ಮುಂಡಗೋಡ ತಾಲೂಕಿನಕೆಲವೆಡೆ ಮಂಗಳವಾರ ಸುರಿದ ಭಾರೀ ಮಳೆ ಗಾಳಿ ಅವಾಂತರ ಸೃಷ್ಟಿಸಿದೆ. ಮೈನಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಿಡ್ಲುಗುಂಡಿ ಕಿರಿಯ ಪ್ರಾಥಮಿಕ ಶಾಲೆಯ ಎರಡು ಕೊಠಡಿಗಳ ಮೇಲ್ಚಾವಣಿಗಳು ಹಾರಿ ಹೋಗಿವೆ. ಶಾಲಾ ಸಮಯದಲ್ಲೇ ವಿದ್ಯಾರ್ಥಿಗಳು ಶಾಲೆಯಲ್ಲಿ ಇದ್ದಾಗಲೇ ದುರಂತ ಸಂಭವಿಸಿದ್ದು ಅದೃಷ್ಟವಶಾತ್ ವಿದ್ಯಾರ್ಥಿಗಳಿಗೆ ಏನಂದ್ರೆ ಏನೂ ತೊಂದರೆ ಆಗಿಲ್ಲ.
ಮಂಗಳವಾರ ಮದ್ಯಾನ ಊಟದ ಸಮಯದಲ್ಲಿ ಭಾರಿ ಮಳೆಗಾಳಿ ಶುರುವಾಗಿದೆ. ಇದೇ ಸಮಯದಲ್ಲಿ ಸಿಡ್ಲಗುಂಡಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಮಳೆ ಬಂದ ಕಾರಣಕ್ಕೆ ಒಂದೇ ಕೊಠಡಿಯಲ್ಲಿ ಸೇರಿದ್ದಾರೆ. ಸುಮಾರು 45 ಜನ ವಿದ್ಯಾರ್ಥಿಗಳು ಇರುವ ಶಾಲೆಯಲ್ಲಿ. ಎರಡು ಕೊಠಡಿಗಳ ಮೇಲ್ಚಾವಣಿ ನೋಡ ನೋಡುತ್ತಲೇ ಹಾರಿ ಬಿದ್ದಿದೆ. ಹೀಗಾಗಿ, ಸ್ಥಳದಲ್ಲಿ ಕೆಲಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿದೆ.
ಘಟನೆ ಮಾಹಿತಿ ತಿಳಿದ ಮೈನಳ್ಳಿ ಗ್ರಾಪಂ ಪಿಡಿಒ ಮಂಜುನಾಥ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಂತ್ರ ಜಿಪಂ ಇಂಜಿನೀಯರ್ ಪ್ರದೀಪ್ ಭಟ್ ಭೇಟಿ ನೀಡಿದ್ದಾರೆ.