು ಕ್ರಮಕ್ಕೆ ಸೂಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಕುರಿತು ಈಗಾಗಲೇ ಸಚಿವರ ಕಾರ್ಯಾಲಯದಿಂದ ಸಂಬಂಧಿಸಿದ ಹಿರಿಯ ಅಧಿಕಾರಿಯೊಬ್ಬರ ಜೊತೆ ಚರ್ಚೆ ನಡೆದಿದ್ದು, ಎಲ್ಲವನ್ನೂ ಗಮನಿಸಲಾಗ್ತಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಅದೇನೆ ಆಗಲಿ, ಸರ್ಕಾರದ ಕೆಲಸದ ಅವಧಿಯಲ್ಲಿ ಅದ್ಯಾರದ್ದೋ ಖಾಸಗಿ ಫೈನಾನ್ಸ್ ಉದ್ಘಾಟನೆ ಮಾಡಲು ಹೋಗಿದ್ದವರ ವಿರುದ್ಧ, ಕಠಿಣ ಕ್ರಮದ ಅವಶ್ಯಕತೆ ಇದೆ ಅಂತಾ ಸಾರ್ವಜನಿಕರು ಆಗ್ರಹಿಸ್ತಿದಾರೆ. ಹೀಗಾಗಿ, ಇಲಾಖೆಯ ಹಿರಿಯ ಅಧಿಕಾರಿಗಳು ಸಮಗ್ರ ತನಿಖೆ ನಡೆಸಿ ಸೂಕ್ತ ಕ್ರಮ ತಕ್ಷಣವೇ ತೆಗೆದುಕೊಳ್ಳಬೇಕಿದೆ.

error: Content is protected !!