Death News: ವೈಜಿಗುಡ್ಡ ಜಲಾಶಯದಲ್ಲಿ ಮುಳುಗಿ ಮೂವರು ಯುವತಿಯರು ದಾರುಣ ಸಾವು..!

ರಾಮನಗರ: ಜಿಲ್ಲೆಯ ಮಾಗಡಿ ತಾಲೂಕಿನ ವೈಜಿ ಗುಡ್ಡ ಜಲಾಶಯದ ಹಿನ್ನೀರಿನಲ್ಲಿ ಮೂವರು ಯುವತಿಯರು ಮುಳುಗಿದ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಅವರ ಜತೆಗಿದ್ದ ನಾಲ್ವರನ್ನು ರಕ್ಷಣೆ ಮಾಡಲಾಗಿದೆ ಎಂದು ಹೇಳಲಾಗಿದೆ. ಜಲಾಶಯದ ಹಿನೀರಿನಲ್ಲಿ ಮುಳುಗಿದವರನ್ನು ಬೆಂಗಳೂರು ಮೂಲದ ಭಾರ್ಗವಿ (22) ಮಧು (25) ಹಾಗೂ ರಮ್ಯಾ (20) ಎಂದು ಗುರುತಿಸಲಾಗಿದೆ.

ಹಬ್ಬದ ಹಿನ್ನೆಲೆಯಲ್ಲಿ ವೈ.ಜಿ. ಗುಡ್ಡ ಗ್ರಾಮದ ಸಂಬಂಧಿಕರ ಮನೆಗೆ ಯುವತಿಯರು ಬಂದಿದ್ದು, ಮಧ್ಯಾಹ್ನ ಮನೆಯಿಂದ ಏಳು ಮಂದಿ ಸಮೀಪದ ಜಲಾಶಯಕ್ಕೆ ಭೇಟಿ ನೀಡಿದ್ದರು. ಹಿನ್ನೀರಿಗೆ ಇಳಿದು ಆಟವಾಡುತ್ತಿದ್ದ ಯುವತಿಯರ ಪೈಕಿ, ಒಬ್ಬರು ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿದ್ದಾರೆ. ಆಗ ಯುವತಿಯನ್ನು ರಕ್ಷಿಸಲು ಇಬ್ಬರು ಮುಂದಾಗಿದ್ದಾರೆ. ಆಗ ಅವರು ಸಹ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿದ್ದಾರೆ.

ಉಳಿದವರು ನೆರವಿಗಾಗಿ ಕೂಗಿಕೊಂಡಿದ್ದಾರೆ. ಸ್ಥಳೀಯರು ಬರುವಷ್ಟರಲ್ಲಿ ಮೂವರು ಯುವತಿಯರು ನೀರು ಪಾಲಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ತೆರಳಿ ಮೂವರು ಯುವತಿಯರನ್ನು ಶವವನ್ನು ನೀರಿನಿಂದ ಮೇಲಕ್ಕೆತ್ತಿ, ಮಾಗಡಿ ಸಾರ್ವಜನಿಕ ಆಸ್ಪತ್ರೆಗೆ ಒಯ್ಯಲಾಗಿದೆ. ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!