Stock Market Highlights : ಭಾರತೀಯ ಷೇರು ಮಾರುಕಟ್ಟೆಯು ಸೋಮವಾರ ರೆಡ್ ಮಾರ್ಕ್‌ನಲ್ಲಿ ಮುಚ್ಚಿದ್ದು, ಸತತ ಎರಡನೇ ದಿನ ನಷ್ಟಕ್ಕೆ ಗುರಿಯಾಗಿದೆ. ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಸೆನ್ಸೆಕ್ಸ್ 271 ಪಾಯಿಂಟ್ಸ್ ಇಳಿಕೆಗೊಂಡಿದ್ದು, ನಿಫ್ಟಿ ಸೂಚ್ಯಂಕವು 24950 ಗಡಿಯ ಮಾರ್ಕ್‌ನಲ್ಲಿ ಕೊನೆಗೊಂಡಿದೆ. ದಿನದ ವಹಿವಾಟಿನ ಟಾಪ್ ಗೇನರ್ ಹಾಗೂ ಲೂಸರ್ಸ್ ಮಾಹಿತಿ ಇಲ್ಲಿದೆ.
ದೇಶೀಯ ಷೇರು ಮಾರುಕಟ್ಟೆಯು ಸೋಮವಾರ ಕುಸಿತಕ್ಕೆ ಒಳಗಾಗಿದೆ. ಪ್ರಮುಖ ಸೂಚ್ಯಂಕಗಳಾದ ಸೆನ್ಸೆಕ್ಸ್ 270 ಪಾಯಿಂಟ್ಸ್ ಇಳಿಕೆಗೊಂಡು 82,059 ಮಾರ್ಕ್‌ನಲ್ಲಿ ಕೊನೆಗೊಂಡಿದೆ. ಇದೇ ವೇಳೆಯಲ್ಲಿ ನಿಫ್ಟಿ ಸೂಚ್ಯಂಕವು 74 ಪಾಯಿಂಟ್ಸ್ ಇಳಿಕೆಯಾಗಿ 24,945 ಮಾರ್ಕ್‌ನಲ್ಲಿ ಮುಚ್ಚಿದೆ. ಬಿಎಸ್‌ಇನಲ್ಲಿ ಸುಮಾರು 2,524 ಷೇರುಗಳು ಏರಿಕೆಗೊಂಡಿದ್ದು, 1,571 ಷೇರುಗಳು ಕುಸಿತಕ್ಕೆ ಒಳಗಾಗಿವೆ ಹಾಗೂ 178 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಜಾಗತಿಕ ರೇಟಿಂಗ್ ಸಂಸ್ಥೆ ಮೂಡಿಸ್ ಯುಎಸ್ ಆರ್ಥಿಕತೆ ಕುರಿತಾಗಿ ರೇಟಿಂಗ್ ಡೌನ್‌ಗ್ರೇಡ್ ಮಾಡಿದ್ದರಿಂದ ಐಟಿ ಸ್ಟಾಕ್‌ಗಳು ಕುಸಿತಕ್ಕೆ ಒಳಗಾಗಿವೆ. ಪಿಎಸ್‌ಯು ಬ್ಯಾಂಕ್ಸ್, ರಿಯಾಲ್ಟಿ ಸ್ಟಾಕ್‌ಗಳು ಔಟ್‌ಪರ್ಫಾಮೆನ್ಸ್ ನೀಡಿವೆ.
ಟಾಪ್ ಗೇನರ್ ಮತ್ತು ಲೂಸರ್ಸ್
ನಿಫ್ಟಿ50 ಸೂಚ್ಯಂಕದಲ್ಲಿ ಟಾಪ್ ಗೇನರ್ ಹಾಗೀ ಬಜಾಜ್ ಆಟೋ, ಶ್ರೀರಾಮ್ ಫೈನಾನ್ಸ್, ಈಚರ್ ಮೋಟಾರ್ಸ್, ಹೀರೋ ಮೊಟೊಕಾರ್ಪ್, ಪವರ್ ಗ್ರಿಡ್ ಕಾರ್ಪೊರೇಷನ್ ಸೇರಿವೆ. ಇದೇ ವೇಳೆಯಲ್ಲಿ ಎಟರ್ನಲ್, ಗ್ರೇಸಿಯಂ ಇಂಡಸ್ಟ್ರೀಸ್, ಇನ್ಫೋಸಿಸ್, ಟಾಟಾ ಕನ್ಸೂಮರ್ ಪ್ರಾಡಕ್ಟ್ಸ್ ಲಿಮಿಟೆಡ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಕುಸಿತಗೊಂಡಿವೆ.
Accident News: ಕಾರ್ ಅಪಘಾತ, ಪ್ರವಾಸಕ್ಕೆ ತೆರಳಿದ್ದ BJP ತಾಲೂಕಾ ಮಾಜಿ ಅಧ್ಯಕ್ಷ ಸೇರಿ ಮೂವರು ದುರಂತ ಸಾವು..!
ಸೆನ್ಸೆಕ್ಸ್‌ನ 30 ಷೇರುಗಳಲ್ಲಿ 21 ಷೇರುಗಳು ಕುಸಿದವು. ಜೊಮ್ಯಾಟೊ ಶೇ. 3 ರಷ್ಟು ಕುಸಿದವು. ಇನ್ಫೋಸಿಸ್, ಟೆಕ್ ಮಹೀಂದ್ರಾ ಮತ್ತು ಟಿಸಿಎಸ್ ಶೇ. 2 ರಷ್ಟು ಕುಸಿದವು. ಪವರ್ ಗ್ರಿಡ್, ಎನ್‌ಟಿಪಿಸಿ ಮತ್ತು ಬಜಾಜ್ ಫೈನಾನ್ಸ್ ಶೇ. 1.3 ರಷ್ಟು ಕುಸಿದವು.
ನಿಫ್ಟಿಯ 50 ಷೇರುಗಳಲ್ಲಿ 34 ಷೇರುಗಳು ಕುಸಿದವು. ಎನ್‌ಎಸ್‌ಇಯ ಐಟಿ ವಲಯ ಶೇ. 1.37 ರಷ್ಟು ಹೆಚ್ಚು ಕುಸಿದವು. ಮಾಧ್ಯಮ ಮತ್ತು ತೈಲ ಮತ್ತು ಅನಿಲ ಕೂಡ ಸ್ವಲ್ಪ ಮಟ್ಟಿಗೆ ಕುಸಿದವು. ಆದರೆ, ರಿಯಾಲ್ಟಿ ಶೇ. 2.23 ರಷ್ಟು, ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಶೇ. 1.48 ರಷ್ಟು ಮತ್ತು ಹಣಕಾಸು ಸೇವೆಗಳು ಶೇ. 0.62 ರಷ್ಟು ಏರಿಕೆ ಕಂಡವು.
52 ವಾರಗಳ ಗರಿಷ್ಠ ಮಟ್ಟಕ್ಕೇರಿದ ಷೇರುಗಳು.!
ಐಸಿಐಸಿಐ ಬ್ಯಾಂಕ್ ಷೇರುಗಳು 52 ವಾರಗಳ ಗರಿಷ್ಠ ಮಟ್ಟಕ್ಕೇರಿದ್ದು 1,459 ರೂಪಾಯಿಗೆ ಮುಚ್ಚಿದೆ. ಇದೇ ವೇಳೆಯಲ್ಲಿ ಭಾರತ್ ಎಲೆಕ್ಟ್ರಾನಿಕ್ಸ್ 373 ರೂಪಾಯಿ, ಡೆಲಿವರಿ, ಪರಾಸ್ ಡಿಫೆನ್ಸ್ ಹಾಗೂ HEG ಕಳೆದ ಐದು ಸೆಷನ್‌ನಲ್ಲಿ ಟಾಪ್ ಗೇನರ್‌ಗಳಾಗಿವೆ.
ಕಳೆದ ವಾರದ ಕೊನೆಯ ವಹಿವಾಟಿನ ದಿನವಾದ ಅಂದರೆ ಶುಕ್ರವಾರ, ಮೇ 16 ರಂದು ಮಾರುಕಟ್ಟೆ ಕುಸಿತ ಕಂಡಿದೆ. ಸೆನ್ಸೆಕ್ಸ್ 200 ಪಾಯಿಂಟ್‌ಗಳಷ್ಟು ಕುಸಿದು 82,330 ಕ್ಕೆ ಮುಕ್ತಾಯಗೊಂಡಿದೆ. ಅದೇ ಸಮಯದಲ್ಲಿ, ನಿಫ್ಟಿ ಕೂಡ 42 ಪಾಯಿಂಟ್‌ಗಳಷ್ಟು ಕುಸಿದಿದೆ. ಅದು 25,019 ಕ್ಕೆ ಮುಕ್ತಾಯಗೊಂಡಿದೆ.