IPL 2025 RCB News: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18ನೇ ಆವೃತ್ತಿಯ ಐಪಿಎಲ್ನಲ್ಲಿ ಪ್ಲೇಆಫ್ ತಲುಪಿದೆ. ನಿನ್ನೆ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲುವು ಸಾಧಿಸುತ್ತಿದ್ದಂತೆ ಆರ್ಸಿಬಿ ಪ್ಲೇಆಫ್ಗೆ ಖಚಿತ ಗೊಂಡಿದೆ ಇದರ ಜೊತೆ ಪಂಜಾಬ್ ಕಿಂಗ್ಸ್ ತಂಡವೂ ಕ್ವಾಲಿಫೈ ಆಗಿದೆ.
ಸದ್ಯ ಆರ್ಸಿಬಿಯ 12 ಪಂದ್ಯಗಳು ಮುಕ್ತಾಯಗೊಂಡಿದ್ದು ಇದರಲ್ಲಿ 8 ಪಂದ್ಯಗಳನ್ನು ಬೆಂಗಳೂರು ತಂಡ ಗೆದ್ದುಕೊಂಡಿದೆ. ಒಂದು ಪಂದ್ಯವೂ ರದ್ದುಗೊಂಡಿದೆ. ಸದ್ಯ ಆರ್ಸಿಬಿ 17 ಅಂಕಗಳನ್ನು ಪಡೆದು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇದೀಗ ಮುಂದಿನ ಪಂದ್ಯದಲ್ಲಿ ಸನ್ ರೈಸರ್ಸ್ ವಿರುದ್ಧ ಗೆದ್ದು ಅಗ್ರ ಸ್ಥಾನಕ್ಕೆ ತಲುಪಲು ಯೋಜನೆ ರೂಪಿಸಿಕೊಂಡಿದೆ.
ಲೋಕಾಯುಕ್ತ ಅಧಿಕಾರಿಗಳ ನಾಳೆಯ (ಮೇ 20 ರ) ಮುಂಡಗೋಡ ಕಾರ್ಯಕ್ರಮ ಮೇ. 28ಕ್ಕೆ ಮುಂದೂಡಿಕೆ..!
ಒಂದೆಡೆ ಆರ್ಸಿಬಿ ಪ್ಲೇಆಫ್ ತಲುಪಿದ ಖುಷಿಯಲ್ಲಿರುವ ಫ್ಯಾನ್ಸ್ಗಳಿಗೆ ಮತ್ತೊಂದು ಶುಭಸುದ್ದಿ ಸಿಕ್ಕಿದೆ. ಹೌದು ವಿಶ್ವ ಟೆಸ್ಟ್ ಚಾಂಪಿಯನ್ ಹಿನ್ನೆಲೆ ತಂಡದ ಸ್ಟಾರ್ ಬೌಲರ್ ಲುಂಗಿ ಎಂಗಿಡಿ ಸ್ವದೇಶಕ್ಕೆ ಮರಳಲಿದ್ದಾರೆ. ಇದರಿಂದಾಗಿ ಮುಂದಿನ ಪಂದ್ಯಕ್ಕೆ ಮತ್ತೊಬ್ಬ ಅಪಾಯಕಾರಿ ಬೌಲರ್ ಅನ್ನು ತಂಡಕ್ಕೆ ಕರೆತರಲಾಗಿದೆ.
IPL 2025 RCB News:
ಜಿಂಬಾಬ್ವೆ ತಂಡದ ಸ್ಟಾರ್ ಆಟಗಾರನಾಗಿರುವ ಬ್ಲೆಸ್ಸಿಂಗ್ ಮುಜರ್ಬಾನಿ ಆರ್ಸಿಬಿ ಪರ ಕಣಕ್ಕಿಳಿಯಲಿದ್ದಾರೆ. ವೇಗದ ಬೌಲರ್ ಆಗಿರುವ ಇವರು ಟೆಸ್ಟ್ ಏಕದಿನ, ಟಿ20 ಆಡಿರುವ ಅನುಭವ ಹೊಂದಿದ್ದಾರೆ. ಅದರಲ್ಲೂ ಟೆಸ್ಟ್ ಸ್ವರೂಪದಲ್ಲಿ ಕೇವಲ 12 ಪಂದ್ಯಗಳ 19 ಇನ್ನಿಂಗ್ಸ್ಗಳಲ್ಲಿ 51 ವಿಕೆಟ್ ಉರುಳಿಸಿದ್ದಾರೆ. ಇದಲ್ಲದೇ 55 ಏಕದಿನ ಪಂದ್ಯಗಲಲ್ಲಿ 69 ಮತ್ತು ಟಿ- 20 ಸ್ವರೂಪದಲ್ಲಿ 78 ವಿಕೆಟ್ ಪಡೆದಿದ್ದಾರೆ. ಇದೀಗ ಆರ್ಸಿಬಿ ಸೇರಿದ್ದು ತಂಡದ ಬೌಲಿಂಗ್ ಲೈನ್ – ಅಪ್ಗೆ ಮತ್ತೆ ಬಲಬಂದಂತಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇನ್ನೂ ಎರಡು ಲೀಗ್ ಪಂದ್ಯಗಳನ್ನು ಆಡುವುದು ಬಾಕಿ ಇದೆ. ಮೇ. 23 ರಂದು ಸನ್ ರೈಸರ್ಸ್ ವಿರುದ್ಧ ಆಡಿದರೇ, ಮೇ 27ಕ್ಕೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ದ ಸೆಣಸಲಿದೆ. ಈ ಎರಡೂ ಪಂದ್ಯಗಳನ್ನು ಗೆದ್ದರೇ ಆರ್ಸಿಬಿ ಅಗ್ರ ಎರಡರಲ್ಲಿ ಸ್ಥಾನ ಪಡೆಯಲಿದೆ. ಇದರೊಂದಿಗೆ ತಂಡ ಕ್ವಾಲಿಫೈರ್ ಪಂದ್ಯದಲ್ಲಿ ಗೆಲುವು ಸಾಧಿಸಿದರೇ ನೇರವಾಗಿ ಫೈನಲ್ಗೆ ಪ್ರವೇಶ ಪಡೆಯಲಿದೆ. ಒಂದು ವೇಳೆ ಸೋತರು ಮತ್ತೊಂದು ಅವಕಾಶ ಇರಲಿದೆ. ಈ ಬಾರಿ ಆರ್ಸಿಬಿ ಕಪ್ ಗೆಲ್ಲುವ ಫೆವರೀಟ್ ತಂಡಗಳ ಪೈಕಿ ಒಂದಾಗಿದೆ.