Gold Price Today: ಕಳೆದ ವಾರ ಭಾರೀ ಇಳಿಕೆಯ ನಂತರ ವೀಕೆಂಡ್‌ನಲ್ಲಿ ಸ್ಥಿರವಾಗಿದ್ದ ಚಿನ್ನದ ಬೆಲೆ ಈ ವಾರ ಮೊದಲ ದಿನವೇ ಸ್ವಲ್ಪ ಏರಿಕೆ ಕಂಡಿದೆ. ಅಪರಂಜಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ₹380 ಏರಿಕೆಯಾಗಿದೆ. ಬೆಳ್ಳಿ ಬೆಲೆ ಕೂಡ ಕೆಜಿಗೆ ₹1000 ಜಿಗಿತ ಕಂಡಿದೆ. ಚಿನ್ನದ ಬೆಲೆ ಏರಿಕೆ ಕಾರಣಗಳೇನು? ಪ್ರಸ್ತತ ಬೆಂಗಳೂರಲ್ಲಿ ಚಿನ್ನ- ಬೆಳ್ಳಿ ಬೆಲೆ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.
ಕಳೆದ ವಾರ ಭಾರೀ ಇಳಿಕೆ ಕಂಡು ವಾರಾಂತ್ಯದಲ್ಲಿ ಸ್ಥಿರವಾಗಿದ್ದ ಚಿನ್ನದ ಬೆಲೆಗಳು ಈ ವಾರ ಮೊದಲ ದಿನವೇ ಸ್ವಲ್ಪ ಏರಿಕೆ ಕಂಡಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮತ್ತೆ ಅನಿಶ್ಚಿತತೆ ಎದುರಾಗಿದ್ದು, ಇದು ಭಾರತೀಯ ಷೇರುಪೇಟೆ ಮೇಲೂ ಪರಿಣಾಮ ಬೀರಿದೆ. ಭಾರತದಲ್ಲಿ ಮದುವೆ ಸೀಸನ್ ಕೂಡ ಇದ್ದು, ಚಿನ್ನದ ಬೇಡಿಕೆ ಹೆಚ್ಚಿದೆ. ಇದೆಲ್ಲ ಕಾರಣದಿಂದ ಚಿನ್ನದ ಬೆಲೆಗಳು ಮತ್ತೆ ಏರಿಕೆಯ ಹಾದಿ ಹಿಡಿದಿದೆ.
ಬೆಂಗಳೂರಲ್ಲಿ ಚಿನ್ನದ ಬೆಲೆ ಎಷ್ಟಿದೆ?
ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆಯ ಹಾದಿ ಹಿಡಿದಿವೆ. ಇಂದು ಸೋಮವಾರ ಬೆಂಗಳೂರಲ್ಲಿ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆಯಲ್ಲಿ ಪ್ರತಿ 10 ಗ್ರಾಂೆ ₹350 ಏರಿಕೆಯಾಗಿದ್ದು, ₹87550ರಲ್ಲಿ ವಹಿವಾಟು ನಡೆಸುತ್ತಿದೆ. ಅಪರಂಜಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ₹380 ಏರಿಕೆಯಾಗಿದ್ದು, ₹95510ರಲ್ಲಿ ವಹಿವಾಟು ನೆಸುತ್ತಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಚಿನ್ನದ ದರ ಪ್ರಸ್ತುತ ಪ್ರತಿ ಔನ್ಸ್‌ಗೆ (31.10 ಗ್ರಾಂ) $3,200 ರ ಆಸುಪಾಸಿನಲ್ಲಿದೆ. ನಿನ್ನೆ ಮೊನ್ನೆ ಅದು $3230 ರಷ್ಟಿತ್ತು. ಬೆಳ್ಳಿ $32.30 ನಲ್ಲಿ ವಹಿವಾಟು ನಡೆಸುತ್ತಿದೆ. ಅದೇ ಸಮಯದಲ್ಲಿ, ಡಾಲರ್ ವಿರುದ್ಧ ರೂಪಾಯಿ ವಿನಿಮಯ ದರವು ₹85.640ರಲ್ಲಿ ವಹಿವಾಟು ನಡೆಸುತ್ತಿದೆ.
ಬೆಳ್ಳಿ ಬೆಲೆ ₹1000 ಏರಿಕೆ..!
ಚಿನ್ನದ ಬೆಲೆ ಜೊತೆಗೆ ಬೆಳ್ಳಿ ಬೆಲೆ ಕೂಡ ಏರಿಕೆಯಾಗಿದೆ. ಬೆಂಗಳೂರಲ್ಲಿ ಇಂದು ಸೋಮವಾರ ಪ್ರತಿ ಕೆಜಿ ಬೆಳ್ಳಿ ಬೆಲೆಯಲ್ಲಿ ₹1000 ಏರಿಕೆಯಾಗಿದ್ದು, ₹98,000 ದಂತೆ ವಹಿವಾಟು ನಡೆಸುತ್ತಿದೆ. ಹೈದರಾಬಾದ್‌ನಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ 1.09 ಲಕ್ಷದಲ್ಲಿ ವಹಿವಾಟು ನಡೆಸುತ್ತಿವೆ.
ಚಿನ್ನದ ಬೆಲೆ ಏರಿಕೆಗೆ ಪ್ರಮುಖ ಕಾರಣಗಳಿವು
1. ಅಮೆರಿಕನ್ ಡಾಲರ್ ಸೂಚ್ಯಂಕ ಇಳಿಕೆ
ಇತ್ತೀಚೆಗೆ ಅಮೆರಿಕನ್ ಡಾಲರ್ ಸೂಚ್ಯಂಕ 0.3% ಇಳಿಕೆಯಾಗಿದ್ದು, ಚಿನ್ನವನ್ನು ಇತರೆ ಕರೆನ್ಸಿಗಳಲ್ಲಿ ಖರೀದಿಸುವವರಿಗೆ ಹೆಚ್ಚು ಆಕರ್ಷಕವಾಗಿಸಿದೆ. ಇದರಿಂದ ಚಿನ್ನದ ಬೇಡಿಕೆ ಹೆಚ್ಚಾಗಿ ಬೆಲೆ ಏರಿಕೆಯಾಗಿದೆ.
2. ಫೆಡ್ ರಿಸರ್ವ್ ಮತ್ತೆ ಬಡ್ಡಿ ಕಡಿತದ ನಿರೀಕ್ಷೆ
ಅಮೆರಿಕದ ಹಣದುಬ್ಬರ ನಿರೀಕ್ಷೆಗಿಂತ ಕಡಿಮೆಯಾಗಿದ್ದು, ಚಿಲ್ಲರೆ ಮಾರಾಟದ ಬೆಳವಣಿಗೆ ನಿಧಾನವಾಗಿದೆ. ಇದರಿಂದ ಫೆಡರಲ್ ರಿಸರ್ವ್ ಮತ್ತೆ ಬಡ್ಡಿದರ ಕಡಿತ ಮಾಡುವ ಸಾಧ್ಯತೆ ಇದೆ ಎಂಬ ನಿರೀಕ್ಷೆ ಇದೆ. ಇದು ಕೂಡ ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ.
3. ಭಾರತದಲ್ಲಿ ಚಿನ್ನದ ಆಮದು ವೆಚ್ಚ ಏರಿಕೆ
ಭಾರತದಲ್ಲಿ ಚಿನ್ನದ ಬಹುಪಾಲು ಆಮದು ಮಾಡಿಕೊಳ್ಳಲಾಗುತ್ತದೆ. ಅಮೆರಿಕನ್ ಡಾಲರ್ ದುರ್ಬಲವಾದಾಗ, ಚಿನ್ನದ ಆಮದು ವೆಚ್ಚ ಹೆಚ್ಚಾಗಿ, ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗುತ್ತದೆ.
4. ಹಬ್ಬ ಮತ್ತು ಮದುವೆ ಸೀಸನ್
ಭಾರತದಲ್ಲಿ ಹಬ್ಬಗಳು ಮತ್ತು ಮದುವೆ ಸೀಸನ್‌ಗಳಲ್ಲಿ ಚಿನ್ನದ ಬೇಡಿಕೆ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಚಿನ್ನ ಖರೀದಿಸುವುದು ಶ್ರೇಷ್ಠವೆಂದು ಪರಿಗಣಿಸಲಾಗುತ್ತದೆ, ಇದರಿಂದ ಬೇಡಿಕೆ ಹೆಚ್ಚಾಗಿ ಬೆಲೆ ಏರಿಕೆಯಾಗುತ್ತದೆ.