Accident News:ತುಮಕೂರಿನಿಂದ ಪ್ರವಾಸಕ್ಕೆ ತೆರಳಿದ್ದ ಬಿಜೆಪಿ ಮಾಜಿ ತಾಲೂಕು ಅಧ್ಯಕ್ಷ ಸೇರಿ ಮೂವರು ಕಾರು ಅಪಘಾತದಲ್ಲಿ ಸಾವು ಕಂಡಿದ್ದಾರೆ. ಆಂಧ್ರದ ಕರ್ನೂಲು ಬಳಿ ತೆರಳುವಾಗ ಕಾರು ಅಪಘಾತವಾಗಿ, ಮೂವರು ಸ್ಥಳದಲ್ಲೆ ಸಾವು ಕಂಡಿದ್ದಾರೆ.
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕೆಂಕೆರೆ ಗ್ರಾಮದ ನಿವಾಸಿಗಳಾದ ಬಿಜೆಪಿ ತಾಲೂಕು ಮಾಜಿ ಅಧ್ಯಕ್ಷ ನವೀನ್(48), ಖಜಾಂಚಿ ಸಂತೋಷ್(35), ಲೋಕೇಶ್ (38) ಮೃತ ದುರ್ದೈವಿಗಳು.
Rain Alert News: ಉತ್ತರ ಕನ್ನಡ ಸೇರಿ ಮುಂದಿನ 3 ದಿನ ಮಳೆಯ ಮುನ್ಸೂಚನೆ..! ಯೆಲ್ಲೊ ಅಲರ್ಟ್
ಆಂಧ್ರಪ್ರದೇಶದ ಕಡೆಗೆ ಪ್ರವಾಸಕ್ಕೆ ತೆರಳಿದ್ದ ನವೀನ್, ಸಂತೋಷ್, ಹಾಗೂ ಲೋಕೇಶ್ ಸೇರಿದಂತೆ ಒಟ್ಟು 6 ಜನ, ಕಾರಿನಲ್ಲಿ ಆಂಧ್ರದ ಕರ್ನೂಲು ಬಳಿ ತೆರಳುವಾಗ ಕಾರು ಅಪಘಾತ. ಅಪಘಾತದಲ್ಲಿ ಮೂವರು ಸ್ಥಳದಲ್ಲೆ ಸಾವು ಕಂಡಿದ್ದಾರೆ.